ಪದೇ ಪದೇ ಅದೇ ವಿಚಾರದಕ್ಕೆ ತಲೆ ಕೆಡಿಸಿಕೊಂಡ ಮನೆ ಮಂದಿ: ಸೋನು ವಿಡಿಯೋ ಬಗ್ಗೆ ಖಡಕ್ ಆಗಿ ಒಮ್ಮೆಲೇ ಹೇಳಿದ್ದೇನು ಗೊತ್ತೇ??
ಸೋನು ಶ್ರೀನಿವಾಸ್ ಗೌಡ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಸೋನು ಶ್ರೀನಿವಾಸ್ ಗೌಡ ಖಾಸಗಿ ವಿಡಿಯೋ ಒಂದು ವೈರಲ್ ಆಗಿ, ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಈಗ ಸೋನು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಇಂತಹವರನ್ನು ಬಿಗ್ ಬಾಸ್ ಮನೆಗೆ ಕಳಿಸಬೇಕಾ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದೇ ರೀತಿ ಮನೆಯ ಒಳಗಡೆ ಸಹ, ಸೋನು ಖಾಸಗಿ ವಿಡಿಯೋ ಬಗ್ಗೆ ಚರ್ಚೆ ನಡೆದಿದ್ದು, ಇದರ ಬಗ್ಗೆ ಮನೆಯ ಸದಸ್ಯರು ಸೋನುಗೆ ಸಲಹೆಗಳನ್ನು ನೀಡಿದ್ದಾರೆ..ಆದರೆ ಸೋನು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂದು ಗೊತ್ತಿಲ್ಲ.
ಸೋನು ಶ್ರೀನಿವಾಸ್ ಗೌಡ ಖಾಸಗಿ ವಿಡಿಯೋ ಲೀಕ್ ಆಗಿ ವೈರಲ್ ಆಗಿದ್ದ ವಿಚಾರ ಮನೆಯಲ್ಲಿ ಎಲ್ಲರಿಗು ಗೊತ್ತಿಲ್ಲ. ಕೆಲವರಿಗೆ ಗೊತ್ತಿದೆ, ಕೆಲವರಿಗೆ ಗೊತ್ತಿಲ್ಲ, ಹಾಗಾಗಿ ಇದರ ಬಗ್ಗೆ ಮಾತನಾಡಿದ ಸೋನು, ವಿಡಿಯೋ ಲೀಕ್ ಆಗಿ ವೈರಲ್ ಆಗಲು ಕಾರಣ ಎಕ್ಸ್ ಬಾಯ್ ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ. ಆಗ ರೂಪೇಶ್ ಶೆಟ್ಟಿ ಅವರು, ನೀನು ಆಗಲೇ ದೂರು ಕೊಡಬೇಕಿತ್ತು ಎಂದು ಹೇಳುತ್ತಾರೆ, ಅದಕ್ಕೆ ಉತ್ತರ ಕೊಡುವ ಸೋನು, ಎಫ್.ಐ.ಆರ್ ಕೂಡ ಮಾಡಿಸಿದ್ದೀನಿ ಗುರು, ಅವನು ಅಮೆರಿಕಾದಲ್ಲಿದ್ದಾನೆ ಅವನನ್ನ ಹೇಗೆ ಹುಡುಕೋದು ಎಂದು ಹೇಳುತ್ತಾರೆ. ಆಗ ರೂಪೇಶ್ ಅವರು, ನೀವು ಹುಡುಗಿಯ ಯಾಕೆ ಅಷ್ಟು ನಂಬಿಕೆ ಇಟ್ಟುಕೊಳ್ಳುತ್ತೀರಾ.
ಆಗಿದ್ದು ಆಯಿತು, ಈಗ ಬಿಡು, ನೀನು ಕ್ಲಾರಿಟಿ ಕೊಟ್ಟಿದ್ದು ಆಗಿದೆ. ಮತ್ತೆ ಆ ವಿಷಯದ ಬಗ್ಗೆ ಮಾತನಾಡಬೇಡ, ಆಗ ಮಾತ್ರ ನೀನು ಹೊಸ ಸೋನು ಆಗಿ ಇಲ್ಲಿಂದ ಹೋಗ್ತೀಯಾ ಎಂದು ಹೇಳುತ್ತಾರೆ. ಇನ್ನು ಜಯಶ್ರೀ ಆರಾಧ್ಯ ಅವರು ಸಹ ಈ ವಿಚಾರದ ಬಗ್ಗೆ ಮಾತನಾಡಿ, “ನಾನು ಒಂದು ವಿಚಾರ ಹೇಳ್ತೀನಿ ಬೇಜಾರು ಮಾಡಿಕೊಳ್ಳಬೇಡ. ನೀನು ವಿಡಿಯೋ ಪೋಸ್ಟ್ ಮಾಡಿ ಉರ್ಕೊಳ್ಳಿ ಅಂತ ಕ್ಯಾಪ್ಶನ್ ಹಾಕ್ತಿಯ, ಅದೆಲ್ಲಾ ಹೇಟರ್ ಗಳನ್ನ ಪ್ರೋವೋಕ್ ಮಾಡುತ್ತೆ, ಆ ಥರ ಮಾಡಬೇಡ. ನಿನ್ನ ವ್ಯಕ್ತಿತ್ವ ಏನು ಅಂತ ಇಲ್ಲಿ ಪ್ರೂವ್ ಮಾಡು. ಜನ ನಿನ್ನಮೇಲೆ ರೆಸ್ಪೆಕ್ಟ್ ಕೊಡುವ ಹಾಗೆ ಮಾಡು..”ಎಂದಿದ್ದಾರೆ ಜಯಶ್ರೀ ಆರಾಧ್ಯ. ಈ ಸಲಹೆಗಳನ್ನ ಸೋನು ಗೌಡ ಹೇಗೆ ತೆಗೆದುಕೊಳ್ಳುತ್ತಾರೆ ಎಂದು ನೋಡಬೇಕು.