ಅವರು ಒಬ್ಬರು ಹೆಣ್ಣು ಎಂಬುದನ್ನು ನೋಡದೆ ನಟಿ ಮೇಲೆ ಕೈ ಮಾಡಿದ ಖ್ಯಾತ ನಟ ಮೋಹನ್ ಬಾಬು. ಯಾಕೆ ಗೊತ್ತೇ??

26

Get real time updates directly on you device, subscribe now.

ಟಾಲಿವುಡ್ ನಲ್ಲಿ ನಟ ಮೋಹನ್ ಬಾಬು ಕಲೆಕ್ಷನ್ ಕಿಂಗ್ ಆಗಿದ್ದು, ಇವರ ಬಗ್ಗೆ ಪ್ರತಿಯೊಬ್ಬರಲ್ಲು ಒಂದೊಂದು ಅಭಿಪ್ರಾಯವಿದೆ. ಅವರು ತುಂಬಾ ನೇರ ಮನುಷ್ಯ ಎನ್ನುವುದು ಮಾತ್ರವಲ್ಲದೆ, ಶಿಸ್ತಿನ ಜೀವನ ನಡೆಸುತ್ತಾರೆ ಎನ್ನುತ್ತಾರೆ. ಅದಕ್ಕಾಗಿಯೇ ಅನೇಕ ಜನರು ಮೋಹನ್ ಬಾಬು ಅವರಿಗೆ ಭಯಪಡುತ್ತಾರೆ. ತಪ್ಪುಗಳಿಗೆ ಮುಖಕ್ಕೆ ಹೊಡೆಯುತ್ತಾರೆ ಎನ್ನುತ್ತಾರೆ. ಅಷ್ಟೇ ಏಕೆ ದೊಡ್ಡ ದೊಡ್ಡ ಸಿನಿಮಾ ತಾರೆಯರು ಕೂಡ ಅವರು ಪಕ್ಕದಲ್ಲಿದ್ದರೆ ಸ್ವಲ್ಪ ಹುಷಾರಾಗಿಯೇ ಮಾತನಾಡುತ್ತಾರೆ. ಅವರ ಮಗ ಮಂಚು ವಿಷ್ಣು 2003 ರಲ್ಲಿ ವಿಷ್ಣು ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದರು.

ಈ ಸಿನಿಮಾವನ್ನು ಮಲಯಾಳಂ ನಿರ್ದೇಶಕ ಶಾಜಿ ಕೈಲಾಸ್ ನಿರ್ದೇಶಿಸಿದ್ದು, ಭಾರೀ ನಿರೀಕ್ಷೆಗಳಿದ್ದವು. ತೆಲುಗಿನಲ್ಲಿ ಅಂದು ಟಾಪ್ ಹೀರೋಯಿನ್ ಆಗಿದ್ದ ಸಾಕ್ಷಿ ಶಿವಾನಂದ್ ಸಹೋದರಿ ಶಿಲ್ಪಾ ಶಿವಾನಂದ್ ಈ ಸಿನಿಮಾದ ನಾಯಕಿಯಾಗಿ ನಟಿಸಿದ್ದರು. ಆದರೆ ಆಕೆಯ ಹಠಮಾರಿ ವರ್ತನೆಯಿಂದ ನಿರ್ದೇಶಕರು ತುಂಬಾ ತೊಂದರೆಗೀಡಾಗಿದ್ದರು. ಆಕೆ ನಿರ್ದೇಶಕರಿಗೆ ಪದೇ ಪದೇ ತೊಂದರೆ ನೀಡುತ್ತಿದ್ದರಿಂದ ಅದನ್ನು ಸಹಿಸಲಾಗದೇ ಕೊನೆಗೆ ಮೋಹನ್ ಬಾಬು ಅವರ ಬಳಿ ದೂರು ನೀಡಿದ್ದರು. ಮೊದಲಿಗೆ ಮೋಹನ್ ಬಾಬು ಕೂಡ ತಾಳ್ಮೆಯಿಂದ ಇರಲು ಹೇಳಿ, ತಾವು ಸಹ ತಾಳ್ಮೆಯಿಂದಲೇ ವರ್ತಿಸಿದರು.

ಆದರೆ ಅದೇ ರೀತಿ ಮೋಹನ್ ಬಾಬು ಅವರಿಗು ಆಕೆ ತೊಂದರೆ ನೀಡಿದ್ದರಿಂದ ಆಕೆಗೆ ಕಪಾಳಮೋಕ್ಷ ಮಾಡಿದ್ದರು, ಕೆನ್ನೆಗೆ ಹೊಡೆದಿದ್ದರು ಎನ್ನುವ ಮಾತು ಕೇಳಿಬಂದಿತ್ತು. ಈ ವಿಚಾರವಾಗಿ ಆ ಸಮಯದಲ್ಲಿ ಚಿತ್ರರಂಗದ ಮೇಲಧಿಕಾರಿಗಳಿಗೆ ದೂರು ನೀಡಿದರು ಸಹ ಯಾರೂ ಅದರ ಬಗ್ಗೆ ಗಮನ ಹರಿಸಿರಲಿಲ್ಲ. ಯಾಕೆಂದರೆ ಆಕೆಯ ಅನುಚಿತ ವರ್ತನೆಯಿಂದ ಆ ರೀತಿಯ ಘಟನೆ ನಡೆಯಿತು ಎಂದು ನಿರ್ದೇಶಕರು ಹೇಳುವ ಬದಲು ಸೆಟ್ ನಲ್ಲಿ ಏನು ಬೇಕಾದರೂ ಮಾಡುತ್ತಿದ್ದರು ಎಂಬ ಕಾರಣಕ್ಕೆ ಮೋಹನ್ ಬಾಬು ವಾರ್ನಿಂಗ್ ಕೊಟ್ಟಿದ್ದಾರೆ ಎಂಬ ಮಾತು ಕೇಳಿಬಂದಿತು. ಅದರಿಂದಾಗಿ ಜಗಳ ಶಮನವಾಯಿತು.

Get real time updates directly on you device, subscribe now.