ಅವರ ಮಾತು ಕೇಳದೆ ಒಂದಲ್ಲ, ಎರಡಲ್ಲ ಬರೋಬ್ಬರಿ 50 ಕೋಟಿ ಕಳೆದುಕೊಂಡ ಸಾಯಿ ಪಲ್ಲವಿ. ಏನಾಗಿದೆ ಗೊತ್ತೇ??

18

Get real time updates directly on you device, subscribe now.

ಸಾಯಿ ಪಲ್ಲವಿ, ಈ ಹುಡುಗಿಯನ್ನು ಕಂಡರೆ ನಮ್ಮ ಪಕ್ಕದ ಮನೆಯಲ್ಲಿ ಇರುವ ಹುಡುಗಿಯ ಹಾಗೆ ಅನ್ನಿಸುತ್ತಾರೆ. ಆ ನ್ಯಾಚುರಲ್ ಲುಕ್ ನಲ್ಲಿಯೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗಿನ ನಾಯಕಿಯರು ಹೇಗಿರಬೇಕು ಎನ್ನುವುದಕ್ಕೆ, ತದ್ವಿರುದ್ಧವಾಗಿದ್ದಾರೆ ಸಾಯಿಪಲ್ಲವಿ ಎಂದರೆ ತಪ್ಪಾಗುವುದಿಲ್ಲ. ನಾಯಕಿಯರು ಗ್ಲಾಮರಸ್ ಆಗಿರುವುದಕ್ಕೆ ವಿರುದ್ಧವಾಗಿ, ತಮ್ಮದೇ ಆದ ಶೈಲಿಯಲ್ಲಿದ್ದಾರೆ, ಇದೇ ಸಾಯಿಪಲ್ಲವಿ ಅವರ ಸಹಜತೆಗೆ ಕೇರಾಫ್ ಅಡ್ರೆಸ್ ಎಂದರೆ ತಪ್ಪಾಗುವುದಿಲ್ಲ. ದೊಡ್ಡ ಸ್ಟಾರ್‌ಗಳ ಮುಂದೆ ಅವಕಾಶ ಪಡೆಯಲು ನಾಯಕಿಯರು ಅನೇಕ ಹಾಡುಗಳನ್ನು ಹಾಡುತ್ತಾರೆ.

ಆದರೆ ಸಾಯಿ ಪಲ್ಲವಿ ಕೂಡ ಎಷ್ಟೇ ದೊಡ್ಡ ಸ್ಟಾರ್ ಹೀರೋ ಚಾನ್ಸ್ ಕೊಟ್ಟರು, ತಮ್ಮ ಪಾತ್ರ ಚೆನ್ನಾಗಿಲ್ಲ ಎಂದರೆ ತಿರುಗಿಯು ನೋಡುವುದಿಲ್ಲ. ಕಥೆ ಇಷ್ಟವಾದರೆ ಮಾತ್ರ ಸಿನಿಮಾ ಮಾಡುವ ಟೈಪ್ ಅವರದ್ದು, ಪಾತ್ರದ ಹೊರತಾಗಿ, ಯಾರ ಮಾತನ್ನು ಕೇಳುವುದಿಲ್ಲ, ಇಷ್ಟವಾದರೆ ಮಾತ್ರ ಸಿನಿಮಾ ಮಾಡುತ್ತಾರೆ ಎಂಬ ಮಾತುಗಳನ್ನು ಸಹ ಕೆಲವರು ಹೇಳಿದ್ದಾರೆ. ಯಾಕೆಂದರೆ ಮೆಗಾಸ್ಟಾರ್ ಚಿರಂಜೀವಿ ಅವರಂತಹ ಸ್ಟಾರ್ ನಟನ ಸಿನಿಮಾವನ್ನು ಸಹ ಬೇಡ ಎಂದಿದ್ದರು. ಆಕೆಗೆ ಹಣದ ವ್ಯಾಮೋಹವಿಲ್ಲ, ಮೇಲಾಗಿ ಆಕೆಗೆ ದೊಡ್ಡ ಸ್ಟಾರ್ ಹೀರೋಯಿನ್ ಆಗಲೇಬೇಕು ಎನ್ನುವ ಭಾವವು ಆಕೆಗೆ ಇಲ್ಲ.

ಹಾಗಾಗಿಯೇ ಅವಕಾಶಗಳ ಅಡೆತಡೆಗಳನ್ನು ಮೆಟ್ಟಿ ನಿಂತು ನಟನೆಗೆ ಸ್ಕೋಪ್ ಇರುವ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಹಠಮಾರಿತನದಿಂದ ಆಕೆ ದೊಡ್ಡ ನಾಯಕಿಯಾಗಲಿಲ್ಲ ಎನ್ನುತ್ತಾರೆ ಹಲವರು. ಈ ಕಾರಣದಿಂದ ಆಕೆಯ ಸಿನಿಮಾಗಳೂ ಸೋಲುತ್ತಿವೆ. ಅನೇಕ ನಿರ್ದೇಶಕರು ದೊಡ್ಡ ಚಿತ್ರಗಳಲ್ಲಿ ಆಫರ್ ನೀಡಿದ್ದಾರೆ, ಆದರೆ ಆಕೆಯ ಪಾತ್ರಕ್ಕೆ ಪ್ರಾಮುಖ್ಯತೆ ಇರಲಿಲ್ಲ ಎಂದು ರಿಜೆಕ್ಟ್ ಮಾಡಿದ್ದಾರೆ. ಇಲ್ಲಿಯವರೆಗೆ, ಅವರು ಕಳೆದುಕೊಂಡಿರುವ ಚಿತ್ರದ ಆಫರ್‌ ಗಳಲ್ಲಿ ನಟಿಸಿದರೆ, ಸಾಯಿಪಲ್ಲವಿ ಸುಮಾರು 50 ಕೋಟಿ ರೂಪಾಯಿ ಸಂಪಾದನೆ ಮಾಡಿರುತ್ತಿದ್ದರು. ನಿರ್ದೇಶಕರ ಮಾತು ಕೇಳದ ಹಠಮಾರಿತನದಿಂದ ಇದೆಲ್ಲವನ್ನು ಸಾಯಿಪಲ್ಲವಿ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಟಾಲಿವುಡ್ ನಿರ್ಮಾಪಕರು.

Get real time updates directly on you device, subscribe now.