ಸಮಂತಾ ರವರು ಆ ರೀತಿ ನಡೆದುಕೊಂಡಿದ್ದು ನೋಡಿ ಜೀವನದ ಮೇಲೆ ಬೇಸರವಾಯ್ತು, ಮೊದಲ ಬಾರಿಗೆ ನಾಗ ಚೈತನ್ಯ ಹೇಳಿದ್ದೇನು ಗೊತ್ತೇ??
ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಮತ್ತು ನಾಗಚೈತನ್ಯ ಬಗೆಗಿನ ವಿಚಾರಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇವರಿಬ್ಬರು ಮಾಧ್ಯಮಗಳಲ್ಲಿ ನೀಡುವ ಹೇಳಿಕೆಗಳು ಸಹ ವೈರಲ್ ಆಗುತ್ತವೆ. ಮೊದಲಿಗೆ ವಿಚ್ಛೇದನದ ಬಗ್ಗೆ ಇಬ್ಬರು ಎಲ್ಲಿಯೂ ಮಾತನಾಡುತ್ತಿರಲಿಲ್ಲ. ಆದರೆ ಈಗ ಆಗೊಮ್ಮೆ ಈಗೊಮ್ಮೆ, ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಸಹ ಮಾತನಾಡಲು ಶುರು ಮಾಡಿದ್ದಾರೆ.
ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದ ಸಮಂತಾ, ಚೈತನ್ಯ ಅವರನ್ನು ಮಾಜಿ ಪತಿ ಎಂದು ಹೇಳಲು ಕರಣ್ ಜೋಹರ್ ಅವರಿಗೆ ಹೇಳಿದರು, ಅಷ್ಟೇ ಅಲ್ಲದೆ, ಒಂದೇ ಕೊನೆಯಲ್ಲಿ ತಮ್ಮಿಬ್ಬರನ್ನು ಇರಿಸಿದರೆ, ಹರಿತವಾದ ವಸ್ತುವನ್ನು ಬಚ್ಚಿಡಬೇಕು ಎಂದು ಸಹ ಹೇಳಿದ್ದರು. ಜೊತೆಗೆ ವಿಚ್ಛೇದನದಿಂದ ಅದ ಪರಿಣಾಮದ ಬಗ್ಗೆ ಸಹ ಮಾತನಾಡಿದ್ದರು. ಚೈತನ್ಯ ಅವರು ಮಾತ್ರ ಈ ವಿಚಾರದ ಬಗ್ಗೆ ಹೆಚ್ಚಾಗಿ ಏನನ್ನು ಮಾತನಾದರೆ ಸೈಲೆಂಟ್ ಆಗಿಯೇ ಇರುತ್ತಿದ್ದರು. ಇದೀಗ ಚೈತನ್ಯ ಅವರು ಸಹ ಇತ್ತೀಚಿನ ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ..

ನಾಗಚೈತನ್ಯ ಅವರು ಪ್ರಸ್ತುತ ಲಾಲ್ ಸಿಂಗ್ ಚಡ್ಡಾ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ, ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ ನಾಗಚೈತನ್ಯ, ಈ ಸಿನಿಮಾ ಪ್ರಚಾರದ ಸಂದರ್ಶನದಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ ನಾಗಚೈತನ್ಯ, ವಿಚ್ಛೇದನದ ಬಳಿಕ ಕೂಡ ಸಮಂತಾ ಮೇಲೆ ಗೌರವ ಇದೆ ಎಂದಿದ್ದಾರೆ ಚೈತನ್ಯ. “ನಮ್ಮಿಬ್ಬರ ನಡುವೆ ಆಗಿದ್ದರ ಬಗ್ಗೆ ದೊಡ್ಡವರಿಗೆ ಹೇಳಿ, ಈ ನಿರ್ಧಾರ ತೆಗೆದುಕೊಂಡೆವು. ನಮ್ಮ ನಡುವೆ ಬೇರೆ ವಿಚಾರಗಳೇ ನಡೆದಿದೆ ಎಂದು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಆ ರೀತಿಯ ವಿಚಾರಗಳನ್ನು ನೋಡಿ ನನಗೆ ಕೋಪ ಬಂದಿತು, ಈ ರೀತಿಯ ನಡವಳಿಕೆ ಒಳ್ಳೆಯದಲ್ಲ .ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬೇರ್ಪಟ್ಟಿದ್ದೆವೆ..” ಎಂದು ಹೇಳಿದ್ದಾರೆ ನಾಗಚೈತನ್ಯ.