ಸಮಂತಾ ರವರನ್ನು ಹುಡುಕಿಕೊಂಡ ಬಂದ ಮತ್ತೊಂದು ಪಾತ್ರ: ಒಪ್ಪಿಕೊಂಡ ತಕ್ಷಣವೇ ಅಕ್ಕಿನೇನಿ ಫ್ಯಾನ್ಸ್ ರೊಚ್ಚಿಗೆದ್ದದ್ದು ಯಾಕೆ ಗೊತ್ತೇ??
ಇತ್ತೀಚೆಗೆ ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಸದಾ ಸುದ್ದಿಯಲ್ಲಿರುತ್ತಾರೆ. ನಾಗ ಚೈತನ್ಯ ಜೊತೆ ಡೈವರ್ಸ್ ಆದ ನಂತರ ಸಾಲು ಸಾಲು ಆಫರ್ ಗಳ ಸುರಿಮಳೆ ಪಡೆಯುತ್ತಿರುವ ಈ ಚೆಲುವೆ ಅದೇ ರೇಂಜ್ ನಲ್ಲಿ ಗ್ಲಾಮರ್ ಡೋಸ್ ಹೆಚ್ಚಿಸಿ ಸದ್ದು ಮಾಡುತ್ತಿದ್ದಾರೆ. ಬಿಕಿನಿ, ಚಿಕ್ಕ ಡ್ರೆಸ್ ಗಳ ರೇಂಜ್‌ನಲ್ಲಿ ತನ್ನ ಸೌಂದರ್ಯವನ್ನು ತೋರಿಸಿ ಸದ್ದು ಮಾಡಿದ್ದಾರೆ ಸ್ಯಾಮ್. ಇತ್ತೀಚೆಗೆ ಕಾಫಿ ವಿತ್ ಕರಣ್ ಬಾಲಿವುಡ್ ಶೋನಲ್ಲಿ ಸಮಂತಾ ಮಾಡಿದ ಕಮೆಂಟ್‌ಗಳು ವೈರಲ್ ಆಗಿವೆ. ಇತ್ತೀಚೆಗೆ ಚೈತನ್ಯ ಅವರು ಮಾರಾಟ ಮಾಡಿದ ಮನೆಯಲ್ಲಿ ತಾಯಿಯೊಂದಿಗೆ ಇದ್ದಾರೆ. ಇದರೊಂದಿಗೆ ಸಮಂತಾ ಏನೇ ಮಾಡಿದರೂ ವೈರಲ್ ಆಗುತ್ತಿದೆ. ಅಲ್ಲದೆ, ಹಾಟ್ ಫೋಟೋ ಶೂಟ್ ಗಳಿಂದ ಹೆಚ್ಚು ಕ್ರೇಜ್ ಸೃಷ್ಟಿಸುಟ್ಟಿದ್ದಾರೆ. ದಿನದಿಂದ ದಿನಕ್ಕೆ ಬಟ್ಟೆಯನ್ನು ಕಡಿಮೆ ಮಾಡಿ ಸೌಂದರ್ಯದಿಂದ ಅಭಿಮಾನಿಗಳನ್ನು ಸಳೆಯುತ್ತಿದ್ದಾರೆ..
ಫ್ಯಾಮಿಲಿ ಮ್ಯಾನ್2 ವೆಬ್ ಸಿರೀಸ್ ನಲ್ಲಿ ಸಮಂತಾ ಅಭಿನಯ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆಯಿತು ಎಂಬುದು ನಮಗೆ ತಿಳಿದಿದೆ. ಪುಷ್ಪ ಸಿನಿಮಾದಲ್ಲಿ ವಿಶೇಷ ಹಾಡಿನ ಮೂಲಕ ಎಲ್ಲರನ್ನು ರೋಮಾಂಚನಗೊಳಿಸಿದ್ದರು. ಊ ಅಂಟಾವ ಹಾಡಿನಲ್ಲಿ ತಮ್ಮ ಚೆಲುವು ತೋರಿಸಿ ದೇಶದಾದ್ಯಂತ ಮನ್ನಣೆ ಗಳಿಸಿದರು. ಇದೀಗ ಪುಷ್ಫ 2 ಸಿನಿಮಾದಲ್ಲು ಸಮಂತಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಈ ಸಿನಿಮಾದಲ್ಲಿ ವಿಶೇಷ ಹಾಡು ಇರಲಿದೆ. ಆದರೆ ಇದರಲ್ಲಿ ಮಾಡಿರುವ ಪಾತ್ರ ಸಿನಿಮಾದ ಕಥೆಗೆ ತಿರುವು ನೀಡಲಿದೆ ಎನ್ನಲಾಗಿದೆ. ಮೇಲಾಗಿ ಪುಷ್ಪಾ ರೈಸ್ ಅಂತೆ, ಪುಷ್ಪ ರೂಲ್ ನಲ್ಲಿ ಸಹ ಹಾಟ್ ಡ್ಯಾನ್ಸ್ ಪರ್ಫಾರ್ಮೆನ್ಸ್ ಇರಲಿದೆ ಎಂಬ ಚರ್ಚೆ ಸಹ ನಡೆಯುತ್ತಿದೆ. ನಿರ್ದೇಶಕರು ಪುಷ್ಫ 2 ಅನ್ನು ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆರೆಮೇಲೆ ತರುವ ಪ್ಲಾನ್ ಹೊಂದಿದ್ದಾರೆ.
ಆದರೆ ಪುಷ್ಪ ಸಿನಿಮಾವನ್ನು ಆರಂಭದಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಾಡುವ ಪ್ಲಾನ್ ಇರಲಿಲ್ಲ, ಆದರೆ ಕೊನೆಯ ಸಮಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಬಳಿಕ ಪುಷ್ಪ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ಶಾರ್ಟ್ ಡ್ರೆಸ್ ಧರಿಸಿ ಅಕ್ಕಿನೇನಿ ಅಭಿಮಾನಿಗಳನ್ನು ಕೆರಳಿಸಿರುವ ಸಮಂತಾ ಮತ್ತೊಮ್ಮೆ ಅದಕ್ಕೆ ಓಕೆ ಹೇಳಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಮಂತಾ ಅಭಿಮಾನಿಗಳು ಹಾಗು ಅಕ್ಕಿನೇನಿ ಅಭಿಮಾನಿಗಳ ನಡುವೆ ವಾರ್ ನಡೆಯಲಿದೆ. ಈ ಸುದ್ದಿಯಿಂದ ಸಮಂತಾ ಅಭಿಮಾನಿಗಳು ಸಂಭ್ರಮದಲ್ಲಿದ್ದರೆ, ಅಕ್ಕಿನೇನಿ ಅಭಿಮಾನಿಗಳು ಕೋಪಗೊಂಡಿದ್ದಾರೆ. ಸಿನಿಮಾ ರಿಲೀಸ್ ಆದ ಮೇಲೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.