ಒಂದು ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಲ್ಲಿ ಮತ್ತೊಂದು ಸಿಹಿ ಸುದ್ದಿ ನೀಡಲು ಮುಂದಾದ ಕಾಜಲ್: ಅತಿ ಶ್ರೀಘ್ರದಲ್ಲಿ??

20

Get real time updates directly on you device, subscribe now.

ನಟಿ ಕಾಜಲ್ ಅಗರ್ವಾಲ್, ಏಪ್ರಿಲ್ 2022 ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ತಮ್ಮ ಮಗನಿಗೆ ನೀಲ್ ಕಿಚ್ಲೂ ಎಂದು ಹೆಸರಿಟ್ಟಿದ್ದಾರೆ. 2021 ರಲ್ಲಿ ಗರ್ಭಿಣಿಯಾದ ನಂತರ ಕಾಜಲ್ ಅಗರ್ವಾಲ್ ಅವರು ಸಿನಿಮಾಗಳಿಂದ ವಿರಾಮ ತೆಗೆದುಕೊಂಡರು. ಕಾಜಲ್ ಈಗ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ನೇಹಾ ಧೂಪಿಯಾ ಅವರೊಂದಿಗಿನ ಇನ್ಸ್ಟಾಗ್ರಾಮ್ ಲೈವ್ ಸೆಷನ್‌ ನಲ್ಲಿ, ಕಾಜಲ್ ಅಗರ್ವಾಲ್ ಅವರು ಖ್ಯಾತ ನಿರ್ದೇಶಕ ಶಂಕರ್ ಅವರ ನಿರ್ದೇಶನದ, ಕಮಲ್ ಹಾಸನ್ ಅವರು ನಾಯಕನಾಗಿರುವ ಇಂಡಿಯನ್ 2 ಸೈನಿಮಾದಲ್ಲಿದ್ದಾರೆ ಎಂದು ದೃಢಪಡಿಸಿದ್ದಾರೆ..ಈ ಸಿನಿಮಾ ಶೂಟಿಂಗ್ ಯಾವಾಗ ಆರಂಭವಾಗುತ್ತದೆ ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.

ಕಮಲ ಹಾಸನ್ ಅವರ ಇಂಡಿಯನ್ 2 ಚಿತ್ರೀಕರಣವನ್ನು ಸೆಪ್ಟೆಂಬರ್ 13 ರಿಂದ ಪ್ರಾರಂಭಿಸುವುದಾಗಿ ಕಾಜಲ್ ಬಹಿರಂಗಪಡಿಸಿದ್ದಾರೆ. ಸೆಟ್ ನಲ್ಲಿ ಅಪಘಾತಕ್ಕೀಡಾಗಿ ಮೂವರು ತಂತ್ರಜ್ಞರು ಸಾವನ್ನಪ್ಪಿ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಶಂಕರ್ ಅವರ ಸಿನಿಮಾ ಮತ್ತೆ ಶುರುವಾಗಲಿದೆಯಂತೆ. ಮತ್ತೊಮ್ಮೆ ಸಿನಿಮಾಗಳಲ್ಲಿ ನಟಿಸುವುದಾಗಿ ಕಾಜಲ್ ಹೇಳಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 1996 ರ ಇಂಡಿಯನ್ ಸಿನಿಮಾದ ಮುಂದುವರೆದ ಭಾಗವಾಗಿ ಇಂಡಿಯನ್ 2 ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಸಿನಿಮಾ ಚಿತ್ರೀಕರಣ ಶೇ.60ರಷ್ಟು ಪೂರ್ಣಗೊಂಡಿದೆ. ಕಾಜಲ್ ಅಗರ್ವಾಲ್ ಕೊನೆಯದಾಗಿ ‘ಹೇ ಸಿನಾಮಿಕಾ’ ಚಿತ್ರದಲ್ಲಿ ನಟಿಸಿದ್ದರು.

ಕಳೆದ ಕೆಲವು ದಿನಗಳಿಂದ ಕಾಜಲ್ ಅಗರ್ವಾಲ್ ಅವರು ಇಂಡಿಯನ್ 2 ಸಿನಿಮಾದಿಂದ ಹೊರಬಂದಿದ್ದಾರೆ ಎನ್ನುವ ಎಂಬ ವದಂತಿಗಳು ಹಬ್ಬಿದ್ದವು. ಕೆಲವು ತಿಂಗಳ ಹಿಂದೆ ಕಾಜಲ್‌ ಅವರಿಗೆ ಗಂಡು ಮಗು ಜನಿಸಿದ್ದರಿಂದ ನಿರ್ಮಾಪಕರು ಮತ್ತೊಬ್ಬ ನಾಯಕಿಯ ಹುಡುಕಾಟದಲ್ಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಈ ವದಂತಿಗಳಿಗೆ ಕಾಜಲ್ ಉತ್ತರಿಸಿದ್ದಾರೆ. ಇಂಡಿಯನ್ 2 ಹಲವಾರು ಸಮಸ್ಯೆಗಳಿಂದಾಗಿ ಶಂಕರ್ ಮತ್ತು ಲೈಕಾ ಪ್ರೊಡಕ್ಷನ್ಸ್ ನಡುವೆ ಬಿರುಕು ಮೂಡಿಸಿತ್ತು. ಇತ್ತೀಚೆಗೆ ಈ ಸಮಸ್ಯೆಗಳು ಬಗೆಹರಿದಿವೆ ಎಂದು ವರದಿಯಾಗಿದೆ. ಕಾಜಲ್ ಅಗರ್ವಾಲ್, ಸಿದ್ಧಾರ್ಥ್ ಮತ್ತು ಪ್ರಿಯಾ ಭವಾನಿ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Get real time updates directly on you device, subscribe now.