ಒಂದು ಕಾಲದ ಟಾಪ್ ನಟಿ ಸಿಮ್ರನ್ ರವರ ತಂಗಿಗೆ ಪ್ರೀತಿಯಲ್ಲಿ ಮೋಸ ಹೋದ ಬಳಿಕ ಏನಾಯ್ತು ಗೊತ್ತೇ?? ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಕಣ್ರೀ.

18

Get real time updates directly on you device, subscribe now.

ಸಿನಿಮಾದಲ್ಲಿ ಸ್ಟಾರ್ ಆಗಬೇಕು ಎಂಬ ಆಸೆ ಇಟ್ಟುಕೊಂಡು ಅನೇಕರು ಬರುತ್ತಾರೆ. ಆದರೆ ಕೆಲವರು ಮಾತ್ರ ಯಶಸ್ವಿಯಾಗುತ್ತಾರೆ. ಇನ್ನು ಕೆಲವರು ಮೋಸಕ್ಕೆ ಬಲಿಯಾಗುತ್ತಾರೆ. ಅದರಲ್ಲೂ ನಾಯಕಿಯರಿಗೆ ಇಂತಹ ಹಲವು ಸಮಸ್ಯೆಗಳಿರುತ್ತವೆ. ಅವಕಾಶಗಳ ಹೆಸರಲ್ಲಿ, ಪ್ರೀತಿಯ ಹೆಸರಲ್ಲಿ ನಾಯಕಿಯರನ್ನು ಬಳಸಿಕೊಳ್ಳಲು ನೋಡುವವರೇ ಹೆಚ್ಚು. ಆ ಕಾಲದಲ್ಲಿ ಒಬ್ಬ ನಾಯಕಿಗು ಹೀಗೆ ಆಯಿತು.

ಸ್ಟಾರ್ ಹೀರೋಯಿನ್ ಆಗಿ ನಟಿ ಸಿಮ್ರನ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಅನೇಕ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಸಿಮ್ರನ್. ಟಾಪ್ ಹೀರೋಗಳ ಜೊತೆ ನಟಿಸಿ ಅಪ್ರತಿಮ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ ಆಕೆಯ ತಂಗಿ ಮೋನಲ್‌ ಗೆ ಉತ್ತಮವಾದ ಕೆರಿಯರ್ ರೂಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತೆಲುಗಿನ ವಾತ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಸಿಮ್ರನ್ ಸಹೋದರಿ ಆಗಿದ್ದ ಕಾರಣ, ಸುಲಭವಾಗಿ ಜನಪ್ರಿಯರಾದರು ಮೊನಲ್. ಅವರು 20 ನೇ ವಯಸ್ಸಿನಲ್ಲಿ ಸಿನಿಮಾ ರಂಗ ಪ್ರವೇಶಿಸಿದರು.

ಪದವಿ ಓದುತ್ತಿದ್ದಾಗ ಚೆನ್ನೈಗೆ ಬಂದಿದ್ದರು ಮೋನಲ್, ಆಕೆಗೆ ಅವಕಾಶಗಳು ಬರುತ್ತಿರುವ ಸಮಯದಲ್ಲಿ ಕಾಲಿವುಡ್‌ ನ ಡ್ಯಾನ್ಸ್ ಮಾಸ್ಟರ್‌ ಜೊತೆಗೆ ಪ್ರೀತಿಯಲ್ಲಿ ಸಿಲುಕಿದರು. ಆತ ಮೋನಲ್ ಅವರನ್ನು ಪ್ರೀತಿಸುವ ನಾಟಕ ಆಡಿ, ಮೋನಲ್ ಅವರನ್ನು ಪೂರ್ಣವಾಗಿ ಬಳಸಿಕೊಂಡನು. ದೈಹಿಕವಾಗಿ ಆನಂದಿಸಿದ ನಂತರ, ಮೋನಲ್ ಅವರಂಜು ದೂರ ತಳ್ಳಲು ಪ್ರಾರಂಭಿಸಿದನು. ಆದರೆ ಮೋನಲ್ ಆತನನ್ನು ತುಂಬಾ ಪ್ರೀತಿಸುತ್ತಿದ್ದರು. ಅವನ ಮೋಸವನ್ನು ಸಹಿಸಲಾಗದೆ, ಮೋನಲ್ ಅವರು ಏಪ್ರಿಲ್ 14, 2002 ರಂದು ಚೆನ್ನೈನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಫ್ಯಾನ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಆಕೆಯ ಸಾವು ಅಂದು ಸಂಚಲನ ಮೂಡಿಸಿತ್ತು ಎಂದರೆ ತಪ್ಪಾಗುವುದಿಲ್ಲ. ಸ್ಟಾರ್ ಹೀರೋಯಿನ್ ಆಗಬೇಕೆಂದುಕೊಂಡಿದ್ದ ಮೋನಲ್ ಪ್ರೀತಿಯ ಹೆಸರಲ್ಲಿ ವಂಚನೆಗೆ ಬಲಿಯಾದರು.

Get real time updates directly on you device, subscribe now.