ಇದ್ದಕ್ಕಿದ್ದ ಹಾಗೆ ರೊಚ್ಚಿಗೆದ್ದ ದರ್ಶನ್: ಸೆಲೆಬ್ರೆಟಿಗಳಿಗಾಗಿ ರೂಲ್ಸ್ ಬ್ರೇಕ್ ಮಾಡಲು ನಿರ್ಧಾರ: ಇದಪ್ಪ ಡಿ ಬಾಸ್ ಅಂದ್ರೆ. ಏನು ಮಾಡಲು ಹೊರಟಿದ್ದಾರೆ ಗೊತ್ತೇ??
ನಟ ದರ್ಶನ್ ಅವರು ಅಭಿಮಾನಿಗಳ ಪಾಲಿನ ಡಿಬಾಸ್ ಎಂದೇ ಗುರುತಿಸಿಕೊಂಡಿರುವವರು. ಡಿಬಾಸ್ ದರ್ಶನ್ ಅವರ ಅಭಿನಯದ ಮುಂದಿನ ಕ್ರಾಂತಿ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಈ ಸಿನಿಮಾ ಬಗ್ಗೆ ಮಾಧ್ಯಮಗಳಲ್ಲಿ ಯಾವುದೇ ಸುದ್ದಿ ಬಂದಿಲ್ಲ. ಆದರೆ ದರ್ಶನ್ ಅವರ ಅಭಿಮಾನಿಗಳು ಈಗಾಗಲೇ ಸಿನಿಮಾ ಬಗ್ಗೆ ಪ್ರಚಾರ ಶುರು ಮಾಡಿದ್ದಾರೆ. ಕ್ರಾಂತಿ ಸಿನಿಮಾದ ಪ್ರಚಾರ ರಾಜ್ಯದ ಮೂಲೆ ಮೂಲೆಗಳಲ್ಲಿ ಜೋರಾಗಿ ನಡೆಯುತ್ತಿದೆ. ಬೀದಿ ಬೀದಿಗಳಲ್ಲಿ ಸಿನಿಮಾ ಪೋಸ್ಟರ್ ಕಾಣುವ ಹಾಗೆ ಅಭಿಮಾನಿಗಳು ಮಾಡಿದ್ದಾರೆ, ದೇವಸ್ಥಾನ, ಜಾತ್ರೆ ಹೀಗೆ ಎಲ್ಲಾ ಕಡೆ ಕ್ರಾಂತಿ ಸಿನಿಮಾ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ.
ಇತ್ತೀಚೆಗೆ ಕ್ರಾಂತಿ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಪೋಲೆಂಡ್ ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ದರ್ಶನ್ ಅವರು, ಅಲ್ಲಿಂದಲೇ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಕ್ರಾಂತಿ ಸಿನಿಮಾಗೆ ರಚಿತಾ ರಾಮ್ ಅವರು ನಾಯಕಿ ಆಗಿದ್ದು, ರೆವಿಚಂದ್ರನ್, ಸುಮಲತಾ ಅಂಬರೀಶ್ ಸೇರಿದಂತೆ ದೊಡ್ಡ ತಾರಾಗಣ ಈ ಸಿನಿಮದಲ್ಲಿದೆ. ನಿರ್ದೇಶಕರ ಕ್ಯಾಪ್ ಅನ್ನು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮೊದಲ ಬಾರಿಗೆ ಧರಿಸಿದ್ದು, ಶೈಲಜಾ ನಾಗ್ ಅವರು ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ದರ್ಶನ್ ಅವರು ಕ್ರಾಂತಿ ಸಿನಿಮಾ ಡಬ್ಬಿಂಗ್ ಮುಗಿಸಿದ್ದು, ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.
ಕ್ರಾಂತಿ ಸಿನಿಮಾದಲ್ಲಿ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಕಥೆ ಇರುವ ಕಾರಣ, ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. ಈಗೆಲ್ಲಾ ಸಿನಿಮಾ ಎಂದರೆ, ಟ್ರೈಲರ್ ಲಾಂಚ್, ಪ್ರೇರಿಲಿಸ್ ಇವೆಂಟ್ ಎಂದು ಸ್ಟಾರ್ ಕಲಾವಿದರನ್ನು ಕರೆಸಿ, ದೊಡ್ಡ ಪ್ರೋಗ್ರಾಮ್ ಮಾಡುತ್ತಾರೆ, ಆದರೆ ಅಭಿಮಾನಿಗಳೇ ಸೆಲೆಬ್ರಿಟಿ ಎನ್ನುವ ಡಿಬಾಸ್, ಈ ರೂಲ್ಸ್ ಅನ್ನು ತಮ್ಮ ಅಭಿಮಾನಿಗಳಿಗೋಸ್ಕರ ಮುರಿಯುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈಗ ಸಿನಿಮಾದ ಒಂದು ಮೋಷನ್ ಪೋಸ್ಟರ್ ಮತ್ತು ಟೀಸರ್ ಮಾತ್ರ ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಗಳು ಕಾದಿವೆ ಎನ್ನುತ್ತಿವೆ ಮೂಲಗಳು.