ಕಾಜಲ್ ಅಗರ್ವಾಲ್ ರಿಜೆಕ್ಟ್ ಮಾಡಿದ ಬಳಿಕ ಸೂಪರ್ ಹಿಟ್ ಆದ ಸಿನಿಮಾಗಳು ಯಾವ್ಯಾವು ಗೊತ್ತೇ?? ಇವುಗಳಲ್ಲಿ ಕಾಜಲ್ ಮಾಡಿದ್ದರೇ, ನೋಡುಗರಿಗೆ ಹಬ್ಬ

21

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತದ ಚಿತ್ರರಂಗದ ಬಹುಬೇಡಿಕೆ ನಟಿಯಾಗಿ ಒಂದು ಕಾಲದಲ್ಲಿ ಕಾಜಲ್ ಅಗರ್ವಾಲ್ ರವರು ಕಾಣಿಸಿಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ನಟಿ ಕಾಜಲ್ ಅಗರ್ವಾಲ್ ರವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮಗುವಿಗೆ ತಾಯಿಯಾದ ನಂತರ ಸಂಪೂರ್ಣವಾಗಿ ಚಿತ್ರರಂಗದಿಂದ ದೂರವಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಅಂದಿನ ಕಾಲದಲ್ಲಿ ಅವರು ಕೆಲವೊಂದು ಸಿನಿಮಾಗಳನ್ನು ರಿಜೆಕ್ಟ್ ಮಾಡಿ ನಂತರ ಆ ಸಿನಿಮಾಗಳು ಸೂಪರ್ ಹಿಟ್ ಆದ ಉದಾಹರಣೆಗಳು ಕೂಡ ಇವೆ. ಹಾಗಿದ್ದರೆ ಅಂತಹ ಸಿನಿಮಾಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಅಲಿವೇಲು ವೆಂಕಟರಮಣ; ನಿರ್ದೇಶಕ ತೇಜಾ ಅವರೇ ಲಕ್ಷ್ಮಿ ಕಲ್ಯಾಣಂ ಸಿನಿಮಾದ ಮೂಲಕ ಕಾಜಲ್ ಅಗರವಾಲ್ ಅವರನ್ನು ಪರಿಚಯಿಸುತ್ತಾರೆ. ನಂತರ ಅವರ ನಿರ್ದೇಶನದಲ್ಲಿ ತನಗಿಂತ ಕಡಿಮೆ ಜನಪ್ರಿಯತೆಯನ್ನು ಹೊಂದಿರುವ ನಟ ರಾಣ ದಗ್ಗುಬಾಟಿ ಅವರ ಜೊತೆಗೆ ನೇನೇ ರಾಜು ನೇನೇ ಮಂತ್ರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಆದರೆ ಅವರ ಮುಂದಿನ ಸಿನಿಮಾ ಆಗಿರುವ ಅಲಿವೇಲು ವೆಂಕಟರಮಣ ಸಿನಿಮಾದಲ್ಲಿ ಅವರು ನಟಿಸುವುದಿಲ್ಲ. ಅವರ ಬದಲಿಗೆ ಆ ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ.

ಸಾಹೋ; ಡಾರ್ಲಿಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಕಾಜಲ್ ಅಗರ್ವಾಲ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಎರಡು ಸಿನಿಮಾಗಳು ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿದೆ. ಆದರೆ ಸಾಹೋ ಸಿನಿಮಾದಲ್ಲಿ ಜಾಕ್ವಲಿನ್ ಫರ್ನಾಂಡಿಸ್ ಕಾಣಿಸಿಕೊಂಡಿದ್ದ ಸಾಂಗ್ ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಕಾಜಲ್ ಅಗರ್ವಾಲ್ ಅವರಿಗೆ ಆಹ್ವಾನ ನೀಡಲಾಗಿತ್ತು ಆದರೆ ಕಾಜಲ್ ಅಗರ್ವಾಲ್ ಇದನ್ನು ನಿರಾಕರಿಸಿದ್ದರು.

ತೇಜ ಸಿನಿಮಾ; ತೆಲುಗು ಚಿತ್ರರಂಗದ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ನಟನೆಯ ಹಾಗೂ ತೇಜಾ ನಿರ್ದೇಶನದಲ್ಲಿ ಮೂಡಿ ಬರಬೇಕಾಗಿದ್ದ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು ಆದರೆ ಕಾಜಲ್ ಅಗರ್ವಾಲ್ ರವರು ಈ ಸಿನಿಮಾದಿಂದ ಹಿಂದಕ್ಕೆ ಸರಿದಿದ್ದರು. ಎಲ್ಲದಕ್ಕಿಂತ ಕಾಕತಾಳಿಯ ಎನ್ನುವಂತೆ ಈ ಸಿನಿಮಾ ಕೂಡ ಮುಂದಿನ ದಿನಗಳಲ್ಲಿ ಸ್ಥಗಿತಗೊಂಡಿತ್ತು.

ತೂಂಗಾವನಂ; ಸದ್ಯ ನಿಮಗೆ ತಿಳಿದಿರುವ ಪ್ರಕಾರ ಕಮಲ್ ಹಾಸನ್ ಹಾಗೂ ಶಂಕರ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಇಂಡಿಯನ್ 2 ಸಿನಿಮಾದಲ್ಲಿ ನಾಯಕಿಯಾಗಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ ಆದರೆ ಒಂದು ಕಾಲದಲ್ಲಿ ಕಮಲ್ ಹಾಸನ್ ನಟನೆಯ ಸಿನಿಮಾ ಒಂದಕ್ಕೆ ನಟಿಸಲು ಕಾಜಲ್ ಅಗರ್ವಾಲ್ ನಕರಾ ತೋರಿಸಿದ್ದರು ಎಂಬುದಾಗಿ ತಿಳಿದು ಬಂದಿದೆ. ತೂಂಗಾವನಂ ಎನ್ನುವ ಕಮಲ್ ಹಾಸನ್ ನಟನೆಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ದುಪ್ಪಟ್ಟು ಸಂಭಾವನೆಯನ್ನು ಕಾಜಲ್ ಅಗರ್ವಾಲ್ ರವರು ಕೇಳಿದ್ದರು ಎಂಬುದಾಗಿ ಸುದ್ದಿ ಇದೆ.

ಉದಯ ನಿಧಿ ಸ್ಟಾಲಿನ್; ಈ ಹಿಂದೆ ಹಲವಾರು ತಮಿಳು ಸಿನಿಮಾಗಳಿಗೆ ಕಾಜಲ್ ಅಗರ್ವಾಲ್ ಬೇಡ ಎಂಬುದಾಗಿ ಹೇಳಿದ್ದಾರೆ ಅವುಗಳಲ್ಲಿ ಉದಯ ನಿಧಿ ಸ್ಟಾಲಿನ್ ಅವರ ಸಿನಿಮಾ ಕೂಡ ಒಂದು. ಆದರೆ ಇದಕ್ಕೊಂದು ಕಾರಣ ಕೂಡ ಇದೆ ಯಾಕೆಂದರೆ ಇದೇ ಸಂದರ್ಭದಲ್ಲಿ ರಾಮ್ ಚರಣ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ ಆಚಾರ್ಯ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದರು ಇದೇ ಕಾರಣಕ್ಕಾಗಿ ನೋ ಎಂದಿದ್ದರು.

ಗೌತಮಿಪುತ್ರ ಶಾತಕರ್ಣಿ; ಲೆಜೆಂಡ್ ನಟ ಆಗಿರುವ ಬಾಲಯ್ಯ ಅವರು ತಮ್ಮ 100ನೇ ಸಿನಿಮಾ ಆಗಿರುವ ಗೌತಮಿ ಪುತ್ರ ಶಾತಕರ್ಣಿ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ರವರಿಗೆ ನಾಯಕಿಯಾಗಿ ನಟಿಸುವ ಅವಕಾಶವನ್ನು ನೀಡಿದ್ದರು ಆದರೆ ಕಾಜಲ್ ಅಗರ್ವಾಲ್ ರವರು ಈ ಆಹ್ವಾನಕ್ಕೆ ನೋ ಎಂದಿದ್ದರು.

ವೈಲ್ಡ್ ಡಾಗ್; ತೆಲುಗಿನ ಎವರ್ಗ್ರೀನ್ ನಟ ಆಗಿರುವ ನಾಗಾರ್ಜುನ ನಟನೆಯ ಇತ್ತೀಚಿನ ಸಿನಿಮಾ ಆಗಿರುವ ವೈಲ್ಡ್ ಡಾಗ್ ನಲ್ಲಿ ನಟಿಸುವ ಅವಕಾಶವನ್ನು ಕಾಜಲ್ ಅಗರ್ವಾಲ್ ರವರಿಗೆ ನಿರ್ದೇಶಕ ನೀಡಿದ್ದರೂ ಕೂಡ ಮದುವೆ ಕಾರ್ಯಗಳಿಂದಾಗಿ ಅವರು ಭಾಗಿಯಾಗಲು ಸಾಧ್ಯವಾಗಲಿಲ್ಲ.

ಅಮರ್ ಅಕ್ಬರ್ ಆಂತೋನಿ; ನಟ ರವಿತೇಜ ಅವರ ಜೊತೆಗೆ ಈಗಾಗಲೇ ಎರಡು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಕಾಜಲ್ ಅಗರ್ವಾಲ್ ರವರು ರವಿತೇಜ ನಟನೆಯ ಅಮರ್ ಅಕ್ಬರ್ ಆಂತೋನಿ ಸಿನಿಮಾದಲ್ಲಿ ಮಾತ್ರ ನಟಿಸುವ ಅವಕಾಶದ ಆಹ್ವಾನ ಹುಡುಕಿಕೊಂಡು ಬಂದಿದ್ದರು ಕೂಡ ಅದನ್ನು ತಿರಸ್ಕರಿಸಿದ್ದರು. ಸದ್ಯದ ಮಟ್ಟಿಗೆ ಅವರ ಅಭಿಮಾನಿಗಳು ಮತ್ತೊಮ್ಮೆ ಕಾಜಲ್ ಅಗರ್ವಾಲ್ ದೊಡ್ಡಪರದೆ ಮೇಲೆ ಮತ್ತೊಮ್ಮೆ ಕಾಣಿಸಿಕೊಳ್ಳಲು ಎನ್ನುವ ನಿರೀಕ್ಷೆಯಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದಾಗಿದೆ.

Get real time updates directly on you device, subscribe now.