ಮದುವೆ ಎಂದರೆ ಸುಮ್ಮನೆ ಅಲ್ಲ, ಪುರುಷ ಹಾಗೂ ಮಹಿಳೆಯರ ಜೀವನದಲ್ಲಿ ತಿಳಿಯದಂತೆ ತರುವ ಬದಲಾವಣೆ ಏನು ಗೊತ್ತೇ??

28

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬರಿಗೂ ಕೂಡ ಜೀವನಪೂರ್ತಿ ಜೀವನವನ್ನು ಆನಂದಿಸಲು ಜೀವನ ಸಂಗಾತಿ ಬೇಕಾಗುತ್ತದೆ. ಕಷ್ಟಗಳಲ್ಲಿ ಕಷ್ಟಗಳಿಗೆ ಬೆಂಬಲವಾಗಿ ನಿಲ್ಲಲು ಹಾಗೂ ಸುಖದ ಸಂದರ್ಭದಲ್ಲಿ ಸಂತೋಷವನ್ನು ಹಂಚಿಕೊಳ್ಳಲು ಹೆಣ್ಣು ಹಾಗೂ ಗಂಡು ಇಬ್ಬರಿಗೂ ಕೂಡ ಜೀವನ ಸಂಗಾತಿ ಬೇಕಾಗುತ್ತದೆ ಇದಕ್ಕಾಗಿ ಪ್ರತಿಯೊಬ್ಬರೂ ಕೂಡ ಮದುವೆ ಆಗಿಯೇ ಆಗುತ್ತಾರೆ.

ಅರೇಂಜ್ ಮ್ಯಾರೇಜ್ ಆಗಿರಲಿ ಅಥವಾ ಲವ್ ಮ್ಯಾರೇಜ್ ಆಗಿರಲಿ ಮೊದಲ ವರ್ಷ ಎನ್ನುವುದು ಪ್ರತಿಯೊಬ್ಬ ಜೋಡಿಗಳಿಗೆ ವಿಶೇಷವಾಗಿರುತ್ತವೆ ಹೀಗಾಗಿ ಇಬ್ಬರ ತಪ್ಪು ಒಪ್ಪುಗಳು ಪರಸ್ಪರರಿಗೆ ಖಂಡಿತ ಕಂಡು ಬರೋದಿಲ್ಲ ಹಾಗೂ ಅದನ್ನು ತೋರಿಸಲು ಪರಸ್ಪರ ಇಷ್ಟ ಕೂಡ ಪಡುವುದಿಲ್ಲ ಆದರೂ ಕೂಡ ಕೆಲವೊಮ್ಮೆ ಅವರು ಮಾಡುವಂತಹ ತಪ್ಪುಗಳು ಪರಸ್ಪರರಿಗೆ ತಿಳಿದು ಬರುತ್ತದೆ ಹಾಗೂ ಜೋಡಿಗಳ ನಡುವೆ ಕೆಲವೊಮ್ಮೆ ಬಿರುಕು ಕೂಡ ಮೂಡುವುದುಂಟು. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಮದುವೆ ನಂತರ ಜೋಡಿಗಳ ನಡುವೆ ಉಂಟಾಗುವಂತಹ ಬದಲಾವಣೆಗಳ ಕುರಿತಂತೆ.

ಚಿಕ್ಕ ಮಾತುಗಳ ಮಹತ್ವ; ಥ್ಯಾಂಕ್ ಯು ಪ್ಲೀಸ್ ಇಂತಹ ಹಲವಾರು ಚಿಕ್ಕ ಚಿಕ್ಕ ಮಾತುಗಳ ಮಹತ್ವ ಜೀವನದಲ್ಲಿ ಎಷ್ಟೊಂದು ಇರುತ್ತದೆ ಎಂಬ ಅರ್ಥವನ್ನು ನೀವು ತಿಳಿಯಲು ಪ್ರಾರಂಭಿಸುತ್ತೀರಿ. ಮದುವೆಗೂ ಮುನ್ನ ನೀವು ನಿಮ್ಮ ಹೊಗಳಿಕೆಯನ್ನು ಕೇಳಲು ಬಯಸುತ್ತೀರಿ ಆದರೆ ಮದುವೆ ನಂತರ ನಿಮ್ಮ ಸಂಗಾತಿಯ ಹೊಗಳಿಕೆಯನ್ನು ಕೇಳಲು ಬಯಸುತ್ತೀರಿ.

ಮದುವೆಗೂ ಮುನ್ನ ದೂರ ಇರುವ ನಿಮ್ಮ ಭಾವಿ ಸಂಗಾತಿಯ ಕುರಿತಂತೆ ನೀವು ಹಲವಾರು ಕನಸುಗಳನ್ನು ಕಾಣಲು ಪ್ರಾರಂಭಿಸುತ್ತೀರಿ ಹಾಗೂ ಅವರ ಕುರಿತಂತೆ ನಿಮಗೆ ಒಳ್ಳೆಯ ಅಭಿಪ್ರಾಯಗಳು ಇರುತ್ತವೆ ಆದರೆ ಮದುವೆ ಆದ ನಂತರ ಕೆಲವೇ ದಿನಗಳಲ್ಲಿ ಅವರ ನಿಜ ಬಣ್ಣ ಅಥವಾ ನಿಜ ಸ್ವಭಾವ ಎನ್ನುವುದು ನಿಮಗೆ ಅರ್ಥ ಆಗಲು ಪ್ರಾರಂಭವಾಗುತ್ತದೆ. ಹೀಗಾಗಿ ಅವರ ಒಳ್ಳೆಯ ಗುಣಗಳನ್ನು ಮಾತ್ರವಲ್ಲದೆ ಅವರ ಕೊರತೆಗಳನ್ನು ಕೂಡ ಒಪ್ಪಿ ನೀವು ಅವರ ಜೊತೆಗೆ ಜೀವನದಲ್ಲಿ ಹೆಜ್ಜೆ ಹಾಕುವುದನ್ನು ಅನುಸರಿಸಬೇಕು.

ಮದುವೆಗಿಂತ ಮುಂಚೆ ನಿಮ್ಮ ಮೊದಲ ಪ್ರಾಥಮಿಕ ಆದ್ಯತೆ ಎನ್ನುವುದು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಕಚೇರಿಯ ಆಫೀಸ್ ಆಗಿರಬಹುದು ಆದರೆ ಮದುವೆಯ ನಂತರ ನಿಮ್ಮ ಮೊದಲ ಪ್ರಾಥಮಿಕ ಆದ್ಯತೆ ನಿಮ್ಮ ಜೀವನ ಸಂಗಾತಿ ಆಗಿರುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಮದುವೆ ಆದ ನಂತರ ಕಂಡು ಬರುವ ಬದಲಾವಣೆಯಾಗಿದೆ. ಮದುವೆಯ ನಂತರ ಮೊದಲ ಅಭ್ಯಾಸಗಳಿಂದ ಎಲ್ಲಾ ಬದಲಾವಣೆ ಕಂಡು ಹೊಸ ಜವಾಬ್ದಾರಿಗಳು ಹಾಗೂ ಬದುಕಿನ ನಡೆಸುವ ವಿಧಾನವೂ ಕೂಡ ಬದಲಾವಣೆ ಕಂಡು ಬರಲಿದೆ ಎಂಬುದಾಗಿ ಮದುವೆಯ ನಂತರದ ಬದಲಾವಣೆಗಳಲ್ಲಿ ಇದು ಕೂಡ ಒಂದು ಎಂಬುದಾಗಿ ತಿಳಿಯಲಾಗಿದೆ.

Get real time updates directly on you device, subscribe now.