ಮದುವೆಯ ನಂತರ ಪರ ಪುರುಷರ ಜೊತೆ ಸಂಬಂಧ ಇಟ್ಟುಕೊಂಡ ಬಳಿಕ ಜೀವನ ಹೇಗೆ ಬದಲಾಗುತ್ತದೆ ಎಂಬುದಕ್ಕೆ ಉತ್ತರ ನೀಡಿದ ಮಹಿಳೆಯರು. ಹೇಗಿರುತ್ತದೆ ಅಂತೇ ಗೊತ್ತೇ?

89

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದಾಂಪತ್ಯ ಜೀವನ ಎನ್ನುವುದು ಕೇವಲ ಸಂಗಾತಿಗಳ ನಡುವಿನ ಪ್ರೀತಿಯಿಂದ ಮಾತ್ರವಲ್ಲ ಬದಲಿಗೆ ಪ್ರಮುಖವಾಗಿ ಇಬ್ಬರ ನಡುವಿನ ನಂಬಿಕೆ ಹಾಗೂ ವಿಶ್ವಾಸ ಪ್ರಮುಖವಾಗಿರುತ್ತದೆ. ಇಲ್ಲದಿದ್ದರೆ ಒಮ್ಮೆ ಸಂಬಂಧದ ನಡುವೆ ಬಿರುಕು ಕಂಡುಬಂದರೆ ಮತ್ತೆ ಅದು ಸರಿಯಾಗುವುದು ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕಷ್ಟ ಎಂದು ಹೇಳಬಹುದಾಗಿದೆ. ಅದರಲ್ಲಿಯೂ ಬೇಡದ ಸಂಬಂಧವನ್ನು ಹೊಂದಿದ ನಂತರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ವಿವಾಹಿತ ಹತ್ತಾರು ಮಹಿಳೆಯರು ಹಂಚಿಕೊಂಡಿರುವ ಅಭಿಪ್ರಾಯಗಳನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಮೂವತ್ತೈದು ವರ್ಷದ ಸ್ನೇಹ ಎಂಬ ಮಹಿಳೆ ಹೇಳುವಂತೆ ಅವರ ಗಂಡ ತನ್ನ ಆಫೀಸಿನಲ್ಲಿರುವ ಮಹಿಳಾ ಸೆಕ್ರೆಟರಿ ಜೊತೆಗೆ ಬೇಡದ ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ. ಹೀಗಾಗಿ ಆಕೆಗೆ ಗಂಡನ ಎದುರು ಪತಿವ್ರತೆ ಮಹಿಳೆ ಎನ್ನುವ ನಾಟಕವನ್ನು ಮಾಡುವ ಅವಶ್ಯಕತೆ ಇನ್ನು ಮುಂದೆ ಇರಲಿಲ್ಲ. ಗಂಡ ಹಾಗೆ ಮಾಡಿದ ಎನ್ನುವ ಕಾರಣಕ್ಕಾಗಿ ಆಕೆ ಕೂಡ ಅದನ್ನೇ ಮತ್ತೆ ಪುನರಾವರ್ತಿಸುತ್ತಾರೆ. ಇದು ಇವರಿಬ್ಬರ ನಡುವಿನ ದಾಂಪತ್ಯ ಜೀವನ ಬಿರುಕು ಮೂಡುವಂತೆ ಮಾಡುತ್ತದೆ. ಪ್ರತಿದಿನ ಪರಸ್ಪರ ಒಬ್ಬರೊಬ್ಬರ ಮೇಲೆ ದೂರುಗಳನ್ನು ಹೇಳುವುದು ನಂತರ ಇಬ್ಬರೂ ಕೂಡ ದಾಂಪತ್ಯ ಜೀವನದಿಂದ ಕಾಲಕ್ರಮೇಣವಾಗಿ ದೂರವಾಗುವ ನಿರ್ಧಾರವನ್ನು ನಿಶ್ಚಯಿಸುತ್ತಾರೆ.

ಇನ್ನು ಮತ್ತೊಬ್ಬ ಮಹಿಳೆಯಾಗಿರುವ ಕಶಿಶ್ ಕೂಡ ತಮ್ಮ ವೈವಾಹಿಕ ಜೀವನದಲ್ಲಿ ನಡೆದಿರುವ ಇಂತಹ ಘಟನೆ ಕುರಿತಂತೆ ಮಾತನಾಡಿದ್ದಾರೆ. ಹೌದು ಗೆಳೆಯರೆ ಅವರ ಬಗ್ಗೆ ಮದುವೆಯಾದ ನಂತರ ಅವರ ಗಂಡ ಅಷ್ಟೊಂದು ಹೆಚ್ಚಾಗಿ ಗಮನವನ್ನು ನೀಡುತ್ತಿರಲಿಲ್ಲ. ಆಕೆಯ ಗಂಡ ಕಾರ್ಯ ನಿಮಿತ್ತವಾಗಿ ಹೆಚ್ಚಾಗಿ ಹೊರಗಡೆ ಇರುತ್ತಿದ್ದರು ಹಾಗೂ ಹೆಂಡತಿಯ ಜೊತೆಗೆ ಯಾವತ್ತೂ ಕೂಡ ಅಷ್ಟೊಂದು ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಹೀಗಾಗಿ ಆಕೆ ಬೇಸತ್ತು ಪರಪುರುಷನ ಸಂಘವನ್ನು ಮಾಡುತ್ತಾರೆ ಆದರೆ ಅದೇ ಕೂಡಲೇ ಅದರ ಕುರಿತಂತೆ ಆಕೆ ಪಶ್ಚಾತಾಪ ಪಟ್ಟುಕೊಳ್ಳುತ್ತಾರೆ. ನಂತರ ದುಃಖ ತಪ್ತರಾಗಿ ತನ್ನ ಗಂಡನ ಜೊತೆಗೆ ಇರುವ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಆದರೆ ಆ ಗಂಡ ಇದರ ಮುಂದೆ ತನ್ನ ಹೆಂಡತಿಗೆ ಸಂಪೂರ್ಣ ಸಮಯವನ್ನು ನೀಡುವ ನಿರ್ಧಾರ ಮಾಡುತ್ತಾರೆ ಹಾಗೂ ಹೀಗೆ ಯಾಕೆ ಮಾಡಿದ್ದೆ ಎಂಬುದಾಗಿ ಹೆಂಡತಿಯನ್ನು ಮತ್ತೆ ಕೇಳಲು ಕೂಡ ಹೋಗುವುದಿಲ್ಲವಂತೆ.

ಇನ್ನು ಮತ್ತೊಬ್ಬ ಮಹಿಳೆ ಆಗಿರುವ ತನಿಷ ಎನ್ನುವ ಮಹಿಳೆ ಕೂಡ ತನ್ನ ಗಂಡನಿಗೆ ಮೋಸ ಮಾಡುವ ಇಚ್ಛೆಯನ್ನು ಹೊಂದಿ ಕಾಲಕ್ರಮೇಣವಾಗಿ ಗಂಡನ ಜೊತೆಗೆ ಎಲ್ಲಾ ಮಾತುಕತೆಗಳನ್ನು ಕೂಡ ನಿಲ್ಲಿಸಿ ಬಿಡುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಗಂಡನ ಜೊತೆಗೆ ಯಾವುದೇ ಪ್ರಮುಖ ವಿಚಾರಗಳನ್ನು ಕೂಡ ಮಾತನಾಡಬೇಕು ಎಂದು ಅಂದುಕೊಂಡರೆ ಕೇವಲ ಮೆಸೇಜ್ ಮೂಲಕ ಮಾತ್ರ ಸಂಭಾಷಣೆ ನಡೆಯುತ್ತಿತ್ತು. ಕೊನೆಗೆ ಇಬ್ಬರೂ ಕೂಡ ತೆರಪಿ ಮಾಡುವ ನಿರ್ಧಾರಕ್ಕೆ ಬರುತ್ತಾರೆ ನಂತರ ಇಬ್ಬರೂ ಕೂಡ ಪರಸ್ಪರರ ತಪ್ಪುಗಳನ್ನು ಮಾಫಿ ಮಾಡಿ ಇಬ್ಬರೂ ಕೂಡ ಈಗ ಸಂತೋಷದಿಂದ ದಾಂಪತ್ಯ ಜೀವನದಲ್ಲಿ ಮುಂದುವರೆದಿದ್ದಾರೆ.

ಸೃಷ್ಟಿ ಎನ್ನುವ ಮಹಿಳೆ ಕೂಡ ತನ್ನ ದಾಂಪತ್ಯ ಜೀವನದ ಕುರಿತಂತೆ ಮಾತನಾಡಿದ್ದು ಕಾಲೇಜು ದಿನಗಳಿಂದಲೂ ಕೂಡ ತನ್ನ ಪತಿಯನ್ನು ಅವರು ಬಲ್ಲವರಾಗಿದ್ದಾರೆ ಇಬ್ಬರು ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಮದುವೆ ನಂತರ ಗಂಡ ಮೋಸ ಮಾಡಿರುವ ಕುರಿದಂತೆ ಕೂಡ ಅವರಿಗೆ ತಿಳಿದು ಬಂದಿತ್ತು, ಅವರನ್ನು ಬಿಟ್ಟುಬಿಡುವ ನಿರ್ಧಾರವನ್ನು ಕೂಡ ಮಾಡಿದ್ದರಂತೆ ಆದರೆ ಅವರನ್ನು ಬಿಟ್ಟು ತಾನು ಒಂಟಿಯಾಗುವ ಹಿನ್ನೆಲೆಯಿಂದಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಆಕಾಂಕ್ಷ ಎನ್ನುವ 32 ವರ್ಷ ವಯಸ್ಸಿನ ಮಹಿಳೆ ತನ್ನ ಗಂಡನೊಂದಿಗೆ ಕಳೆದ ಒಂದು ವರ್ಷಗಳಿಂದ ಯಾವುದೇ ಒಳ್ಳೆ ರೀತಿಯ ಸಂಬಂಧವನ್ನು ಹೊಂದಿಲ್ಲ ಯಾಕೆಂದರೆ ಬಿಜಿನೆಸ್ ಟ್ರಿಪ್ ಹಿನ್ನೆಲೆಯಲ್ಲಿ ತನ್ನ ಗಂಡನಿಗೆ ಹಾಗೆ ಮೋಸ ಮಾಡಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ತನ್ನ ಗಂಡನನ್ನು ಬಿಟ್ಟುಬಿಡುವ ಯೋಚನೆ ಇದ್ದರೂ ಕೂಡ ಇದುವರೆಗೂ ಬಿಟ್ಟಿಲ್ಲ ಯಾಕೆಂದರೆ ಅವರ ಇಬ್ಬರು ಮಕ್ಕಳಿಗೆ ಆತ ಅಪ್ಪ ಆಗಿದ್ದಾನೆ ಎನ್ನುವ ಕಾರಣದಿಂದಾಗಿ ಎಂಬುದಾಗಿ ತಿಳಿದು ಬಂದಿದೆ. ಈ ವಿಚಾರವೂ ಕೂಡ ಮದುವೆ ನಂತರದ ಬೇಡದ ಸಂಬಂಧದ ಪ್ರತಿಫಲಯೆಂದು ಹೇಳಿದರೆ ತಪ್ಪಾಗಲಾರದು.

ಒಟ್ಟಾರೆಯಾಗಿ ಈ ಎಲ್ಲಾ ಪ್ರಕರಣಗಳನ್ನು ಕೇಳಿ ತಿಳಿದ ನಂತರ ಒಂದು ಕೊನೆದಾಗಿ ನಿಲುಕುವಂತಹ ಸಾರಾಂಶ ಎಂದರೆ ಅದು ಮದುವೆಯ ನಂತರ ಬೇಡದ ಸಂಬಂಧಗಳನ್ನು ಒಮ್ಮೆ ಇಟ್ಟುಕೊಂಡರೆ ಸಾಕು ಒಂದು ಮದುವೆ ಸಂಬಂಧ ಮುರಿದುಬಿಡುತ್ತದೆ ಇಲ್ಲವೇ ಸಂಬಂಧದಲ್ಲಿ ಇರುವಂತಹ ಪ್ರೀತಿ ಎನ್ನುವುದು ಅಥವಾ ನಂಬಿಕೆ ವಿಶ್ವಾಸ ಎನ್ನುವುದು ಸಂಪೂರ್ಣವಾಗಿ ಬತ್ತಿ ಹೋಗುತ್ತದೆ ಎಂದು ಹೇಳಬಹುದು. ಹೀಗಾಗಿ ಇದು ಒಂದು ಬಾರಿ ವೈವಾಹಿಕ ಜೀವನದಲ್ಲಿ ಬಂದರೆ ಸಾಕು ಮತ್ತೆ ಆ ಸಂಬಂಧ ಅದೇ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Get real time updates directly on you device, subscribe now.