ಬಿಗ್ ಷಾಕಿಂಗ್; ಕೆಜಿಎಫ್ ನ ಅದೊಂದು ದಾಖಲೆ ವಿಕ್ರಾಂತ್ ರೋಣ ಪುಡಿ ಪುಡಿ ಮಾಡಿತೇ?? ಮೊದಲ ಹೆಜ್ಜೆಯಲ್ಲಿಯೇ ಜಯವೇ??
ನಮಸ್ಕಾರ ಸ್ನೇಹಿತರೇ ಅಂತೂ-ಇಂತೂ ಕೊನೆಗೂ ಅಭಿಮಾನಿಗಳು ಸಾಕಷ್ಟು ವರ್ಷಗಳಿಂದ ನಿರೀಕ್ಷೆ ನೇತ್ರ ರಾಗಿ ಕಾಯುತ್ತಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇಂದು ಅಂದರೆ ಜುಲೈ 28ರಂದು ಬಿಡುಗಡೆ ಆಗಿಬಿಟ್ಟಿದೆ. ಈಗಾಗಲೆ ನೋಡುತ್ತಿರುವ ಪ್ರಕಾರ ಸೋಶಿಯಲ್ ಮೀಡಿಯಾ ಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಚಿತ್ರಕ್ಕಾಗಿ ಹರಿದು ಬರುತ್ತಿದೆ.
ಚಿತ್ರ ಬರೋಬ್ಬರಿ 100 ಕೋಟಿ ರೂಪಾಯಿ ಬಜೆಟ್ ನಲ್ಲಿ ಮೂಡಿಬಂದಿದ್ದು ಹಣಕ್ಕೆ ತಕ್ಕಂತೆ ಸಿನಿಮಾ ಪರದೆಯ ಮೇಲೂ ಕೂಡ ಕಾಣುತ್ತಿದೆ ಎಂಬುದಾಗಿ ಅಭಿಮಾನಿಗಳು ಹಾಗೂ ಸಿನಿಮಾ ಪಂಡಿತರು ಚಿತ್ರದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ನಿಮಗೆ ತಿಳಿದಿರುವಂತೆ ಕನ್ನಡ ಚಿತ್ರರಂಗದ ಮಟ್ಟಿಗೆ ಜಾಗತಿಕವಾಗಿ ಸಾಕಷ್ಟು ದಾಖಲೆಯನ್ನು ಬರೆದಿಟ್ಟಿರುವ ಸಿನಿಮಾ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ನಟನೆಯ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ. ಬಿಡುಗಡೆಯಾದ ಮೊದಲ ದಿನವೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಒಂದು ದಾಖಲೆಯನ್ನು ಈಗಾಗಲೇ ವಿಕ್ರಾಂತ್ ರೋಣ ಮುರಿದಿದ್ದಾನೆ ಎನ್ನುವುದಾಗಿ ಸುದ್ದಿ ತಿಳಿದುಬಂದಿದ್ದು ಪ್ರತಿಯೊಬ್ಬರು ಕನ್ನಡಿಗರು ಇದೊಂದು ಹೆಮ್ಮೆ ಪಡುವ ವಿಚಾರ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೆ ಮೊದಲ ದಿನವೇ ಇಡೀ ಭಾರತ ದೇಶದಲ್ಲಿ 1047 ಕನ್ನಡ ಶೋಗಳನ್ನು ವಿಕ್ರಾಂತ್ ರೋಣ ಹೊಂದಿದ್ದಾನೆ. ಇದೇ ಪಟ್ಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಮೊದಲ ದಿನ ಇಡೀ ದೇಶದಾದ್ಯಂತ 913 ಕನ್ನಡ ಶೋಗಳನ್ನು ಹೊಂದಿತ್ತು, ಈ ಮೂಲಕ ಮೊದಲ ದಿನವೇ ಕೆಜಿಎಫ್ ದಾಖಲೆಯನ್ನು ಪುಡಿ ಪುಡಿ ಮಾಡಿದೆ. ವಿಕ್ರಾಂತ್ ರೋಣ ಈ ವಿಚಾರದ ಮೂಲಕ ಕನ್ನಡಿಗರ ಮನಸ್ಸನ್ನು ಗೆಲ್ಲಲು ಮೊದಲ ದಿನದಿಂದಲೇ ಪ್ರಾರಂಭಿಸಿದ್ದಾನೆ. ಕಲೆಕ್ಷನ್ ವಿಚಾರದಲ್ಲಿ ಕೂಡ ಪಾಸಿಟಿವ್ ರೆಸ್ಪಾನ್ಸ್ ಗಳು ಕೇಳಿ ಬರುತ್ತಿರುವುದರಿಂದ ಕನ್ನಡ ಚಿತ್ರರಂಗದ ಮಟ್ಟಿಗೆ ಕೆಜಿಎಫ್ ಹೊರತುಪಡಿಸಿ ವಿಕ್ರಾಂತ್ ರೋಣ ದೊಡ್ಡಮಟ್ಟದ ದಾಖಲೆಯನ್ನು ನಿರ್ಮಿಸಲಿದ್ದಾರೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಚಿತ್ರ ನೀವು ಕೂಡ ನೋಡಿದ್ದರೆ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.