ಮೊದಲ ರಾತ್ರಿ ಮುಗಿದ ಮರು ದಿನ ಮೊದಲ ದಿನವೇ ಹೆಣ್ಣಿಗೆ ಮೂಡಿಬರುವ 3 ಆಲೋಚನೆಗಳು ಯಾವುವು ಗೊತ್ತಾ??
ನಮಸ್ಕಾರ ಸ್ನೇಹಿತರೇ ಮದುವೆ ಎನ್ನೋದು ಗಂಡು ಹಾಗೂ ಹೆಣ್ಣು ಇಬ್ಬರಿಗೂ ಕೂಡ ಜೀವನದಲ್ಲಿ ಹೊಸ ಅನುಭವವನ್ನು ನೀಡುವ ಘಟನೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಇದೊಂದು ನಿರ್ಧಾರ ಎನ್ನುವುದು ಇಬ್ಬರೂ ಸೇರಿ ಜೀವನಪೂರ್ತಿ ನಿಭಾಯಿಸಬೇಕು. ಇದಕ್ಕಾಗಿ ಮದುವೆ ಎನ್ನುವುದು ಕೇವಲ ಸಂತೋಷವನ್ನು ಮಾತ್ರವಲ್ಲದೇ ಹೊಸ ಜವಾಬ್ದಾರಿಯನ್ನು ಕೂಡ ತರುತ್ತದೆ.
ಅದರಲ್ಲೂ ಹೆಣ್ಣು ಮಕ್ಕಳಿಗೆ ಮದುವೆ ನಂತರದ ಜೀವನ ಎನ್ನುವುದು ಸಾಕಷ್ಟು ಜವಾಬ್ದಾರಿಗಳನ್ನು ಹಾಗೂ ಹೊಸ ಅನುಭವವನ್ನು ತರುತ್ತದೆ. ಯಾಕೆಂದರೆ ಮದುವೆಯಾದ ನಂತರ ಗಂಡು ಮಕ್ಕಳು ತಮ್ಮ ಮನೆಯಲ್ಲಿಯೇ ಇರುತ್ತಾರೆ. ಆದರೆ ಹೆಣ್ಣುಮಕ್ಕಳು ಮಾತ್ರ ತಮಗೆ ಗೊತ್ತಿಲ್ಲದ ಒಂದು ಹೊಸ ಮನೆಗೆ ಅಥವಾ ಒಂದು ಹೊಸ ಜಗತ್ತಿಗೆ ತೆರೆದು ಕೊಳ್ಳುತ್ತಾರೆ. ಹೀಗಾಗಿ ಮದುವೆ ಎನ್ನುವುದು ಅವರಿಗೆ ಸಡನ್ನಾಗಿ ಶಾ’ಕ್ ನೀಡುತ್ತದೆ ಎಂದರೆ ತಪ್ಪಾಗಲಾರದು. ಒಂದು ವೇಳೆ ಅರೆಂಜ್ ಮ್ಯಾರೇಜ್ ಆಗುತ್ತಿದ್ದರೆ ಕೇವಲ ಗಂಡನ ಮನೆಯವರು ಮಾತ್ರವಲ್ಲದೆ ಗಂಡ ಕೂಡ ಅವರಿಗೆ ಅಪರಿಚಿತನಂತೆ ಕಾಣಿಸುತ್ತಾನೆ.

ಹೀಗಾಗಿ ಮದುವೆಯಾದ ನಂತರ ಹೆಣ್ಣು ಮಕ್ಕಳಿಗೆ ಗಂಡನ ಮನೆಯಲ್ಲಿ ಹೇಗೆ ಬದುಕುವುದು ಹೇಗೆ ಇರಬಹುದು ಎನ್ನುವ ಹಲವಾರು ಚಿಂತೆಗಳು ಮೊದಲ ದಿನದಿಂದಲೇ ಪ್ರಾರಂಭವಾಗುತ್ತದೆ. ಹೀಗಾಗಿ ರಿಸರ್ಚ್ ಪ್ರಕಾರ ಮದುವೆಯಾದ ನಂತರ ಮೊದಲ ದಿನದ ಬೆಳಿಗ್ಗೆ ಮದುಮಗಳ ಮನಸ್ಸಿನಲ್ಲಿ ಮೂಡುವ ಚಿಂತೆಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಇವುಗಳು ಪ್ರತಿಷ್ಠಿತ ಕಂಪನಿಯೊಂದು ನಡೆಸಿರುವ ರಿಸರ್ಚು ಪ್ರಕಾರ ತಿಳಿದುಬಂದಿರುವ ಫಲಿತಾಂಶಗಳ ಆಗಿವೆ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.
ಬೆಳಿಗ್ಗೆ ಬೇಗ ಏಳುವ ಚಿಂತೆ; ಹೌದು ಗೆಳೆಯರೇ ತಮ್ಮ ಮನೆಯಲ್ಲಿ ಇದ್ದಾಗ ಸಾಮಾನ್ಯವಾಗಿ ತಮಗೆ ಬೇಕಾದ ಸಮಯದಲ್ಲಿ ಎದ್ದೇಳುವ ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಮದುವೆ ಆದ ನಂತರ ಬೇಗ ಎದ್ದೇಳುವ ಅಭ್ಯಾಸವನ್ನು ಮಾಡಿಕೊಳ್ಳಬೇಕಾಗುತ್ತದೆ. ಬೆಳಿಗ್ಗೆ ಬೇಗ ಎದ್ದು ಗಂಡನಿಗೆ ಸೇರಿದಂತೆ ಅತ್ತೆ ಮಾವಂದಿರಿಗೆ ಕಾಫಿ ನೀಡುವ ಮೂಲಕ ಅವರ ಮನಸ್ಸನ್ನು ಗೆಲ್ಲುವ ಅಭ್ಯಾಸವನ್ನು ಮೊದಲ ದಿನದಿಂದಲೇ ಮಾಡಿಕೊಳ್ಳಬೇಕು ಎನ್ನುವ ಒತ್ತಡ ಅವರ ಮನಸ್ಸಿನಲ್ಲಿರುತ್ತದೆ ಈ ಚಿಂತೆ ಕೂಡ ಮೊದಲ ದಿನದ ಬೆಳಗ್ಗೆ ಮೂಡಿಬರುತ್ತದೆ.
ಪತಿಯ ಕುರಿತಂತೆ ಗೊಂದಲಗಳು; ಲವ್ ಮ್ಯಾರೇಜ್ ಆಗಿರುವ ಹುಡುಗಿಯರಿಗೆ ಇದರ ಕುರಿತಂತೆ ಯಾವುದೇ ಗೊಂದಲಗಳು ಇರುವುದಿಲ್ಲ ಯಾಕೆಂದರೆ ತಾವು ಮದುವೆಯಾಗುತ್ತಿರುವ ಹುಡುಗನ ಜೊತೆಗೆ ಸಾಕಷ್ಟು ಸಮಯಗಳನ್ನು ಅವರು ಕಳೆದಿರುತ್ತಾರೆ. ಆದರೆ ಅರೆಂಜ್ ಮ್ಯಾರೇಜ್ ಆಗಿರುವ ಹುಡುಗರ ಕುರಿತಂತೆ ಹುಡುಗಿಗೆ ಯಾವುದೇ ಪರಿಪಕ್ವವಾದ ಆಲೋಚನೆಗಳು ಇರುವುದಿಲ್ಲ. ಆತನ ಇಷ್ಟ-ಕಷ್ಟಗಳನ್ನು ಮೊದಲ ದಿನದಿಂದಲೇ ಕಲಿತುಕೊಂಡು ಸಂಸಾರವನ್ನು ಸರಿದೂಗಿಸುವ ಅಂತಹ ಆಲೋಚನೆ ಅವರ ಮನಸ್ಸಿನಲ್ಲಿ ಮೂಡುತ್ತದೆ. ಹೀಗಾಗಿ ಯಾವುದು ಇಷ್ಟ ಯಾವುದು ಕಷ್ಟ ಎಂಬುದನ್ನು ಆತನ ಅಭಿಪ್ರಾಯಗಳಿಗೆ ಅನುಸಾರವಾಗಿ ನಡೆಯುವ ಕುರಿತಂತೆ ಅವರು ಮೊದಲ ದಿನದಿಂದಲೇ ಚಿಂತಿಸಲು ಪ್ರಾರಂಭಿಸುತ್ತಾರೆ.

ಗಂಡನ ಮನೆಯ ವಾತಾವರಣ ಹೇಗಿರಬಹುದು ಎನ್ನುವ ಗೊಂದಲ; ಸಾಮಾನ್ಯವಾಗಿ ಚಿಕ್ಕವಯಸ್ಸಿನಿಂದಲೂ ಕೂಡ ತಮ್ಮ ತವರು ಮನೆಯಲ್ಲಿ ಬೆಳೆದು ನಂತರ ಒಂದು ದಿನ ತಟ್ಟನೆ ಗಂಡನ ಮನೆಗೆ ಜೀವನಪೂರ್ತಿ ಜೀವನ ಮಾಡಲು ಹೋಗಬೇಕು ಎಂದಾಗ ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಗೊಂದಲ ಮೂಡುವುದು ಸಹಜ. ಎಲ್ಲಕ್ಕಿಂತ ಹೆಚ್ಚಾಗಿ ಗಂಡನ ಮನೆಯಲ್ಲಿ ಜೀವನಪೂರ್ತಿ ಇರಬೇಕು ಎಂದಾಗ ಅಲ್ಲಿರುವ ಗಂಡನ ಮನೆಯ ಸಂಬಂಧಿಕರ ಅಭಿಪ್ರಾಯ ನನ್ನ ಮೇಲೆ ಹೇಗಿರುತ್ತದೆ ಅವರನ್ನು ಆಕರ್ಷಿಸಲು ನಾನೇನು ಮಾಡಬೇಕು ಎನ್ನುವ ಕುರಿತಂತೆ ಅವರಲ್ಲಿ ಆಲೋಚನೆಗಳು ಮೂಡಲು ಪ್ರಾರಂಭವಾಗುತ್ತದೆ. ಹೀಗಾಗಿ ಅಲ್ಲಿ ಹೇಗೆ ನಡೆದುಕೊಂಡರೆ ಎಲ್ಲರಿಗೂ ನಾನು ಇಷ್ಟ ಆಗುತ್ತೇನೆ ಎಂಬುದಾಗಿ ತಿಳಿದು ಅದರಂತೆ ನಡೆಯಲು ಲೆಕ್ಕಾಚಾರ ಹಾಕಲು ಪ್ರಾರಂಭಿಸುತ್ತಾರೆ. ಇವಿಷ್ಟು ವಿಚಾರಗಳನ್ನು ಮದುವೆಯಾದ ಮೊದಲ ದಿನ ಬೆಳಿಗ್ಗೆ ಮದುಮಗಳು ಯೋಚಿಸಲು ಪ್ರಾರಂಭಿಸುತ್ತಾಳೆ ಎಂಬುದಾಗಿ ರಿಸರ್ಚ್ ಮೂಲಕ ತಿಳಿದು ಬಂದಿದೆ.