ಬಿಗ್ ಷಾಕಿಂಗ್: ಕೊಹ್ಲಿ ರವರಿಗೆ ಯಾವುದೇ ಇಂಜುರಿಯಾಗಿಲ್ಲ, ಆದರೂ ತಂಡದಿಂದ ಡ್ರಾಪ್. ಶುರುವಾಯ್ತು ಹೊಸ ಅನುಮಾನ. ಏನು ಗೊತ್ತೇ??

42

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಕೆನ್ನಿಂಗ್ಟನ್ ಓವಲ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ದೊಡ್ಡಮಟ್ಟದ ಗೆಲುವು ಸಾಧಿಸುವ ಮೂಲಕ ಮೊದಲ ಏಕದಿನ ಪಂದ್ಯವನ್ನು ಗೆದ್ದುಕೊಂಡಿದೆ. ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡ ಪ್ರತಿಯೊಂದು ವಿಧದಲ್ಲೂ ಕೂಡ ಸರ್ವಶಕ್ತ ವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಹೌದು ರೋಹಿತ್ ಶರ್ಮಾ ನಾಯಕತ್ವದಲ್ಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ರವರ ಮಾರ್ಗದರ್ಶನದಲ್ಲಿ ಭಾರತೀಯ ಕ್ರಿಕೆಟ್ ತಂಡ ಆಂಗ್ಲರ ನೆಲದಲ್ಲಿ ಆಂಗ್ಲರಿಗೆ ಮಣ್ಣುಮುಕ್ಕಿಸಿದೇ ಎಂದರೆ ತಪ್ಪಾಗಲಾರದು. ಆದರೆ ಮೊದಲ ಏಕದಿನ ಪಂದ್ಯಕ್ಕೆ ಒಂದು ದಿನ ಇರುವ ಮುನ್ನವೇ ವಿರಾಟ್ ಕೊಹ್ಲಿ ರವರಿಗೆ ತೊಡೆಸಂದು ಇರುವ ಕಾರಣದಿಂದಾಗಿ ಅವರನ್ನು ತಂಡದಿಂದ ಮೊದಲ ಏಕದಿನ ಪಂದ್ಯದಿಂದ ಕೈಬಿಡಲಾಗುತ್ತದೆ ಎಂಬುದಾಗಿ ಮೊದಲೇ ಮಾತುಗಳು ಕೇಳಿಬಂದಿದ್ದವು ಆದರೆ ಟಾಸ್ ಸಂದರ್ಭದಲ್ಲಿ ಈ ಮಾತು ನಿಜವಾಗಿತ್ತು. ವಿರಾಟ್ ಕೊಹ್ಲಿ ರವರನ್ನು ಇದೇ ಮೊದಲ ಬಾರಿಗೆ ಅವರ ಕಳಪೆ ಫಾರ್ಮ್ ನಂತರ ತಂಡದಿಂದ ಡ್ರಾಪ್ ಮಾಡಲಾಗಿತ್ತು. ಅವರ ಬದಲಿಗೆ ಮೊದಲ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಲು ಶ್ರೇಯಸ್ ಅಯ್ಯರ್ ರವರಿಗೆ ಅವಕಾಶವನ್ನು ನೀಡಲಾಗಿತ್ತು.

ಆದರೆ ಸೋಶಿಯಲ್ ಮೀಡಿಯಾದಲ್ಲಿ ಇದರ ಕುರಿತಂತೆ ಬೇರೆ ವಿಚಾರಗಳು ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹೌದು ಗೆಳೆಯರೇ ವಿರಾಟ್ ಕೊಹ್ಲಿ ಅಭಿಮಾನಿಗಳು ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ಫ್ಯಾನ್ ಈ ಕುರಿತಂತೆ ಅನುಮಾನ ವ್ಯಕ್ತಪಡಿಸುತ್ತಾ ನಿಜವಾಗಲೂ ವಿರಾಟ್ ಕೊಹ್ಲಿ ರವರಿಗೆ ಇಂಜುರಿ ಆಗಿದೆಯಾ ಇಲ್ಲವೇ ಅದರ ಕುರಿತಂತೆ ನಾಟಕವನ್ನು ಮಾಡುತ್ತಿದ್ದಾರೆ ಎಂಬುದಾಗಿ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಇನ್ನು ಕೆಲವರು ಆಟಕ್ಕಿಂತ ದೊಡ್ಡವರು ಯಾರು ಅಲ್ಲ ವಿರಾಟ್ ಕೊಹ್ಲಿ ಅವರ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂಬುದಾಗಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ರವರನ್ನು ಮೊದಲ ಪಂದ್ಯದಿಂದ ಡ್ರಾಪ್ ಮಾಡಿರುವ ವಿಚಾರದ ಕುರಿತಂತೆ ಅಸಮಾಧಾನವನ್ನು ಹೊರಹಾಕಿದ್ದಾರೆ.

Get real time updates directly on you device, subscribe now.