ರಶ್ಮಿಕಾ ರವರನ್ನು ಇನ್ನು ಯಾರು ತಡೆಯಲು ಸಾಧ್ಯವೇ ಇಲ್ಲಾ ಬಿಡಿ, ಏನಾಗಿದೆ ಗೊತ್ತೇ?? ರಶ್ಮಿಕಾ ರವರಿಗೆ ಮತ್ತೊಂದು ಅದೃಷ್ಟ.
ನಮಸ್ಕಾರ ಸ್ನೇಹಿತರೇ ರಶ್ಮಿಕ ಮಂದಣ್ಣ ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ಸಿನಿಮಾಗಳನ್ನು ಪ್ರಾರಂಭಿಸುತ್ತಾರೆ. ಸಾನ್ವಿ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನಗೆಲ್ಲುವ ರಶ್ಮಿಕ ಮಂದಣ್ಣ ಮತ್ತೆ ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ ಎಂದು ಹೇಳಬಹುದಾಗಿದೆ. ಕನ್ನಡ ಚಿತ್ರರಂಗದಲ್ಲಿ ಕಡಿಮೆಯಾಗಿ ನಟಿಸುತ್ತಿದ್ದರು ಕೂಡ ಭಾರತೀಯ ಚಿತ್ರರಂಗದಲ್ಲಿ ಅವರ ಛಾಪು ಹಾಗೂ ಚಾರ್ಮ್ ಎರಡು ಕೂಡ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗು ತಮಿಳು ಹಿಂದಿ ಸಿನಿಮಾ ರಂಗಗಳಲ್ಲಿಯೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರ ರವರ ಜೊತೆಗೆ ಮಿಷನ್ ಮಜ್ನು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ರವರ ಜೊತೆಯಲ್ಲಿ ಕೂಡ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಮತ್ತೊಂದು ಹಿಂದಿ ಸಿನಿಮಾದಲ್ಲಿ ಕೂಡ ಈಗಾಗಲೇ ನಟಿಸುತ್ತಿದ್ದಾರೆ. ಇನ್ನು ತಮಿಳು ಚಿತ್ರರಂಗದ ಕುರಿತಂತೆ ಮಾತನಾಡುವುದಾದರೆ ಕಾಲಿವುಡ್ ಚಿತ್ರರಂಗದ ದೊಡ್ಡ ಸ್ಟಾರ್ ನಟ ಆಗಿರುವ ತಳಪತಿ ವಿಜಯ್ ನಟನೆಯ ವರಿಸು ಸಿನಿಮಾದಲ್ಲಿ ಕೂಡ ನಾಯಕಿಯಾಗಿ ರಶ್ಮಿಕ ಮಂದಣ್ಣ ಆಯ್ಕೆಯಾಗಿದ್ದಾರೆ. ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಎಲ್ಲಾ ಪ್ರಮುಖ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಿಗಿಂತ ಬೇಡಿಕೆಯಲ್ಲಿರುವ ಹಾಗೂ ಮುಂದಿರುವ ರಶ್ಮಿಕ ಮಂದಣ್ಣ ಈಗ ಮತ್ತೊಂದು ಸಿನಿಮಾದ ಮೂಲಕ ಯಾರ ಕೈಗೂ ಸಿಗದ ಹಾಗೆ ದೊಡ್ಡಮಟ್ಟದ ಜಿಗಿತವನ್ನು ಕಂಡಿದ್ದಾರೆ ಎಂದು ಹೇಳಬಹುದಾಗಿದೆ.
ಹೌದು ಗೆಳೆಯರೇ ಬಾಲಿವುಡ್ನಲ್ಲಿ ಟೈಗರ್ ಶ್ರಾಫ್ ಜೊತೆಗೆ ಹೆಸರಿಡದ ಸಿನಿಮಾದಲ್ಲಿ ರಶ್ಮಿಕ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದು ಆಕ್ಷನ್ ಹಾಗೂ ರೊಮ್ಯಾಂಟಿಕ್ ಲವ್ ಸ್ಟೋರಿ ಇರುವಂತಹ ವಿಭಿನ್ನ ಚಿತ್ರ ಕಥೆಯನ್ನು ಹೊಂದಿದೆ ಎಂಬುದಾಗಿ ತಿಳಿದುಬಂದಿದೆ. ಈ ಸಿನಿಮಾವನ್ನು ಬಿಗ್ ಬಜೆಟ್ ನಲ್ಲಿ ಬಾಲಿವುಡ್ ಚಿತ್ರರಂಗದ ಹೆಸರಾಂತ ನಿರ್ಮಾಪಕ ಕರಣ್ ಜೋಹರ್ ನಿರ್ಮಾಣ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.