ಯುವ ನಟಿ, ಕನ್ನಡತಿ ಕೃತಿ ಶೆಟ್ಟಿ ರವರಿಗೆ ಇಬ್ಬರು ನಟರ ಜೊತೆ ನಟಿಸುವ ಆಸೆಯಂತೆ. ಆ ಟಾಪ್ ನಟರು ಯಾರಂತೆ ಗೊತ್ತೇ?

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಮ್ಮ ಕನ್ನಡ ಮೂಲದಿಂದ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು ಅತ್ಯಂತ ಹೆಚ್ಚು ಯಶಸ್ಸನ್ನು ಪಡೆದಿರುವ ನಟಿಯರ ಸಾಲಿನಲ್ಲಿ ಅಗ್ರ ಗಣ್ಯರಾಗಿ ಅನುಷ್ಕಾ ಶೆಟ್ಟಿ ಹಾಗೂ ರಶ್ಮಿಕ ಮಂದಣ್ಣ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಕರಾವಳಿ ಮೂಲದ ನಟಿ ಆಗಿರುವ ಕೃತಿ ಶೆಟ್ಟಿ ರವರು ಸಖತ್ ಸೌಂಡ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಸ್ಟಾರ್ ನಟಿ ಆಗುವ ಭರವಸೆ ನೀಡುತ್ತಿದ್ದಾರೆ. ಹೌದು ಗೆಳೆಯರೇ ಉಪ್ಪೇನ ಸಿನಿಮಾದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ತಮ್ಮ ಮೊದಲ ಸಿನಿಮಾದ ಮೂಲಕ ಕಾಲಿಡುವ ಮೂಲಕ ಕೃತಿ ಶೆಟ್ಟಿ ರವರು ಮೊದಲ ಸಿನಿಮಾದಲ್ಲಿ ತೆಲುಗು ಮಂದಿಯ ಮನಸ್ಸನ್ನು ಕದಿಯುವಲ್ಲಿ ಯಶಸ್ವಿಯಾಗುತ್ತಾರೆ.

ಮೊದಲ ಸಿನಿಮಾದಿಂದಲೇ ತಮ್ಮ ಅದೃಷ್ಟವನ್ನು ಗೆಲ್ಲುವ ಕೃತಿ ಶೆಟ್ಟಿ ಅವರು ಈಗಾಗಲೇ ನಾನಿ ರಾಮ್ ಪೊತಿನೇನಿ ಸೇರಿದಂತೆ ಹಲವಾರು ತೆಲುಗು ಚಿತ್ರರಂಗದ ದಿಗ್ಗಜ ನಟರೊಂದಿಗೆ ನಟಿಸುತ್ತಿದ್ದಾರೆ. ಈ ಹಿಂದೆ ಬಾಲಯ್ಯ ಅವರ ಸಿನಿಮಾವನ್ನು ವಯಸ್ಸಿನ ಅತಿಯಾದ ಅಂತರದ ಕಾರಣದಿಂದಾಗಿ ರಿಜೆಕ್ಟ್ ಮಾಡಿಕೊಡ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಮೂಲಕ ತಮ್ಮ ಚಿತ್ರರಂಗದ ಕರಿಯರ್ ನ್ನು ಯೋಚಿಸಿ ನಿರ್ಧಾರ ತೆಗೆದುಕೊಂಡು ರಚಿಸುತ್ತಿದ್ದಾರೆ ಎಂಬುದಾಗಿ ಎಲ್ಲರೂ ಕೂಡ ಮೆಚ್ಚುಗೆ ಸೂಚಿಸಿದರು. ಈಗಾಗಲೇ ಕೃತಿ ಶೆಟ್ಟಿ ಅವರ ಕೈಯಲ್ಲಿ ಹಲವಾರು ಸ್ಟಾರ್ ನಟರ ಸಿನಿಮಾಗಳ ಅವಕಾಶವಿದ್ದು ಆದರೆ ಕೃತಿ ಶೆಟ್ಟಿ ಅವರಿಗೆ ಇಬ್ಬರು ತೆಲುಗು ನಟರ ಜೊತೆಗೆ ನಟಿಸಲೇ ಬೇಕು ಎನ್ನುವ ಆಸೆ ಇದೆಯಂತೆ.

ಹೌದು ಗೆಳೆಯರೆ ಕೃತಿ ಶೆಟ್ಟಿ ಅವರಿಗೆ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ಹಾಗೂ ಮೆಗಾ ಶಾಮಿಲಿಯ ಮೆಗಾ ಪವರ್ ಸ್ಟಾರ್ ಆಗಿರುವ ರಾಮಚರಣ್ ಅವರ ಜೊತೆಗೆ ನಟಿಸಲೇ ಬೇಕು ಎನ್ನುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೃತಿ ಶೆಟ್ಟಿ ರವರು ಚಿತ್ರರಂಗದಲ್ಲಿ ಬೆಳೆಯುತ್ತಿರುವ ವೇಗವನ್ನು ನೋಡಿದರೆ ಖಂಡಿತವಾಗಿ ಅತಿ ಶೀಘ್ರದಲ್ಲಿ ಅವರ ಈ ಆಸೆ ಕೂಡ ನೆರವೇರಲಿದೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Get real time updates directly on you device, subscribe now.