ಡ್ರಾಮಾ ಜೂನಿಯರ್ ನಲ್ಲಿ ಮಸ್ತ್ ಡಾನ್ಸ್ ಮಾಡಿದ ಮಲ್ಲ ಜೋಡಿ, ರವಿಚಂದ್ರನ್ ಹಾಗೂ ಪ್ರಿಯಾಂಕಾ ಡಾನ್ಸ್ ಗೆ ಪ್ರೇಕ್ಷಕರು ಫಿದಾ
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಕನಸುಗಾರ ಎನ್ನುವುದಾಗಿ ನಮ್ಮೆಲ್ಲರ ನೆಚ್ಚಿನ ನಟ ನಿರ್ದೇಶಕ ನಿರ್ಮಾಪಕ ಕ್ರೇಜಿಸ್ಟಾರ್ ರವಿಚಂದ್ರನ್ ರವರನ್ನು ಕರೆಯುತ್ತಾರೆ. ಆಡು ಮುಟ್ಟದ ಸೊಪ್ಪಿಲ್ಲ ರವಿಚಂದ್ರನ್ ರವರು ತಿಳಿಯದ ಸಿನಿಮಾ ಶಿಕ್ಷಣ ಇಲ್ಲ ಎಂದು ಹೇಳಬಹುದಾಗಿದೆ. ಪ್ರತಿಯೊಂದು ವಿಭಾಗದಲ್ಲಿ ಕೂಡ ಕೆಲಸವನ್ನು ಮಾಡಬಲ್ಲ ಚಾಣಾಕ್ಷತೆ ಹಾಗು ಕ್ಷಮತೆ ರವಿಚಂದ್ರನ್ ರವರಿಗೆ ಇದೆ ಎಂದರೆ ತಪ್ಪಾಗಲಾರದು.
ಇನ್ನು ಇತ್ತೀಚಿನ ದಿನಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಸಿನಿಮಾ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪುಟಾಣಿ ಮಕ್ಕಳ ಪ್ರತಿಭೆ ಅನಾವರಣದ ಕಾರ್ಯಕ್ರಮ ವಾಗಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ತೀರ್ಪುಗಾರರಾಗಿ ಮಕ್ಕಳೊಂದಿಗೆ ಮಗುವಾಗಿ ಬಿಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಆಗಾಗ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳನ್ನು ಕೂಡ ಆಹ್ವಾನಿಸಲಾಗುತ್ತದೆ.
ಈ ಬಾರಿ ಕ್ರೇಜಿಸ್ಟಾರ್ ರವಿಚಂದ್ರನ್ ರವರೊಂದಿಗೆ ಮಲ್ಲ ಸಿನಿಮಾದಲ್ಲಿ ಜೊತೆಯಾಗಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಹಾಗೂ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ರವರ ವರದಿಯಾಗಿರುವ ನಟಿ ಪ್ರಿಯಾಂಕ ಉಪೇಂದ್ರ ರವರು ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಪ್ರಿಯಾಂಕ ಉಪೇಂದ್ರ ರವರ ಜೊತೆಗೆ ಸ್ಟೆಪ್ ಹಾಕಿರೋದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು ಗೆಳೆಯರೇ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಸ್ಟೆಪ್ ಹಾಕೋದು ಅಂದ್ರೆ ಸುಮ್ನೆನಾ. ಎವರ್ಗ್ರೀನ್ ಬೆಡಗಿ ಆಗಿರುವ ಪ್ರಿಯಾಂಕ ಉಪೇಂದ್ರ ರವರ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ರವರು ನನ್ನಾಣೆ ಕೇಳೆ ಪ್ರಾಣವೇ ಹಾಡಿಗೆ ಸ್ಟೆಪ್ ಹಾಕಿರೋದು ಈಗ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಸಖತ್ ವೈರಲ್ ಆಗಿದೆ.