ಸಮನ್ವಿ ರವರನ್ನು ಕಳೆದುಕೊಂಡು ದುಕ್ಕದಲ್ಲಿ ಇದ್ದ ಅಮೃತ ರವರ ಬದುಕಲ್ಲಿ ಹೊಸ ಬೆಳಕು: ಗಂಡು ಮಗುವಿಗೆ ಜನ್ಮ ನೀಡಿದ ನಟಿ
ನಮಸ್ಕಾರ ಸ್ನೇಹಿತರೆ ಕಿರುತೆರೆ ಲೋಕದಲ್ಲಿ ಒಂದಾನೊಂದು ಕಾಲದಲ್ಲಿ ಬಹುತೇಕ ಎಲ್ಲಾ ಪ್ರಮುಖ ಧಾರವಾಹಿಗಳಲ್ಲಿ ಕೂಡ ಮುಖ್ಯ ಪಾತ್ರದಲ್ಲಿ ಮಿಂಚಿ ಮೆರೆದಂತಹ ನಟಿಯೆಂದರೆ ಅದು ನಟಿ ಅಮೃತ ನಾಯ್ಡು. ಅಮೃತ ನಾಯ್ಡು ಹಾಗೂ ರೂಪೇಶ್ ದಂಪತಿಗಳಿಗೆ ಸಮನ್ವಿ ಎನ್ನುವ ಮುದ್ದಾದ ಮಗಳು ಕೂಡ ಇದ್ದಳು. ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವಂತಹ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಅಮೃತ ನಾಯ್ಡು ಹಾಗೂ ಸಮನ್ವಿ ಇಬ್ಬರೂ ಕೂಡ ಭಾಗವಹಿಸಿದ್ದರು. ಅದಾದ ಕೆಲವೇ ತಿಂಗಳಲ್ಲಿ ಸಮಂವಿ ಕೋಣನಕುಂಟೆಯಲ್ಲಿ ನಡೆದಂತಹ ರಸ್ತೆ ಅಪ’ಘಾತದಲ್ಲಿ ಅಕಾಲಿಕ ಮರಣವನ್ನು ಹೊಂದಬೇಕಾಗುತ್ತದೆ.
ತಮ್ಮ ಮುದ್ದು ಮಗಳನ್ನು ಕಳೆದುಕೊಂಡ ದುಃಖದಲ್ಲಿ ರೂಪೇಶ್ ಹಾಗೂ ಅಮೃತ ನಾಯ್ಡು ದಂಪತಿಗಳು ಇದ್ದರು. ಬಾಳಿ ಬೆಳಗ ಬೇಕಾಗಿದ್ದ ಮಗಳು ಚಿಕ್ಕವಯಸ್ಸಿನಲ್ಲಿಯೇ ಬಾರದ ಲೋಕದತ್ತ ಪಯಣ ಬೆಳೆಸಿರುವುದು ನಿಜಕ್ಕೂ ಕೂಡ ಪೋಷಕರಿಗೆ ತಡೆಯಲಾರದ ದುಃಖವನ್ನು ತಂದಿತ್ತು. ಆದರೆ ಜುಲೈ 2ರಂದು ಇಬ್ಬರು ದಂಪತಿಗಳ ಜೀವನದಲ್ಲಿ ನಿಜವಾದ ಸಂತಸ ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೆ ಅಂದಿನಿಂದ ಇಂದಿನವರೆಗೂ ಕೂಡ ರೂಪೇಶ್ ಹಾಗೂ ಅಮೃತ ನಾಯ್ಡು ದಂಪತಿಗಳು ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದರು. ಈಗ ಅಮೃತ ನಾಯ್ಡುರವರು ಗಂಡು ಮಗುವಿಗೆ ಜುಲೈ 2ರಂದು ಜನ್ಮ ನೀಡುವ ಮೂಲಕ ಕಳೆದುಕೊಂಡ ಸಮನ್ವಿಯನ್ನು ಮತ್ತೆ ಮರುಜನ್ಮದ ಮೂಲಕ ಪಡೆದುಕೊಂಡಿದ್ದೇವೆ ಎನ್ನುವ ಸಂತೋಷದಲ್ಲಿ ಇಬ್ಬರು ದಂಪತಿಗಳಿದ್ದಾರೆ ಎಂದು ಹೇಳಬಹುದಾಗಿದೆ.

ನಿಜಕ್ಕೂ ಕೇವಲ ಇದು ಅವರಿಬ್ಬರಿಗೆ ಮಾತ್ರವಲ್ಲದೆ ಅವರು ತಮ್ಮ ಮಗಳನ್ನು ಕಳೆದುಕೊಂಡಿರುವ ದುಃಖವನ್ನು ತಿಳಿದುಕೊಂಡಿರುವ ಪ್ರತಿಯೊಬ್ಬ ಕನ್ನಡಿಗರಿಗೂ ಕೂಡ ಇದೊಂದು ಸಂತೋಷದ ವಿಚಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ಶುಭಾಶಯಗಳನ್ನು ಕೊಡಬಹುದಾಗಿದೆ.