ದೊಡ್ಮನೆ ಮಗ ಶಿವಣ್ಣ ರವರನ್ನು ಬಿಡದ ಟ್ರೊಲ್ ಮಾಡುವ ಜನ, ಮೊದಲ ಬಾರಿಗೆ ಬೇಸರ ವ್ಯಕ್ತ ಪಡಿಸಿ ಶಿವಣ್ಣ ಹೇಳಿದ್ದೇನು ಗೊತ್ತೇ?
ನಮಸ್ಕಾರ ಸ್ನೇಹಿತರೇ ಇದೇ ಜುಲೈ 12 ಬಂದರೆ ನಮ್ಮೆಲ್ಲರ ನೆಚ್ಚಿನ ಕರುನಾಡ ಚಕ್ರವರ್ತಿ ಶಿವಣ್ಣನವರು 60 ವರ್ಷವನ್ನು ಪೂರೈಸುತ್ತಾರೆ. 60 ವರ್ಷ ಪೂರ್ಣವಾಗಿದ್ದರೆ ಕೂಡ ಶಿವಣ್ಣ ಇಂದಿಗೂ ಕೂಡ 25ರ ಹರೆಯದ ಯುವಕನಂತೆ ನಟಿಸುತ್ತಾರೆ ಹಾಗೂ ನೃತ್ಯ ಮಾಡುತ್ತಾರೆ. ನಿಜಕ್ಕೂ ಕೂಡ ಕರುನಾಡ ಚಕ್ರವರ್ತಿ ಶಿವಣ್ಣ ಪ್ರತಿಯೊಬ್ಬ ಯುವಕಲಾವಿದರಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೆ ಶಿವಣ್ಣ ನಟನೆಯ ಬೈರಾಗಿ ಸಿನಿಮಾ ಇತ್ತೀಚಿಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. 3 ಜನರೇಶನ್ ಗಳಿಂದಲೂ ಕೂಡಾ ಕನ್ನಡ ಚಿತ್ರರಂಗದಲ್ಲಿ ಟಾಪ್ ನಾಯಕನಟನಾಗಿ ಶಿವಣ್ಣ ಕಾಣಿಸಿಕೊಳ್ಳುತ್ತಲೇ ಇದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಶಿವಣ್ಣ ಸಾಕಷ್ಟು ಟ್ರೋಲ್ ಪೇಜ್ ಗಳಿಂದ ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ಹೌದು ಗೆಳೆಯರೇ ಇತ್ತೀಚಿಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಹಾಗೂ ನಿರ್ದೇಶನದ ಸಿನಿಮಾ ಲಾಂಚ್ ಕಾರ್ಯಕ್ರಮದಲ್ಲಿ ಶಿವಣ್ಣ ಕಾಮರಾ ಕಣ್ಣಿಗೆ ಹಾಸ್ಯಾಸ್ಪದವಾಗಿ ಕಂಡಿರುವುದನ್ನು ಪ್ರತಿಯೊಂದು ಟ್ರೋಲ್ ಪೇಜುಗಳು ಕೂಡ ಟ್ರೋಲ್ ಮಾಡುತ್ತಿವೆ. ಕೇವಲ ಎಷ್ಟು ಮಾತ್ರವಲ್ಲದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಕೂಡ ಮಾಧ್ಯಮದ ಕ್ಯಾಮೆರಾಗಳು ಕ್ಯಾಪ್ಚರ್ ಮಾಡಿರುವುದು ಶಿವಣ್ಣನವರನ್ನು ಟ್ರೋಲ್ ಪೇಜ್ ಗಳು ಟ್ರೋಲ್ ಮಾಡಲು ಮತ್ತೊಂದು ಕಾರಣವಾಗಿ ಪರಿಣಮಿಸಿದೆ.

ಇದರಿಂದ ಮನಸ್ಸಿಗೆ ಬೇಸರವನ್ನು ತಂದುಕೊಂಡಿರುವ ಶಿವಣ್ಣ ಒಂದು ನಿರ್ಧಾರಕ್ಕೆ ಬಂದಿದ್ದು ಕೆಲವೊಂದು ಮಾತುಗಳನ್ನಾಡಿದ್ದಾರೆ. ಹೌದು ಗೆಳೆಯರೇ ಇನ್ನು ಮುಂದೆ ಕ್ಯಾಮೆರಾ ಕಣ್ಣಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಕಾಣಿಸಿಕೊಳ್ಳುತ್ತೇನೆ ಹೆಚ್ಚಾಗಿ ನಾನು ಅಲ್ಲಿ ನಿಲ್ಲುವುದಿಲ್ಲ ಎಂಬುದಾಗಿ ಶಿವಣ್ಣ ಘಟನೆಯ ನಂತರ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.