ಯಶ್ ರವರನ್ನು ಹುಡುಕಿಕೊಂಡು ಬಂದ ಮತ್ತೊಂದು ಅದೃಷ್ಟ. ಪ್ರಭಾಸ್ ಜೊತೆ ಹೊಸ ಐಡಿಯಾ. ಏನು ಗೊತ್ತೇ?
ನಮಸ್ಕಾರ ಸ್ನೇಹಿತರೆ ತೆಲುಗು ಚಿತ್ರರಂಗದ ಪ್ರಭಾಸ್ ರವರು ಬಾಹುಬಲಿ ಸರಣಿ ಚಿತ್ರಗಳು ಬಿಡುಗಡೆಯಾದ ಮೇಲೆ ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಪಾನ್ ಚೀನಾ ಸೇರಿದಂತೆ ವಿದೇಶಗಳಲ್ಲಿಯೂ ಕೂಡ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದರು. ಅದಾದ ನಂತರ ಬಂದಂತಹ ಕೆಲವೊಂದು ಸಿನಿಮಾಗಳು ಅಷ್ಟು ದೊಡ್ಡ ಮಟ್ಟಿಗೆ ಸೂಪರ್ ಹಿಟ್ ಆಗದಿದ್ದರೂ ಕೂಡ ಅವರ ಜನಪ್ರಿಯತೆಯನ್ನು ವುದು ಕಡಿಮೆಯಾಗಲಿಲ್ಲ. ಇನ್ನು ಈಗ ಸದ್ಯಕ್ಕೆ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಆಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದು ಖಂಡಿತವಾಗಿ ಪ್ರಭಾಸ್ ರವರು ಕಳೆದುಕೊಂಡಿರುವ ಚರಿಷ್ಮಾ ವನ್ನು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಮತ್ತೆ ಮರುಕಳಿಸಲಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಈಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ ಎಂಬುದು ಎಲ್ಲರಿಗೂ ಸಂತೋಷದ ವಿಚಾರ. ಹೌದು ಗೆಳೆಯರೆ ಕನ್ನಡದ ಹೆಮ್ಮೆಯ ನಟನಾಗಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ನಾಯಕ ಆಗಿರುವ ರಾಕಿಂಗ್ ಸ್ಟಾರ್ ಯಶ್ ರವರು ಈಗಾಗಲೇ ಸಾವಿರ ಕೋಟಿ ರೂಪಾಯಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಸಿನಿಮಾವನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ್ದಾರೆ. ಹೀಗಾಗಿ ಅವರ ಜನಪ್ರಿಯತೆ ಇತ್ತೀಚಿನ ದಿನಗಳಲ್ಲಿ ಬೇರೆಯಲ್ಲ ಸ್ಟಾರ್ ಗಳಿಗೆ ಹೋಲಿಸಿದರೆ ದುಪ್ಪಟ್ಟಾಗಿದೆ ಇದರಲ್ಲಿ ಎರಡು ಮಾತಿಲ್ಲ.
ಈಗ ಬಂದಿರುವ ಸುದ್ದಿಗಳ ಪ್ರಕಾರ ಪ್ರಭಾಸ್ ಹಾಗೂ ರಾಕಿಬಾಯ್ ಇಬ್ಬರೂ ಕೂಡ ಸಲಾರ್ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಗಾಳಿಸುದ್ದಿಗಳು ಹರಿದಾಡುತ್ತಿವೆ. ಕೆಜಿಎಫ್ ಚಿತ್ರಕ್ಕೆ ವರ್ಕ್ ಮಾಡಿರುವ ತಂಡವೇ ಇಲ್ಲಿ ಕೆಲಸ ಮಾಡುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಹೀಗಾಗಿ ಹಲವಾರು ತಿಂಗಳುಗಳಿಂದ ಕೇಳಿಬರುತ್ತಿರುವ ಗಾಳಿಸುದ್ದಿ ನಿಜ ಆದರೂ ಕೂಡ ಆಗಬಹುದು ಎನ್ನುವುದು ಗಾಂಧಿನಗರದ ಪಂಡಿತರು ಮಾತನಾಡುತ್ತಿರುವ ವಿಚಾರ. ಒಂದು ವೇಳೆ ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ಸಲಾರ್ ಹಾಗೂ ಕೆಜಿಎಫ್ ಚಿತ್ರಗಳಿಗೆ ಲಿಂಕ್ ಇದೆ ಎನ್ನುವ ವಿಚಾರಗಳು ಸತ್ಯವಾಗುತ್ತದೆ.