ಅಸಲಿಗೆ ಮೊದಲ ಪಂದ್ಯದಲ್ಲಿ ದೀಪಕ್ ಹೂಡಾ ಆರಂಭಿಕನಾಗಿ ಕಣಕ್ಕೆ ಇಳಿದಿದ್ದು ಯಾಕೆ ಗೊತ್ತೆ? ಹಾರ್ಧಿಕ್ ಹೇಳಿದ್ದೇನು ಗೊತ್ತೇ

25

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಐರ್ಲೆಂಡ್ ವಿರುದ್ಧದ ಟಿ-20 ಸರಣಿಯ ಪಂದ್ಯಗಳನ್ನು ಆರಂಭಿಸಿದ್ದು ಮೊದಲ ಪಂದ್ಯದಲ್ಲಿಯೇ ಭರ್ಜರಿ 7 ವಿಕೆಟ್ ಗಳ ಗೆಲುವು ಸಾಧಿಸಿದೆ. ಹಾರ್ದಿಕ್ ಪಾಂಡ್ಯ ರವರ ನಾಯಕತ್ವದಲ್ಲಿ ಯುವ ಭಾರತೀಯ ಕ್ರಿಕೆಟ್ ತಂಡ ಅತ್ಯುತ್ತಮವಾಗಿ ಪ್ರದರ್ಶನ ನೀಡುವ ಭರವಸೆಯನ್ನು ಮತ್ತೊಮ್ಮೆ ನಿಜ ಗೊಳಿಸಿದೆ. ಹೌದು ಗೆಳೆಯರೇ ಮಳೆಯ ನಡುವೆಯೂ ಕೂಡ ಆರಂಭವಾದ ಐರ್ಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಕೇವಲ 12 ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು. ಭಾರತೀಯ ಕ್ರಿಕೆಟ್ ತಂಡಕ್ಕೆ ಐರ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿ 109 ರನ್ನುಗಳ ಗುರಿಯನ್ನು ನೀಡಿತ್ತು.

ಲೆಕ್ಕದ ಪ್ರಕಾರ ಋತುರಾಜ್ ಗಾಯಕ್ವಾಡ್ ರವರು ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿಯಬೇಕಾಗಿತ್ತು ಆದರೆ ಅವರ ಬದಲಿಗೆ ದೀಪಕ್ ಹೂಡ ಬ್ಯಾಟಿಂಗ್ ಗೆ ಇಳಿದು ಭರ್ಜರಿಯಾಗಿ ಬ್ಯಾಟಿಂಗ್ ಮಾಡಿ ಭಾರತೀಯ ಕ್ರಿಕೆಟ್ ತಂಡದ ಗೆಲುವಿಗೆ ಕಾರಣವಾಗಿದ್ದರು. ಅದು ಕೂಡ ಪಂದ್ಯ ಎರಡು ಓವರ್ಗಳ ಮುನ್ನವೇ ಮುಗಿದಿತ್ತು. ಇನ್ನು ಋತುರಾಜ್ ಗಾಯಕ್ವಾಡ್ ರವರು ಯಾಕೆ ಬ್ಯಾಟಿಂಗ್ ಗೆ ಬರಲಿಲ್ಲ ಹಾಗೂ ಅವರ ಬದಲಿಗೆ ದೀಪಕ್ ಹೂಡ ಯಾಕೆ ಬಂದರು ಎನ್ನುವ ಕಾರಣವನ್ನು ಹಾರ್ದಿಕ್ ಪಾಂಡ್ಯ ರವರು ಬಿಚ್ಚಿಟ್ಟಿದ್ದಾರೆ.

ಹೌದು ಗೆಳೆಯರೇ ಬ್ಯಾಟಿಂಗ್ ಗೆ ಬರುವ ಮುನ್ನವೇ ಋತುರಾಜ್ ಗಾಯಕ್ವಾಡ್ ರವರ ಕಾಲಿಗೆ ಇಂಜುರಿ ಆಗಿತ್ತು. ಇದೇ ಕಾರಣಕ್ಕಾಗಿ ಬ್ಯಾಟಿಂಗ್ ಮಾಡಿ ಇನ್ನಷ್ಟು ಇಂಜೂರಿಯನ್ನು ಹೆಚ್ಚು ಗೊಳಿಸುವುದು ಬೇಡ ಎನ್ನುವ ಕಾರಣಕ್ಕಾಗಿಯೇ ದೀಪಕ್ ಹೂಡ ರವರನ್ನು ಮೊದಲು ಬ್ಯಾಟಿಂಗ್ ಗೆ ಕಳಿಸಲಾಗಿತ್ತು. ನಿರೀಕ್ಷೆಯಂತೆ ದೀಪಕ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿ ತಂಡದ ಭರ್ಜರಿ ಗೆಲುವಿನ ರೂವಾರಿಯಾಗಿ ಕಾಣಿಸಿಕೊಳ್ಳುತ್ತಾರೆ. ದೀಪಕ್ ಹೂಡ ರವರ ಬ್ಯಾಟಿಂಗ್ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಮಾಡಿ ಹಂಚಿಕೊಳ್ಳಿ.

Get real time updates directly on you device, subscribe now.