ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ರವರ ಕುರಿತು ಮಾತನಾಡಿದ ನಾಗ ಚೈತನ್ಯ. ಹೇಳಿದ್ದೇನು ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಾಗಚೈತನ್ಯ ರವರು ಸಮಂತ ಅವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಕೆಲವು ಕಾಲಗಳ ಕಾಲ ಬೇರೆ ಎಲ್ಲಾ ವಿಚಾರಗಳಿಂದ ದೂರವುಳಿದು ಕೊಂಡಿದ್ದರು. ನಂತರ ಮತ್ತೆ ಸಿನಿಮಾಗೆ ಹಿಂದಿರುಗಿದರು ಸತತವಾಗಿ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ನಾಗಚೈತನ್ಯ ರವರು ಬೇರೆ ಹುಡುಗಿಯ ಜೊತೆಗೆ ಡೇಟಿಂಗ್ ಮಾಡುತ್ತಿರುವ ವಿಚಾರದಲ್ಲಿ ಸಾಕಷ್ಟು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ.

ಟಿವಿ ಸತ್ಯವೋ ಸುಳ್ಳ ಎಂದು ಹೇಳುವುದಕ್ಕಿಂತ ಸುದ್ದಿಯಂತೂ ದೊಡ್ಡ ಮಟ್ಟದಲ್ಲಿ ಹರಡುತ್ತಿರುವುದು ನಿಜ. ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ನಾಗಚೈತನ್ಯ ರವರು ಶೋಭಿತ ರವರನ್ನು ಮದುವೆಯಾಗಲಿದ್ದಾರೆ ಎಂಬುದಾಗಿ ಸುದ್ದಿಗಳು ಜೋರಾಗಿ ಹರಿದಾಡುತ್ತಿವೆ. ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿರುವ ನಾಗಚೈತನ್ಯ ರವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಕೂಡ ನೋಡಿರುವ ಕುರಿತಂತೆ ಹಾಗೂ ಅದನ್ನು ಇಷ್ಟಪಟ್ಟಿರುವ ಕುರಿತಂತೆ ಮಾತನಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತಂತೆ ಮಾತನಾಡುತ್ತಾ ಅವರಂತೆ ಡ್ಯಾನ್ಸ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅವರ ಡ್ಯಾನ್ಸ್ ಗೆ ನಾನು ದೊಡ್ಡ ಅಭಿಮಾನಿ ಎಂಬುದಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಮನದುಂಬಿ ಹೊಗಳಿದ್ದಾರೆ. ಮೊದಲು ಸಾಕಷ್ಟು ಸೋಲುಗಳಿಂದ ಕಂಗೆಟ್ಟಿದ್ದ ನಾಗಚೈತನ್ಯ ರವರು ಇತ್ತೀಚಿನದಿನಗಳಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ ಇದು ನಿಜಕ್ಕೂ ಕೂಡ ಮೆಚ್ಚುವಂತಹ ವಿಷಯವಾಗಿದೆ.

Get real time updates directly on you device, subscribe now.