ತನ್ನ ನಾಯಿಗಳಿಗಾಗಿ ನಿರ್ಮಾಪಕರ ಜೊತೆ ಮತ್ತೊಂದು ಎಡವಟ್ಟು ಮಾಡಿಕೊಂಡ ರಶ್ಮಿಕಾ. ಆಟ ಜಾಸ್ತಿ ಆಯಿತು ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೆ ಸದ್ಯದ ಮಟ್ಟಿಗೆ ರಶ್ಮಿಕ ಮಂದಣ್ಣ ನವರ ಜನಪ್ರಿಯತೆಯನ್ನುವುದು ತಮಿಳು ತೆಲುಗು ಕನ್ನಡ ಹಾಗೂ ಹಿಂದಿ ಚಿತ್ರರಂಗ ಗಳಲ್ಲಿ ಯಾವ ರೀತಿ ಹರಡಿದೆ ಎಂಬುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ರಶ್ಮಿಕ ಮಂದಣ್ಣ ನವರ ಕುರಿತಂತೆ ಒಂದು ಆರ್ಟಿಕಲ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಮಾಡಿತ್ತು.
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಶ್ಮಿಕ ಮಂದಣ್ಣ ಈಗಾಗಲೇ ಕನ್ನಡ ತಮಿಳು ತೆಲುಗು ಚಿತ್ರರಂಗಗಳಲ್ಲಿ ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಬಹುಬೇಡಿಕೆಯ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಬಹಳಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಆಗಾಗ ಚಿತ್ರೀಕರಣ ಗಳಿಗೆ ಫ್ಲೈಟ್ ಗಳಲ್ಲಿ ಹೋಗುವುದು ಸಾಮಾನ್ಯವಾಗಿದೆ. ಹೀಗಾಗಿ ಕೆಲವೊಂದು ಆರ್ಟಿಕಲ್ ಗಳಲ್ಲಿ ರಶ್ಮಿಕ ಮಂದಣ್ಣ ಪ್ರೊಡ್ಯೂಸರ್ ಗಳ ಬಳಿ ತಮಗೆ ಮಾತ್ರವಲ್ಲದೆ ತಮ್ಮ ನಾಯಿಗೂ ಕೂಡ ಫ್ಲೈಟ್ ಟಿಕೆಟ್ ಮಾಡಿಸುವಂತೆ ಕೇಳುತ್ತಾರೆ ಎಂಬುದಾಗಿ ಬರೆಯಲಾಗಿದೆ. ಇದನ್ನು ನೋಡಿರುವ ನೆಟ್ಟಿಗರು ಈಗಾಗಲೇ ರಶ್ಮಿಕ ಮಂದಣ್ಣ ನವರಿಗೆ ಇದು ಸ್ವಲ್ಪ ಅತಿ ಆಗ್ಲಿಲ್ವಾ ಎನ್ನುವುದಾಗಿ ಟೀಕೆ ಮಾಡಲು ಆರಂಭಿಸಿದ್ದಾರೆ.

ಆದರೆ ಇದಕ್ಕೆ ಪ್ರತಿ ತರ ನೀಡಿರುವ ರಶ್ಮಿಕ ಮಂದಣ್ಣ ಹೇಳುತ್ತಿರುವುದು ನೋಡಿದರೆ ನಿಜಕ್ಕೂ ಕೂಡ ಆಶ್ಚರ್ಯವೆನಿಸುತ್ತದೆ. ಇಂತಹ ಹಣೆಪಟ್ಟಿಯನ್ನು ಹೊಂದಿರುವ ಆರ್ಟಿಕಲ್ ಗಳನ್ನು ನೋಡಿದ ನಂತರ ಪ್ರತಿಕ್ರಿಯಿಸಿರುವ ರಶ್ಮಿಕ ಮಂದಣ್ಣ ನವರು ನಕ್ಕಿದ್ದಾರೆ. ನೀವು ಬೇಕು ಎಂದರೂ ಕೂಡ ನನ್ನ ಮುದ್ದಿನ ನಾಯಿ ಆಗಿರುವ ಔರಾ ಬರುವುದಿಲ್ಲ ಅವಳು ಹೈದರಾಬಾದ್ ನಲ್ಲಿ ಆರಾಮವಾಗಿದ್ದಾರೆ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ನಟಿ ರಶ್ಮಿಕಾ ಮಂದಣ್ಣ ತಲಪತಿ ವಿಜಯ್ ನಟನೆಯ ವರಿಸು ಸಿನಿಮಾದಲ್ಲಿ ನಾಯಕಿಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಒಟ್ಟಾರೆಯಾಗಿ ಈ ಆರ್ಟಿಕಲ್ ನಿಂದ ಗೊಂದಲ ನಿರ್ಮಾಣವಾಗಿದ್ದಂತೂ ಸುಳ್ಳಲ್ಲ.