ನೇರವಾಗಿ ರಾಜಮೌಳಿಗೆ ಕಂಡೀಶನ್ ಹಾಕಿದ ಮಹೇಶ್ ಬಾಬು, ಆ ನಟಿಯರ ಸಹವಾಸ ಬೇಡವೇ ಬೇಡ ಎಂದದ್ದು ಯಾಕೆ ಗೊತ್ತೇ? ಯಾವ ನಟಿಯರ ಜೊತೆ ನಟಿಸುವುದಿಲ್ಲ ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಟಾಲಿವುಡ್ ಚಿತ್ರರಂಗದ ಜಾತ ನಿರ್ದೇಶಕ ಆಗಿರುವ ರಾಜಮೌಳಿ ಅವರ ಜೊತೆಗೆ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ರವರು ಸಿನಿಮಾವನ್ನು ಮಾಡಲು ಸಿದ್ಧರಾಗಿರುವುದು ಈಗಾಗಲೇ ಗೊತ್ತಿರುವ ವಿಚಾರ. ಹೌದು ಗೆಳೆಯರೇ ಈಗಾಗಲೇ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಮಹೇಶ್ ಬಾಬು ರವರು ರಾಜಮೌಳಿ ರವರ ನಿರ್ದೇಶನದ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಈ ಸಿನಿಮಾ ದುರ್ಗಾ ಬ್ಯಾನರ್ ನಿರ್ಮಾಣದ ಅಡಿಯಲ್ಲಿ ಮೂಡಿಬರುತ್ತಿದೆ.
ಸಿನಿಮಾದ ಬಜೆಟ್ ಕೂಡ 700ರಿಂದ 800 ಕೋಟಿ ರೂಪಾಯಿ ಎಂಬುದಾಗಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿದ್ದವು. ಆರ್ ಆರ್ ಆರ್ ಚಿತ್ರದ ನಂತರ ರಾಜಮೌಳಿ ಅವರು ಮಹೇಶ್ ಬಾಬು ರವರಿಗಾಗಿ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು ಈ ಸಿನಿಮಾ ಅಮೆಜಾನ್ ಅಥವಾ ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣಗೊಳ್ಳಲಿದೆ ಇದೊಂದು ಫಾರೆಸ್ಟ್ ಅಡ್ವೆಂಚರ್ ತ್ರಿಲ್ಲರ್ ಎಂಬುದಾಗಿ ಕೇಳಿಬರುತ್ತಿದೆ. ಇನ್ನು ಈ ಸಿನಿಮಾಕ್ಕೆ ಕಥೆಯನ್ನು ರಾಜಮೌಳಿ ಅವರ ತಂದೆ ಆಗಿರುವ ಖ್ಯಾತ ಸ್ಕ್ರಿಪ್ಟ್ ರೈಟರ್ ವಿಜಯೇಂದ್ರ ಪ್ರಸಾದ್ ರವರು ಬರೆಯಲಿದ್ದಾರೆ. ಇನ್ನು ಈ ಸಿನಿಮಾಗೆ ಮೊದಲೇ ರಾಜಮೌಳಿ ಅವರಿಗೆ ಮಹೇಶ್ ಬಾಬುರವರ ಒಂದು ನಿಯಮವನ್ನು ಹಾಕಿದ್ದಾರೆ ಅದು ಕೂಡ ಚಿತ್ರದ ಹೀರೋಯಿನ್ ಕುರಿತಂತೆ ಎಂಬುದಾಗಿ ತಿಳಿದುಬಂದಿದೆ.
ಹೌದು ಸ್ನೇಹಿತರೆ ಈಗಾಗಲೇ ಮಹೇಶ್ ಬಾಬು ರವರು ತಮ್ಮ ಸಿನಿಮಾ ಜೀವನದಲ್ಲಿ ಹಲವಾರು ಬಾಲಿವುಡ್ ಚಿತ್ರರಂಗದ ನಟಿಯರ ಜೊತೆಗೆ ನಟಿಸಿದ್ದಾರೆ ಹೀಗಾಗಿ ತಮ್ಮ ಮುಂದಿನ ಸಿನಿಮಾಗೆ ಟಾಲಿವುಡ್ ಚಿತ್ರರಂಗದ ನಟಿಯೇ ನಾಯಕಿ ಯಾಗಿರಬೇಕು ಎಂಬುದಾಗಿ ರಾಜಮೌಳಿ ಅವರಿಗೆ ಸೂಚಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಸದ್ಯಕ್ಕೆ ಮಹೇಶ್ ಬಾಬು ರವರು ಸರ್ಕಾರು ವಾರಿ ಪಾಠ ಸಿನಿಮಾದ ಯಶಸ್ಸಿನಲ್ಲಿದ್ದಾರೆ ಎಂದು ಹೇಳಬಹುದಾಗಿದೆ.