ಒಮ್ಮೆಲೇ ಬರೋಬ್ಬರಿ 16 ಲಕ್ಷ ಕೊಟ್ಟು ಜ್ಯೋತಿಷಿಯನ್ನು ನೇಮಕ ಮಾಡಿಕೊಡ ಭಾರತ ಫುಟ್ ಬಾಲ್ ತಂಡ. ಅದು ಯಾಕೆ ಗೊತ್ತೇ?

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತ ದೇಶದಲ್ಲಿ ಸಿನಿಮಾ ಬಿಟ್ಟರೆ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಕ್ರೀಡೆ ಯಾವುದು ಎಂದರೆ ಕೇಳಿ ಬರುವ ಒಂದೇ ಒಂದು ಹೆಸರು ಕ್ರಿಕೆಟ್. ಕ್ರಿಕೆಟಿಗರನ್ನು ಭಾರತೀಯರು ದೇವರಂತೆ ಪೂಜಿಸುತ್ತಾರೆ. ಕ್ರಿಕೆಟ್ನ ಜನಪ್ರಿಯತೆಯಲ್ಲಿ ಬೇರೆ ಕ್ರೀಡೆಗಳು ಕೂಡ ಮರೆಯಾಗುತ್ತಿವೆ. ಅವುಗಳಲ್ಲಿ ಫುಟ್ಬಾಲ್ ಕೂಡ ಒಂದಾಗಿದೆ. ಭಾರತ ದೇಶದಲ್ಲಿ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಫುಟ್ಬಾಲ್ ಆಡುವ ಆಟಗಾರರ ಸಂಖ್ಯೆ ಕಡಿಮೆ ಎಂದು ಹೇಳಬಹುದಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಫುಟ್ಬಾಲ್ ತಂಡದಲ್ಲಿ ನಡೆದಿರುವ ಒಂದು ಘಟನೆ ಈಗ ದೇಶವ್ಯಾಪಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹೌದು ಗೆಳೆಯರೇ ಕ್ರೀಡೆ ವಿಚಾರದಲ್ಲಿ ಏನಿದ್ದರೂ ಪರಿಶ್ರಮ ಹಾಗೂ ಸ್ಕಿಲ್ಸ್ ವಿಚಾರದಲ್ಲಿ ನಾವು ಸೋಲು-ಗೆಲುವುಗಳ ಲೆಕ್ಕಾಚಾರ ಹಾಕುತ್ತೇವೆ ಹೊರತು ಅದೃಷ್ಟದ ವಿಚಾರದಲ್ಲಿ ಅಲ್ಲ. ಆದರೆ ಭಾರತೀಯ ಫುಟ್ಬಾಲ್ ತಂಡದ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಬೇರೆಯದೇ ಸುದ್ದಿಯೊಂದು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಹೌದು ಗೆಳೆಯ ಇತ್ತೀಚಿಗಷ್ಟೇ ಭಾರತೀಯ ಫುಟ್ಬಾಲ್ ತಂಡ 24 ತಂಡಗಳು ಇರುವ afc ಏಷಿಯನ್ ಕಪ್ ಫೈನಲ್ಸ್ ಗೆ ತೇರ್ಗಡೆ ಆಗಿತ್ತು. ಇದರ ಬೆನ್ನಲ್ಲೇ 16 ಲಕ್ಷ ರೂಪಾಯಿಯನ್ನು ನೀಡಿ ಜ್ಯೋತಿಷ್ಯಿ ಒಬ್ಬರನ್ನು ಭಾರತೀಯ ಫುಟ್ಬಾಲ್ ಸಂಸ್ಥೆ ತಂಡದಲ್ಲಿ ಇರಿಸಿಕೊಂಡಿದೆ ಎಂಬುದಾಗಿ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.

ಕ್ವಾಲಿಫೈಯರ್ ಟೂರ್ನಿಯ ವೇಳೆ ಇವರನ್ನು ನೇಮಿಸಿಕೊಂಡಿತು ಎಂಬುದಾಗಿ ಸುದ್ದಿಯಾಗಿದೆ. ಭಾರತೀಯ ಫುಟ್ಬಾಲ್ ತಂಡ ಸಾಧಿಸಿರುವ ಯಶಸ್ಸಿಗೆ ಇವರು ಕಾರಣರಾಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದ್ದು ತಂಡಕ್ಕೆ ಸ್ಪೂರ್ತಿಯನ್ನು ನೀಡಲು ಇವರು ನೇಮಿಸಿಕೊಳ್ಳಲಾಗಿದೆ ಎಂಬುದಾಗಿ ಹೇಳಲಾಗಿದ್ದು ಇವರು ಜ್ಯೋತಿಷಿ ಸಂಸ್ಥೆಯ ಮೂಲದವರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಮೂಲಗಳ ಪ್ರಕಾರ ತಂಡವನ್ನು ಪ್ರೇರೇಪಿಸಲು ಅವರನ್ನು 16 ಲಕ್ಷ ರೂಪಾಯಿ ನೀಡಿ ನೇಮಿಸಿಕೊಳ್ಳಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಆದರೆ ಕೆಲವರು ಅದರಲ್ಲೂ ಸಂಸ್ಥೆಯ ಅತ್ಯಂತ ಹತ್ತಿರವಾದವರೇ ಇದನ್ನು ಅಲ್ಲಗೆಳೆದಿದ್ದಾರೆ. ಎಷ್ಟು ಸತ್ಯ ಸುಳ್ಳು ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Get real time updates directly on you device, subscribe now.