ಭರ್ಜರಿ ತಯಾರಿ ಆರಂಭ ಮಾಡಿರುವ ಬೆಂಗಳೂರು ಬುಲ್ಸ್, ಆದರೆ ಈ ಬಾರಿಯ ಪ್ರೊ ಕಬ್ಬಡಿ ಆರಂಭ ಯಾವಾಗ ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಬಡ್ಡಿ ಭಾರತೀಯ ನೆಲದ ಕ್ರೀಡಾ ಆಗಿದ್ದರು ಕೂಡ ಕ್ರಿಕೆಟ್ ಗೆ ಸಿಗುವ ಸ್ಥಾನಮಾನಗಳು ಕಬಡ್ಡಿಗೆ ಸಿಕ್ಕಿರಲಿಲ್ಲ. ಆದರೆ ಪ್ರೊ ಕಬಡ್ಡಿ ಲೀಗ್ ಪ್ರಾರಂಭವಾಗುತ್ತಿದ್ದಂತೆಯೇ ಕ್ರಿಕೆಟ್ಗೆ ಸಿಗುತ್ತಿದ್ದ ಜನಪ್ರಿಯತೆ ಕಬಡ್ಡಿಗೆ ಕೂಡ ಸಿಗಲು ಪ್ರಾರಂಭವಾಯಿತು. ಇನ್ನು ಕಬಡ್ಡಿ ಲೀಗ್ ನಲ್ಲಿ ಕೂಡ ಬೆಂಗಳೂರು ಬುಲ್ಸ್ ತಂಡ ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಧನೆಯನ್ನು ಮಾಡಿದೆ.
ಪವನ್ ಸೆಹ್ರಾವತ್ ರವರ ನಾಯಕತ್ವದಲ್ಲಿ ಬೆಂಗಳೂರು ಬುಲ್ಸ್ ತಂಡ ಈಗಾಗಲೇ ಸಾಕಷ್ಟು ಬಾರಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು ಅದರಲ್ಲಿ ಪವನ್ ರವರ ಕುರಿತಂತೆ ಹೇಳುವುದಾದರೆ ಅವರೊಬ್ಬ ಅತ್ಯುತ್ತಮ ರೈಡರ್ ಆಗಿದ್ದು ಭಾರತೀಯ ತಂಡದಲ್ಲಿ ಕೂಡ ಅತ್ಯುತ್ತಮ ರೈಡಿಂಗ್ ಗೆ ಹೆಸರುವಾಸಿಯಾಗಿದ್ದಾರೆ. ಇನ್ನು ಕಳೆದ ಬಾರಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ತಂಡ ಸೆಮಿಫೈನಲ್ ಹಂತದಲ್ಲಿ ಸೋತಿರುವುದು ನಿಮಗೆಲ್ಲರಿಗೂ ತಿಳಿದಿದೆ. ಈ ಬಾರಿಯಾದರೂ ಖಂಡಿತವಾಗಿ ಗೆಲ್ಲಲೇಬೇಕು ಎನ್ನುವ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರು ಬುಲ್ಸ್ ತಂಡ ತಯಾರಿ ನಡೆಸಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಯಾವಾಗ ಎನ್ನುವ ಕುತೂಹಲ ಎಲ್ಲರಲ್ಲಿ ಕೂಡ ಇದೆ.
ಈಗ ಈ ಪ್ರಶ್ನೆಗೆ ಉತ್ತರ ದೊರಕಿದ್ದು ಜುಲೈ ತಿಂಗಳಿನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳಿದ್ದು ಆಗಸ್ಟ್ ತಿಂಗಳಿನಲ್ಲಿ ಪ್ರೊ ಕಬಡ್ಡಿ ಲೀಗ್ ಸೀಸನ್ 9 ಪ್ರಾರಂಭವಾಗಲಿದೆ ಎನ್ನುವ ಮಾಹಿತಿಗಳು ದೊರಕಿವೆ. ಆರ್ಸಿಬಿ ತಂಡಕ್ಕೆ ಸಪೋರ್ಟ್ ಮಾಡಿದ ಹಾಗೆ ಈ ಬಾರಿ ಬೆಂಗಳೂರು ಬುಲ್ಸ್ ತಂಡಕ್ಕೆ ಕೂಡ ಬೆಂಬಲ ನೀಡಿ ಕಪ್ ಗೆಲ್ಲಲು ಪ್ರೋತ್ಸಾಹಿಸೋಣ.