ಅಂದು ಕೊಹ್ಲಿ ಗೆ ಶಾಕ್ ಈಗ ರೋಹಿತ್ ಗೆ ಶಾಕ್. ಭಾರತ ಕ್ರಿಕೆಟ್ ತಂಡದಲ್ಲಿ ಮತ್ತೊಂದು ಮಹತ್ವದ ವಿದ್ಯಮಾನ? ನಡೆಯುತ್ತಿರುವುದಾದರೂ ಏನು ಗೊತ್ತೇ?

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮೂರು ಫಾರ್ಮ್ಯಾಟ್ ಗಳಲ್ಲಿ ನಾಯಕನಾಗಿದ್ದ ವಿರಾಟ್ ಕೊಹ್ಲಿ ರವರನ್ನು ಬಿಸಿಸಿಐ ಸಂಸ್ಥೆ ಅನಿರೀಕ್ಷಿತವಾಗಿ ಕೆಳಗಿಳಿಸಿ ರೋಹಿತ್ ಶರ್ಮಾ ರವರನ್ನು 3 ಫಾರ್ಮೆಟ್ ಗಳಲ್ಲಿ ನಾಯಕನನ್ನಾಗಿ ಮಾಡಿಸಿತ್ತು. ಇದು ಹಲವಾರು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಬೇಸರವನ್ನು ತರಿಸಿತ್ತು. ಆದರೂ ಕೂಡ ರೋಹಿತ್ ಶರ್ಮಾ ರವರು ನಾಯಕತ್ವವನ್ನು ವಹಿಸಿಕೊಂಡ ಮೇಲೆ ಭಾರತೀಯ ಕ್ರಿಕೆಟ್ ತಂಡ ಯಾವುದೇ ಒಂದು ಸರಣಿಯನ್ನು ಸೋತಿರಲಿಲ್ಲ. ಹೀಗಾಗಿ ಅವರನ್ನು ಯಶಸ್ವೀ ಕಪ್ತಾನ ಎಂಬುದಾಗಿ ಬಣ್ಣಿಸಲಾಗಿತ್ತು ಆದರೆ ಈ ಬಾರಿ ಐಪಿಎಲ್ ನಲ್ಲಿ ಕೊನೆಯ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡ ಅವರ ನಾಯಕತ್ವದಲ್ಲಿ ಐಪಿಎಲ್ ಅನ್ನು ಮುಗಿಸುವ ಮೂಲಕ ರೋಹಿತ್ ಶರ್ಮಾ ರವರ ಕಳಪೆ ನಾಯಕತ್ವವನ್ನು ಕೂಡ ಸಾಬೀತುಪಡಿಸಿತ್ತು.

ಇನ್ನೂ ಇದೆ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಮೊದಲ ಐಪಿಎಲ್ ಆವೃತ್ತಿಯಲ್ಲಿಯೇ ಹಾರ್ದಿಕ್ ಪಾಂಡ್ಯ ರವರು ತಮ್ಮ ನಾಯಕತ್ವದ ಗುಣಮಟ್ಟವನ್ನು ಸಾಬೀತುಪಡಿಸಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಐರ್ಲೆಂಡ್ ವಿರುದ್ಧದ ಎರಡು ಟಿ20 ಪಂದ್ಯಗಳ ಸರಣಿಯಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಮುಗಿದ ನಂತರ ಇರುವಂತಹ ಟಿ-ಟ್ವೆಂಟಿ ಸರಣಿಗೆ ಕೂಡ ಅವರೇ ನಾಯಕನಾಗಿ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಹೀಗಾಗಿ ರೋಹಿತ್ ಶರ್ಮ ರವರಿಗೆ ನಾಯಕತ್ವದ ಸ್ಥಾನದ ವಿಚಾರದಲ್ಲಿ ಹಾರ್ದಿಕ್ ಪಾಂಡ್ಯ ರವರು ನಿಕಟ ಸ್ಪರ್ಧೆಯನ್ನು ನೀಡುತ್ತಿದ್ದಾರೆ.

ನಿಜವಾಗಿ ಹೇಳುವುದಾದರೆ ರೋಹಿತ್ ಶರ್ಮಾ ರವರು ಭಾರತೀಯ ಕ್ರಿಕೆಟ್ ತಂಡದ ಮೂರು ಫಾರ್ಮ್ಯಾಟ್ ಗಳಲ್ಲಿ ನಾಯಕರಾಗಿ ಅತ್ಯುತ್ತಮ ಗೆಲುವಿನ ರೇಶಿಯೋ ಹೊಂದಿದ್ದಾರೆ ನಿಜ ಆದರೆ ಇಂಜುರಿ ಸಮಸ್ಯೆಗಳು ಹಾಗೂ ಇತ್ತೀಚಿನ ದಿನಗಳಲ್ಲಿ ಐಪಿಎಲ್ನಲ್ಲಿ ತೋರಿಸುವಂತಹ ಕೆಟ್ಟ ಪ್ರದರ್ಶನದ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ರವರು ಭಾರತೀಯ ಕ್ರಿಕೆಟ್ ತಂಡದ ನಾಯಕತ್ವದ ವಿಚಾರದಲ್ಲಿ ರೋಹಿತ್ ಶರ್ಮಾ ರವರಿಗೆ ಟಕ್ಕರ್ ಕಾಂಪಿಟೇಶನ್ ನೀಡಿದರೂ ಕೂಡ ಆಶ್ಚರ್ಯಪಡಬೇಕಾಗಿಲ್ಲ. ಖಂಡಿತವಾಗಿ ಬಿಸಿಸಿಐ ಪರ್ಫಾರ್ಮೆನ್ಸ್ ಆಧಾರದ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.

Get real time updates directly on you device, subscribe now.