ಇದಪ್ಪ ದ್ರಾವಿಡ್ ಹವಾ ಅಂದ್ರೆ, ಟೀಮ್ ಇಂಡಿಯಾ ಆಟಗಾರರಿಗೆ ಎಚ್ಚರಿಕೆ ರವಾನೆ ಮಾಡಿದ ರಾಹುಲ್ ದ್ರಾವಿಡ್. ಏನಂದ್ರು ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೋಚ್ ರವಿಶಾಸ್ತ್ರಿ ನಂತರ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ಆಗಮಿಸಿರುವ ರಾಹುಲ್ ದ್ರಾವಿಡ್ ಅವರು ಈಗಾಗಲೇ ತಂಡದಲ್ಲಿ ಹಲವಾರು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಮುಂಬರುವ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ಎಲ್ಲರ ಚಿತ್ತ ಈ ಡಿಸೈಡರ್ ಪಂದ್ಯದತ್ತ ನೆಟ್ಟಿದೆ.
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಐಪಿಎಲ್ ಮುಗಿಸಿಕೊಂಡು ಅಂತರಾಷ್ಟ್ರೀಯ ಪಂದ್ಯಗಳತ್ತ ಮುಖ ಮಾಡಿದ್ದು ಮೊದಲ ಸರಣಿಯಲ್ಲಿ ಸೌತ್ ಆಫ್ರಿಕಾ ವಿರುದ್ಧ ಟಿ-ಟ್ವೆಂಟಿ ಸರಣಿಯನ್ನು ಟೈ ಮಾಡಿಕೊಂಡಿದೆ. ಇನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟೆಸ್ಟ್ ಹತ್ತಿರವಾಗುತ್ತಿದ್ದಂತೆ ಭಾರತೀಯ ಕ್ರಿಕೆಟ್ ಆಟಗಾರರು ನೆಟ್ ಪ್ರಾಕ್ಟೀಸ್ ನಲ್ಲಿ ಅತಿ ಹೆಚ್ಚು ಸಮಯವನ್ನು ಕಳೆಯುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳ ಮೂಲಕ ಸಾಬೀತಾಗಿದೆ. ಆಟಗಾರರು ಇಷ್ಟೊಂದು ಪರಿಶ್ರಮ ಪಡುತ್ತಿರುವುದಕ್ಕೆ ದ್ರಾವಿಡ್ ರವರ ಮಾರ್ಗದರ್ಶನವೂ ಕೂಡ ಕಾರಣವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ತಮ್ಮ ಆಟಗಾರರಿಗೆ ಈ ಸಂದರ್ಭದಲ್ಲಿ ಪರೋಕ್ಷವಾಗಿ ವಾರ್ನಿಂಗ್ ಕೂಡ ನೀಡಿದ್ದಾರೆ. ನಮ್ಮ ಟೆಸ್ಟ್ ತಂಡ ಕೂಡ ಸ್ಟ್ರಾಂಗ್ ಆಗಿ ಇದ್ದು ನಾವು ಇಂಗ್ಲೆಂಡ್ ತಂಡಕ್ಕೆ ಜಿದ್ದಾಜಿದ್ದಿನ ಪೈಪೋಟಿಯನ್ನು ಕೊನೆಯ ಟೆಸ್ಟ್ ಪಂದ್ಯದಲ್ಲಿ ನೀಡಲಿದ್ದೇವೆ. ಆದರೆ ಕಳೆದ ಬಾರಿಯ ಇಂಗ್ಲೆಂಡ್ ತಂಡ ಗಿಂತ ಈ ಬಾರಿಯ ಇಂಗ್ಲೆಂಡ್ ತಂಡ ಸಾಕಷ್ಟು ಬಲಶಾಲಿಯಾಗಿದೆ ಎಂಬುದಾಗಿ ಕೂಡ ಹೇಳುವ ಮೂಲಕ ನಮ್ಮ ಭಾರತೀಯ ಕ್ರಿಕೆಟ್ ಆಟಗಾರರಿಗೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ಕೊನೆಯ ಡಿಸೈಡರ್ ಟೆಸ್ಟ್ ಪಂದ್ಯ ಯಾರ ಮಡಿಲಿಗೆ ಸೇರಲಿದೆ ಎಂಬುದನ್ನು ಕೆಲವೇ ದಿನಗಳಲ್ಲಿ ನಾವು ಸಾಕ್ಷಿಕರಿಸಲಿದ್ದೇವೆ. ಈ ಪಂದ್ಯದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಕಾಮೆಂಟ್ ಮಾಡಿ ಹಂಚಿಕೊಳ್ಳಿ.