ನಿಜಕ್ಕೂ ಕದ್ದು ಮುಚ್ಚಿ ಚಾರ್ಲಿ ಸಿನಿಮಾ ನೋಡಿದ್ದಾರಾ ರಶ್ಮಿಕಾ?? ಅಭಿಮಾನಿಗಳು ಈ ಪ್ರಶ್ನೆ ಕೇಳಿದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚಾಗಿ ಪ್ರೇಕ್ಷಕರಿಂದ ಟೀಕೆಗೆ ಹಾಗೂ ಮೆಚ್ಚುಗೆಗೆ ಒಳಗಾಗಿದ್ದಾರೆ ಎಂದರೆ ಅದು ಖಂಡಿತವಾಗಿಯೂ ರಶ್ಮಿಕ ಮಂದಣ್ಣ ಎಂದು ಹೇಳಬಹುದಾಗಿದೆ. ಅದರಲ್ಲೂ ಕನ್ನಡಿಗರಿಂದ ಅತ್ಯಂತ ಹೆಚ್ಚಿಗೆ ಟ್ರೋಲಿ ಗೆ ಒಳಗಾಗಿರುವುದು ರಶ್ಮಿಕ ಮಂದಣ್ಣ ಎನ್ನುವುದಾಗಿ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ರಶ್ಮಿಕ ಮಂದಣ್ಣ ರವರ ಮಾಜಿ ಪ್ರೇಮಿಯಾಗಿರುವ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿದ್ದು ರಾಜ್ಯ ಹಾಗೂ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗುತ್ತಿದೆ.
ಪ್ರತಿಯೊಬ್ಬರು ಕೂಡ ಈ ಮನುಷ್ಯ ಹಾಗೂ ನಾಯಿಯ ನಡುವೆ ಇರುವಂತಹ ಅವಿನಾಭಾವ ಸಂಬಂಧದ ಕಥೆಯನ್ನು ಹೊಂದಿರುವ ಚಾರ್ಲಿ ಸಿನಿಮಾವನ್ನು ಪ್ರತಿಯೊಬ್ಬರು ಕೂಡ ತಮ್ಮ ಕುಟುಂಬದೊಂದಿಗೆ ಹಾಗೂ ಅದರಲ್ಲೂ ವಿಶೇಷವಾಗಿ ತಮ್ಮ ಸಾಕು ನಾಯಿಗಳೊಂದಿಗೆ ನೋಡುತ್ತಿದ್ದಾರೆ. ಚಾರ್ಲಿ ಸಿನಿಮಾದ ನಂತರ ಶ್ವಾನ ಪ್ರೀತಿಯನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿದ್ದು ಪ್ರತಿಯೊಬ್ಬರು ಕೂಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಾಕು ಶ್ವಾನ ಗಳೊಂದಿಗೆ ಫೋಟೋ ತೆಗೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ರಶ್ಮಿಕ ಮಂದಣ್ಣ ಕೂಡ ಶ್ವಾನ ಪ್ರೇಮಿಯಾಗಿದ್ದಾರೆ. ಇದೇ ಕಾರಣಕ್ಕಾಗಿ ಇತ್ತೀಚಿಗೆ ಚಾರ್ಲಿ ಸಿನಿಮಾವನ್ನು ನೋಡಿದ್ದೀರಾ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ರಶ್ಮಿಕ ಮಂದಣ್ಣ ನವರನ್ನು ರೇಗಿಸಲು ಪ್ರಾರಂಭಿಸಿದ್ದಾರೆ.
ಇದಕ್ಕೊಂದು ಕಾರಣವೂ ಕೂಡ ಇದೆ ಯಾಕೆಂದರೆ ರಶ್ಮಿಕ ಮಂದಣ್ಣ ಕೂಡ ಇತ್ತೀಚಿಗೆ ತಮ್ಮ ಪ್ರೀತಿಯ ನಾಯಿಯ ಜೊತೆಗೆ ಸೆಲ್ಫಿ ತೆಗೆದುಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಎಲ್ಲರೂ ಕೂಡ ಚಾರ್ಲಿ ಸಿನಿಮಾವನ್ನು ಕದ್ದು ನೋಡಿದ್ದೀರಾ ಮೇಡಂ ಎನ್ನುವುದಾಗಿ ಕಾಮೆಂಟ್ ಸ್ಥಳದಲ್ಲಿ ಕಾಮೆಂಟ್ ಮಾಡುವ ಮೂಲಕ ರೇಗಿಸುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ ಹಾಗೂ ಚಾರ್ಲಿ ಸಿನಿಮಾವನ್ನು ನೋಡಿದ್ದರೆ ನಿಮ್ಮ ಸಿನಿಮಾ ಅನುಭವವನ್ನು ಕೂಡ ತಪ್ಪದೆ ಹಂಚಿಕೊಳ್ಳಿ.