ಪ್ರೀತಿ ಮಾಡಿದ್ದು ಮಾಡಿ, ನಂತರ ಮದುವೆಯಾಗಿಲ್ಲ ಎಂದು ಕೊರಗಿ ಕೊರಗಿ ಇಂದಿಗೂ ಒಂಟಿಯಾಗಿರುವ ನಟಿಯರು ಯಾರ್ಯಾರು ಗೊತ್ತೇ??

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ನಟಿಯರ ಜೀವನದಲ್ಲಿ ಪ್ರತಿಯೊಂದು ವಿಚಾರಗಳು ಕೂಡ ದೊಡ್ಡ ಮಟ್ಟದಲ್ಲಿ ಸಾಮಾಜಿಕವಾಗಿ ಸುದ್ದಿ ಮಾಡುತ್ತದೆ. ಇದಕ್ಕೆ ಕಾರಣ ಪ್ರಮುಖವಾಗಿ ಬಾಲಿವುಡ್ ಚಿತ್ರರಂಗದ ಹೇಳಬಹುದು. ಬಾಲಿವುಡ್ ಚಿತ್ರರಂಗ ಮೊದಲಿನಿಂದ ಇಂದಿನವರೆಗೂ ಕೂಡ ಕೇವಲ ಗಾಸಿಪ್ ಗಳಿಗಾಗಿಯೇ ಸುದ್ದಿ ಆಗಿರುತ್ತದೆ. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಇದೇ ವಿಚಾರದ ಕುರಿತಂತೆ. ಬಾಲಿವುಡ್ ಚಿತ್ರರಂಗದ ಟಾಪ್ 5 ನಟಿಯರು ಪ್ರೀತಿಗಾಗಿ ಜೀವನಪೂರ್ತಿ ಮದುವೆಯಾಗದೆ ಉಳಿದುಕೊಂಡಿದ್ದಾರೆ. ಅದರಲ್ಲಿ ಒಬ್ಬರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.

ತಬು; ನಟಿ ತಬು ರವರು ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ಹಲವಾರು ಸಿನಿಮಾಗಳಿಗೆ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟ ಆಗಿರುವ ನಾಗಾರ್ಜುನ ರವರ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ಇವರಿಬ್ಬರ ಪ್ರೀತಿ ಗಾಢವಾಗಿ ಹತ್ತಾರು ವರ್ಷಗಳ ಕಾಲ ನಡೆಯುತ್ತದೆ. ಆದರೆ ಇವರ ಪ್ರೀತಿ ಯಾವಾಗ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗಲೂ ಆರಂಭವಾಗುತ್ತದೆಯೋ ಆ ಸಂದರ್ಭದಲ್ಲಿ ನಾಗಾರ್ಜುನರ ಅವರು ಅದಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ಮಕ್ಕಳನ್ನು ಹೊಂದಿದ್ದರು. ಹೆಂಡತಿಗೆ ವಿವಾಹ ವಿಚ್ಛೇದನವನ್ನು ನೀಡಲು ಸಾಧ್ಯವಾಗದೆ ತಬು ರವರನ್ನು ಬಿಟ್ಟು ಹೋಗುತ್ತಾರೆ. ಇಂದಿಗೂ ಕೂಡ ನಟಿ ತಬು ರವರು ಒಬ್ಬಂಟಿಯಾಗಿಯೇ ಉಳಿದುಕೊಂಡಿದ್ದಾರೆ.

ಆಶಾ ಪಾರೇಖ್; 60 ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಮಿಂಚನ್ನು ಹರಿಸಿರುವ ನಟಿ ಆಶಾ ಪಾರೇಖ್ ರವರು ಅಂದಿನ ಕಾಲದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ನಿರ್ದೇಶಕ ಹಾಗೂ ನಿರ್ಮಾಪಕ ಆಗಿರುವ ನಜೀರ್ ಅವರ ಮೇಲೆ ಪ್ರೀತಿ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಅವರು ನಜೀರ್ ರವರಿಗೆ ಈಗಾಗಲೇ ಮದುವೆ ಆಗಿದೆ ಎಂಬುದನ್ನು ತಿಳಿದ ನಂತರ ಜೀವನಪೂರ್ತಿ ನಾನು ಮದುವೆಯಾಗದೆ ಉಳಿದುಕೊಂಡು ಬಿಡುತ್ತೇನೆ ಎಂಬುದಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಇಂದಿಗೂ ಕೂಡ ಒಬ್ಬಂಟಿಯಾಗಿಯೇ ಉಳಿದುಕೊಂಡಿದ್ದಾರೆ.

ಸುಶ್ಮಿತಾ ಸೇನ್; ಭುವನ ಸುಂದರಿಯಾಗಿ ಜಾಗತಿಕವಾಗಿ ಸೌಂದರ್ಯ ಲೋಕದಲ್ಲಿ ಹೆಸರನ್ನು ಸಂಪಾದಿಸಿರುವ ಸುಶ್ಮಿತಾ ಸೇನ್ ಬಾಲಿವುಡ್ ಚಿತ್ರರಂಗದಲ್ಲಿ ನಟನೆಯ ಮೂಲಕವೂ ಕೂಡ ಮಿಂಚು ಹರಿಸಿದ್ದಾರೆ. ಇವರು ಅಂದಿನ ಸಂದರ್ಭದಲ್ಲಿ ಅದಾಗಲೇ ಮದುವೆಯಾಗಿದ್ದ ವಿಕ್ರಂ ಭಟ್ ರವರನ್ನು ಪ್ರೀತಿಸಿದ್ದರು ಆದರೆ ನಂತರ ಇವರಿಬ್ಬರ ಪ್ರೀತಿಯನ್ನುವುದು ಅರ್ಧಕ್ಕೆ ನಿಂತು ಹೋಯಿತು. ಇದಾದ ನಂತರ ಸುಶ್ಮಿತಾ ಸೇನ್ ರವರ ಹೆಸರು ಹಲವಾರು ನಟರು ಹಾಗೂ ಸೆಲೆಬ್ರಿಟಿಗಳ ಜೊತೆಗೆ ಕೇಳಿಬಂದಿದ್ದರೂ ಕೂಡ ಇದುವರೆಗೂ ಅವರು ಮದುವೆಯಾಗದೆ ಒಬ್ಬಂಟಿಯಾಗಿ ಉಳಿದುಕೊಂಡಿದ್ದಾರೆ.

ನಗ್ಮ; ನಟಿ ನಗ್ಮಾ ರವರು ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ ಎಂದು ಹೇಳಬಹುದಾಗಿದೆ. ಕನ್ನಡದಲ್ಲಿ ಕೂಡ ನಟಿಸಿ ಹೋಗಿದ್ದಾರೆ. ಒಂದು ಕಾಲದಲ್ಲಿ ಅತ್ಯಂತ ಬಹುಬೇಡಿಕೆ ಹಾಗು ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಮಿಂಚಿದ್ದ ಇವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಆಗಿರುವ ಸೌರವ್ ಗಂಗೂಲಿ ರವರ ಪ್ರೀತಿಯಲ್ಲಿ ಬೀಳುತ್ತಾರೆ. ಸಾಮಾನ್ಯವಾಗಿ ಈ ವಿಚಾರದಲ್ಲಿ ಕೂಡ ಸೌರವ್ ಗಂಗೂಲಿ ಅವರು ಅದಾಗಲೇ ಮದುವೆಯಾಗಿದ್ದ ಕಾರಣದಿಂದಾಗಿ ಇವರಿಬ್ಬರು ಅತಿಶೀಘ್ರದಲ್ಲೇ ಬೇರೆಯಾಗ ಬೇಕಾಗಿ ಬಂದಿತು. ಇಂದಿಗೂ ಕೂಡ ನಟಿ ನಗ್ಮಾ ಒಬ್ಬಂಟಿಯಾಗಿ ಜೀವನವನ್ನು ಕಳೆಯುತ್ತಿದ್ದಾರೆ.

ಪರ್ವೀನ ಬಾಬಿ; ಎಂಬತ್ತರ ದಶಕದಲ್ಲಿ ಬಾಲಿವುಡ್ ಚಿತ್ರರಂಗದ ಮೋಸ್ಟ್ ವಾಂಟೆಡ್ ನಟಿಯಾಗಿದ್ದ ಪರ್ವಿನ ರವರು ನಿರ್ಮಾಪಕ ಹಾಗೂ ನಿರ್ದೇಶಕ ಮಹೇಶ್ ಭಟ್ ರವರ ಪ್ರೀತಿಯಲ್ಲಿ ಅವರು ಮದುವೆಯಾಗಿದ್ದಾರೆ ಎಂಬುದನ್ನು ತಿಳಿದು ಕೂಡ ಬಿಡುತ್ತಾರೆ ಇಬ್ಬರೂ ಕೂಡ ಹಲವಾರು ವರ್ಷಗಳ ಕಾಲ ಒಟ್ಟಿಗೆ ಇರುತ್ತಾರೆ. ನಂತರ ಮಹೇಶ್ ಭಟ್ ರವರು ಇವರನ್ನು ಬಿಟ್ಟು ಹೋಗುತ್ತಾರೆ. ಇದನ್ನು ತಾಳಲಾಗದೆ ಪರ್ವೀನ ಮಾದಕ ದ್ರವ್ಯಗಳ ವ್ಯಸನಿಯಾಗಿ 2005 ರಲ್ಲಿ ತಮ್ಮದೇ ಮನೆಯಲ್ಲಿ ಮರಣವನ್ನು ಹೊಂದುತ್ತಾರೆ. ಇವರೇ ಪ್ರೀತಿಗಾಗಿ ಜೀವನವನ್ನೇ ಮುಡಿಪಿಟ್ಟರು ಆದರೆ ಪ್ರೀತಿ ಸಿಗದಿದ್ದಾಗ ಮದುವೆಯಾಗದೆ ಒಂಟಿಯಾಗಿ ಉಳಿದುಕೊಂಡಿದ್ದರು. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.