ಎಲ್ಲರೂ ಮದುವೆಗೆ ಖರ್ಚು ಮಾಡಿದರೆ, ನಯನತಾರ ವಿಜ್ಞೇಶ್ ಮದುವೆಯಿಂದ ದುಡಿಯುತ್ತಿರುವ ಹಣ ಎಷ್ಟು ಗೊತ್ತೇ?? ಖರೀದಿ ಮಾಡಿದ್ದು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೋಡಿಯ ಮದುವೆಯ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇವರಿಬ್ಬರು ಜೂನ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ, ಈ ಮದುವೆಗೆ ಚಿತ್ರರಂಗದ ಗಣ್ಯರ ಜೊತೆಗೆ, ತಮಿಳುನಾಡಿನ ಸಿಎಂ ಸ್ಟಾಲಿನ್ ಅವರು ಸಹ ಆಗಮಿಸಿದ್ದರು. ಇದರ ಜೊತೆಗೆ ಇದೀಗ, ಇವರಿಬ್ಬರ ಮದುವೆ ಸ್ಟ್ರೀಮಿಂಗ್ ಅನ್ನು ದೈತ್ಯ ಓಟಿಟಿ ಸಂಸ್ಥೆ ಖರೀದಿಸಿದೆ ಎನ್ನಲಾಗುತ್ತಿದೆ.
ನಯನತಾರ ಮತ್ತು ವಿಘ್ನೇಶ್ ಶಿವನ್ ಜೋಡಿಯ ಮದುವೆಯು ಮೊದಲಿಗೆ ತಿರುಪತಿಯಲ್ಲಿ ನಡೆಯುತ್ತದೆ ಎನ್ನಲಾಗಿತ್ತು, ಆದರೆ ಮಹಾಬಲಿಪುರಂ ನಲ್ಲಿ ಇವರಿಬ್ಬರು ಮದುವೆ ಆಗಿದ್ದರೆ, ಬಳಿಕ ಚೆನ್ನೈನಲ್ಲಿ ಅದ್ಧೂರಿಯಾಗಿ ರಿಸೆಪ್ಶನ್ ನಡೆಯಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನು ಇವರಿಬ್ಬರ ಮದುವೆ ಬಗ್ಗೆ ಹಲವು ದಿನಗಳಿಂದ ಗಾಸಿಪ್ ಗಳು ಕೇಳಿ ಬರುತ್ತಲೇ ಇದ್ದವು. ಕೊನೆಗೂ ನಯನತಾರ ಅವರ ಮದುವೆ ನಡೆದಿದೆ ಎನ್ನುವುದು ಸಂತೋಷದ ವಿಚಾರವೇ. ಈ ಜೋಡಿಯ ಮದುವೆ ಬಗ್ಗೆ, ಮತ್ತೊಂದು ಸುದ್ದಿ ಈಗ ಕೇಳಿ ಬರುತ್ತಿದೆ. ಇವರಿಬ್ಬರ ಮದುವೆಯ ವಿಡಿಯೋ ಚಿತ್ರೀಕರಣದ ಕೆಲಸವನ್ನು ಖ್ಯಾತ ನಿರ್ದೇಶಕ ಗೌತಮ್ ಮೆನನ್ ಅವರು ತೆಗೆದುಕೊಂಡಿದ್ದರು ಎನ್ನಲಾಗುತ್ತಿದೆ.
ಇನ್ನು ನೆಟ್ ಫ್ಲಿಕ್ಸ್ ಸಂಸ್ಥೆ ಸಹ ಈ ಜೋಡಿಯ ಮದುವೆಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ನಯನತಾರ ಮತ್ತು ವಿಘ್ನೇಶ್ ಶಿವನ್ ಅವರ ಮದುವೆಯ ಲೈವ್ ವಿಡಿಯೋ ಚಿತ್ರೀಕರಿಸಿ, ಅದನ್ನು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಮಾಡಲಿದ್ದಾರೆ, ಇದರ ಅಗ್ರಿಮೆಂಟ್ ನಡೆದಿದೆ, ನಯನತಾರ ಅವರ ಮದುವೆಯ ಒಂದು ಫೋಟೋ ಕೂಡ ಲೀಕ್ ಆಗದ ಹಾಗೆ ನೆಟ್ ಫ್ಲಿಕ್ಸ್ ಸಂಸ್ಥೆ ನೋಡಿಕೊಳ್ಳುತ್ತದೆ ಎನ್ನಲಾಗಿದ್ದು, ವಿಡಿಯೋ ಚಿತ್ರೀಕರಿಸಲು, ಗೌತಮ್ ಮೆನನ್ ಅವರು ದುಬಾರಿ 25 ಕೋಟಿ ಮೊತ್ತವನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಕತ್ರಿನಾ ಕೈಫ್ ಅವರ ಮದುವೆ ವಿಚಾರದಲ್ಲಿ ಸಹ ಇಂಥದ್ದೇ ಮಾತುಗಳು ಕೇಳಿ ಬಂದಿದ್ದವು. ಆದರೆ ಅವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದವು.