ಬಾಕ್ಸ್ ಆಫೀಸ್ ಲೂಟಿ ಮಾಡಿದ ಚಾರ್ಲಿ. ಹಾಕಿದ ಚಿಲ್ಲರೆ ಸಂಭಾವನೆ ಎರಡೇ ದಿನಕ್ಕೆ ವಾಪಾಸ್. ಒಟ್ಟಾರೆಯಾಗಿ ಗಳಿಸಿದ ಲಾಭವೆಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗಗಳ ಕರಾಮತ್ತು ಎನ್ನುವುದು ಸಾಕಷ್ಟು ದೊಡ್ಡದಾಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರ ಈಗ ಕನ್ನಡ ಸೇರಿದಂತೆ ಪರಭಾಷೆಯ ಪ್ರೇಕ್ಷಕರನ್ನು ಕೂಡ ಚಿತ್ರಮಂದಿರಗಳತ್ತ ಬರುವಂತೆ ಆಕರ್ಷಿಸುತ್ತಿದೆ.
ಹೌದು ಗೆಳೆಯರೇ ಧರ್ಮ ಹಾಗೂ ಚಾರ್ಲಿಯ ಕಥೆಯನ್ನು ಹೊಂದಿರುವ ಈ ಸಿನಿಮಾ ಕಿರಣರಾಜ್ ರವರ ನಿರ್ದೇಶನದಲ್ಲಿ ಮೂಡಿ ಬಂದಿದ್ದು ನಾಯಕನಾಗಿರುವ ರಕ್ಷಿತ್ ಶೆಟ್ಟಿ ರವರೆ ಸಿನಿಮಾದ ನಿರ್ಮಾಪಕರು ಕೂಡ ಆಗಿದ್ದಾರೆ. ಚಿತ್ರದಲ್ಲಿ ಸಂಗೀತ ಶೃಂಗೇರಿ ರಾಜ್ ಬಿ ಶೆಟ್ಟಿ ಬಾಬಿ ಸಿಂಹ ಸೇರಿದಂತೆ ಹಲವಾರು ನಟರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಪ್ರಾಣಿಪ್ರಿಯರಿಗೆ ಕೂಡ ಈ ಸಿನಿಮಾ ಎನ್ನುವುದು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದು ಭಾಷೆಗಳ ಎಲ್ಲೆಯನ್ನು ಮೀರಿ ಪ್ರತಿಯೊಬ್ಬ ಸಿನಿಮಾ ಪ್ರೇಮಿಗಳು ಕೂಡ ಈ ಸಿನಿಮಾವನ್ನು ತಮ್ಮ ಕುಟುಂಬದವರ ಜೊತೆ ಗೆ ಹೋಗಿ ನೋಡುತ್ತಿದ್ದಾರೆ. ಇನ್ನು ಕೇವಲ ರೆಸ್ಪಾನ್ಸ್ ವಿಚಾರದಲ್ಲಿ ಮಾತ್ರವಲ್ಲದೆ ಕಲೆಕ್ಷನ್ ವಿಚಾರದಲ್ಲಿ ಕೂಡಾ ಪಾಸಿಟಿವ್ ರಿಪೋರ್ಟ್ ಹೊರಬಂದಿದೆ. ಹೌದು ಗೆಳೆಯರೆ ಸಿನಿಮಾಗೆ ಒಟ್ಟಾರೆಯಾಗಿ 15 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಪ್ರಕಾರ ಇದು ಕೇವಲ ಎರಡೇ ದಿನಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ನಿಂದ ಸಿಕ್ಕಿದೆ ಎಂಬುದಾಗಿ ತಿಳಿದುಬಂದಿದೆ.
ಈಗಾಗಲೇ ಟಿವಿ ಹಾಗೂ ಡಿಜಿಟಲ್ ಹಕ್ಕುಗಳಿಂದ 50 ಕೋಟಿ ರೂಪಾಯಿಗೂ ಅಧಿಕ ಹಣ ಸಿಕ್ಕಿದ್ದು, ಥಿಯೇಟರ್ ಕಲೆಕ್ಷನ್ ನಿಂದ ಮೊದಲ ದಿನ 6 ಕೋಟಿ ರೂಪಾಯಿ ಹಣ ಸಿಕ್ಕಿದೆ. ಎರಡನೇ ದಿನ 9.15 ಕೋಟಿ ರೂಪಾಯಿ ಅನ್ನು ಪಡೆದುಕೊಂಡಿದೆ. ಅಂದರೆ ಎರಡನೇ ದಿನವೇ ಬಂಡವಾಳದ 15 ಕೋಟಿ ರೂಪಾಯಿ ಅನ್ನು ಬಾಕ್ಸಾಫೀಸ್ ಕಲೆಕ್ಷನ್ ಮೂಲಕ ಚಿತ್ರತಂಡ ಪಡೆದುಕೊಂಡಿದೆ. ಇನ್ನು ಮೂರನೇ ದಿನ ಅಂದರೆ ಭಾನುವಾರ ಬಾಕ್ಸಾಫೀಸ್ ನಲ್ಲಿ 10ರಿಂದ 11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರಬಹುದು ಎಂಬ ಲೆಕ್ಕಾಚಾರವಿದೆ. ಒಟ್ಟಾರೆಯಾಗಿ 3ದಿನದಲ್ಲಿ ಇದುವರೆಗೂ 25ರಿಂದ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಈಗಾಗಲೇ ಲಾಭದ ಹಾದಿಯಲ್ಲಿದೆ ಎಂದು ಹೇಳಬಹುದಾಗಿದೆ.