ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಕನ್ನಡತಿ ಪ್ರಣೀತ, ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಪ್ರಣೀತಾ.

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಅಂದರೆ ಲಾಕ್ ಡೌನ್ ನಂತರ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗೆ ಸತತವಾಗಿ ಸಿಹಿ ಸುದ್ದಿಗಳನ್ನು ನೀಡುತ್ತಿದ್ದಾರೆ ಎಂಬುದು ನಿಮಗೆ ತಿಳಿದಿರುವ ವಿಚಾರವಾಗಿದೆ. ಈ ಸಿಹಿ ಸುದ್ದಿ ನೀಡುತ್ತಿರುವ ಸೆಲೆಬ್ರಿಟಿಗಳ ಸಾಲಿನಲ್ಲಿ ಈಗ ಪ್ರಣೀತಾ ಸುಭಾಷ್ ಅವರು ಕೂಡ ಸೇರಿಕೊಂಡಿದ್ದಾರೆ.

ಹೌದು ಸ್ನೇಹಿತರೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಆಗಿರುವ ಕನ್ನಡತಿ ಪ್ರಣೀತಾ ಸುಭಾಷ್ ರವರು ಲಾಕ್ಡೌನ್ ಸಂದರ್ಭದಲ್ಲಿ ಮದುವೆ ಆಗುವುದು ನಿಮಗೆಲ್ಲ ಗೊತ್ತೇ ಇದೆ. ಲಾಕ್ ಡೌನ್ ಆಗ ಕಾರಣದಿಂದಾಗಿ ಸರಳವಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹಲವಾರು ವರ್ಷಗಳಿಂದ ಕನ್ನಡ ತೆಲುಗು ತಮಿಳು ಚಿತ್ರರಂಗ ಸೇರಿದಂತೆ ಹಿಂದಿ ಚಿತ್ರರಂಗದಲ್ಲಿ ಕೂಡ ನಟಿಸಿ ತಮ್ಮ ನಟನ ಸಾಮರ್ಥ್ಯವನ್ನು ಸಾಬೀತು ಪಡಿಸಿರುವ ನಟಿಯಾಗಿರುವ ಪ್ರಣಿತ ಸುಭಾಷ್ ರವರು ಲಾಕ್ಡೌನ್ ಸಂದರ್ಭದಲ್ಲಿ ಬಡಜನರಿಗೆ ತಮ್ಮ ಟ್ರಸ್ಟ್ ಮೂಲಕ ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದರು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈಗ ಮದುವೆಯಾಗಿ ಸರಿ ಸುಮಾರು ಒಂದು ವರ್ಷಗಳ ನಂತರ ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಸಂತೋಷದ ಸುದ್ದಿಯನ್ನು ಪ್ರಣಿತ ಸುಭಾಷ್ ಅವರು ನೀಡಿದ್ದಾರೆ.

ಹೌದು ಗೆಳೆಯರೇ ನಟಿ ಪ್ರಣೀತಾ ಸುಭಾಷ್ ರವರು ಹೆಣ್ಣುಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿದ್ದ. ಮಗು ಹುಟ್ಟಿದ ಎರಡು ದಿನಗಳ ನಂತರ ತಾಯಿಯಾಗಿರುವ ವಿಚಾರವನ್ನು ಸಂತೋಷದಿಂದ ಹಂಚಿಕೊಂಡಿರುವ ಪ್ರಣಿತ ಸುಭಾಷ್ ರವರು ಮುಂದಿನ ದಿನಗಳಲ್ಲಿ ತಾಯ್ತನದ ಸುಖವನ್ನು ಸಂಪೂರ್ಣವಾಗಿ ಅನುಭವಿಸಲಿ ಎಂಬುದಾಗಿ ಹಾರೈಸೋಣ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಸಂಪ್ರದಾಯಬದ್ಧ ನಟಿಯರಲ್ಲಿ ಪ್ರಣಿತ ಸುಭಾಷ್ ರವರು ಅಗ್ರಗಣ್ಯ ರಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಹೇಳಿಕೊಳ್ಳಲು ಸಂತೋಷವಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರಣಿತ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಾರಾ ಇಲ್ಲವೇ ಎಂಬುದನ್ನು ಕಾದುನೋಡಬೇಕಾಗಿದೆ.

Get real time updates directly on you device, subscribe now.