ಪಂತ್ ಬೇಡ, ಪಾಂಡ್ಯ ಬೇಡ, ಈತನನ್ನು ನಾಯಕನನ್ನಾಗಿ ಮಾಡಿ ಸರಣಿ ಗೆಲ್ತೀವಿ ಎಂದು ನೆಟ್ಟಿಗರು. ಯಾರು ನಾಯಕನಾಗಬೇಕಂತೆ ಗೊತ್ತೆ??

41

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಈಗಾಗಲೇ ಸೌತ್ ಆಫ್ರಿಕಾ ವಿರುದ್ಧದ 5 ಟಿ20 ಪಂದ್ಯಗಳ ಸರಣಿ ಆರಂಭವಾಗಿದ್ದು ಮೊದಲ ಪಂದ್ಯದಲ್ಲೇ ರಿಷಬ್ ಪಂತ್ ಪಡೆ ತೆಂಬ ಬವುಮ ನಾಯಕತ್ವದ ಸೌತ್ ಆಫ್ರಿಕಾ ವಿರುದ್ಧ ಸೋತು ಶರಣಾಗಿ ನಿಂತಿದೆ. ನಿಜಕ್ಕೂ ಕೂಡ ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಬೇಸರದ ವಿಚಾರವಾಗಿದೆ. ಯುವ ಆಟಗಾರರಿದ್ದರು ಕೂಡ ಐಪಿಎಲ್ನಲ್ಲಿ ಅವರು ನೀಡಿರುವ ಪರ್ಫಾರ್ಮೆನ್ಸ್ ಆಧಾರದ ಮೇಲೆ ಸೌತ್ ಆಫ್ರಿಕಾ ವಿರುದ್ಧ ಬಲಶಾಲಿಯಾಗಿಯೇ ಕಾಣಿಸಿಕೊಂಡಿತ್ತು.

ಆದರೆ ಇಷ್ಟೊಂದು ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ನಂತರವೂ ಕೂಡಾ ಭಾರತೀಯ ಕ್ರಿಕೆಟ್ ತಂಡ ಸೋತಿರುವುದು ರಿಷಬ್ ಪಂತ್ ರವರ ನಾಯಕತ್ವದ ಹಿನ್ನಡೆಯ ಪ್ರತೀಕವಾಗಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವರು ಹಾರ್ದಿಕ್ ಪಾಂಡ್ಯ ರವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಎನ್ನುವುದಾಗಿ ಸಲಹೆಯನ್ನು ನೀಡುತ್ತಿದ್ದಾರೆ ಆದರೆ ಅವರು ಕೂಡ ಈ ಸಂದರ್ಭದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಲು ಅಸಮರ್ಥ ಎಂಬುದಾಗಿ ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ. ಕೆ ಎಲ್ ರಾಹುಲ್ ಸರಣಿಯ ಆರಂಭಕ್ಕೂ ಮುನ್ನವೇ ಇಂಜುರಿ ಯಿಂದ ಹೊರಕ್ಕೆ ಹೋಗಿದ್ದು ತಂಡಕ್ಕೆ ಈಗ ಭಾರಿ ವಿಪತ್ತಿನ ಪರಿಣಾಮವಾಗಿ ಕಾಣಿಸುತ್ತಿದೆ. ಈಗ ಎಲ್ಲರೂ ಕೂಡ ಆ ಒಬ್ಬ ಕ್ರಿಕೆಟಿಗನನ್ನು ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮುನ್ನಡೆಸಲಿ ತಂಡದ ಸರಣಿ ಗೆಲ್ಲುತ್ತದೆ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು ಗೆಳೆಯರೇ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಈ ಬಾರಿ ಐಪಿಎಲ್ ನಲ್ಲಿ ಫಿನಿಶರ್ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ಹಾಗೂ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಣಜಿಯಲ್ಲಿ ತಮಿಳುನಾಡು ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹಾಗೂ ಅನುಭವವನ್ನು ಹೊಂದಿರುವ ದಿನೇಶ್ ಕಾರ್ತಿಕ್ ರವರನ್ನು ಕಪ್ತಾನನನ್ನಾಗಿ ಆಯ್ಕೆ ಮಾಡಿ ಖಂಡಿತವಾಗಿ ಭಾರತೀಯ ಕ್ರಿಕೆಟ್ ತಂಡ ಗೆಲ್ಲುತ್ತದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡ ಅನುಭವಿಸುತ್ತಿರುವ ಸಮಸ್ಯೆಯನ್ನು ಗಮನಿಸಿದರೆ ಇದು ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು.

Get real time updates directly on you device, subscribe now.