ವಿಜ್ಞೇಶ್ ರವರ ಜೊತೆ ಮದುವೆಯಾದ ನಯನತಾರ, ಮದುವೆಗೂ ಮುನ್ನ ಯಾವ್ಯಾವ ನಟರ ಜೊತೆ ಪ್ರೀತಿಯಲ್ಲಿ ಇದ್ದರೂ ಗೊತ್ತೇ?? ಲಿಸ್ಟ್ ನಲ್ಲಿ ಯಾರ್ಯಾರ ಹೆಸರಿದೆ ಗೊತ್ತೇ?
ನಮಸ್ಕಾರ ಸ್ನೇಹಿತರೆ ಈಗಾಗಲೇ ದಕ್ಷಿಣ ಭಾರತದ ಲೇಡಿ ಸೂಪರ್ಸ್ಟಾರ್ ಆಗಿರುವಂತಹ ನಯನತಾರ ರವರು ನಿರ್ದೇಶಕ ವಿಘ್ನೇಶ್ ಶಿವನ್ ರವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊನೆಗೂ ಕೂಡ ಹಲವಾರು ವರ್ಷಗಳ ಡೇಟಿಂಗ್ ನಂತರ ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದು ಅಭಿಮಾನಿಗಳಿಗೆ ಸಂತೋಷವನ್ನು ನೀಡಿದೆ.
ಇವರಿಬ್ಬರು ಮದುವೆ ಆಗುತ್ತಿದ್ದಂತೆಯೇ ನಯನತಾರ ರವರ ಹಳೆಯ ಲವ್ ಸ್ಟೋರಿಗಳ ಕಹಾನಿ ಗಳು ಈಗ ಹೊರಬರುತ್ತಿವೆ.
ಹೌದು ಗೆಳೆಯರೆ ನಯನತಾರಾ ರವರು ವಿಘ್ನೇಶ್ ಶಿವನ್ ರವರನ್ನು ಮದುವೆಯಾಗುವುದಕ್ಕಿಂತ ಮುಂಚೆ ಇಬ್ಬರು ಖ್ಯಾತ ನಟರನ್ನು ಡೇಟಿಂಗ್ ಮಾಡಿದ್ದಾರೆ ಎಂಬ ಸುದ್ದಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹೌದು ಗೆಳೆಯರೆ ಮೊದಲಿಗೆ ತಮಿಳು ಚಿತ್ರರಂಗದ ಖ್ಯಾತ ನಟ ಸಿಲಂಬರಸನ್ ಅಂದರೆ ಸಿಂಬು ರವರನ್ನು ವಲ್ಲವನ್ ಚಿತ್ರದ ಸಂದರ್ಭದಲ್ಲಿ ಅಂದರೆ 2006 ರ ಆಸುಪಾಸಿನಲ್ಲಿ ನಯನತಾರಾ ರವರು ಪ್ರೀತಿಸುತ್ತಿದ್ದರೆ ಎಂಬ ಮಾತಿತ್ತು. ಇಬ್ಬರು ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸುವುದು ಹಾಗೂ ಜೊತೆಗೆ ಓಡಾಡುವುದು ಕಂಡುಬಂದಿತ್ತು. ನಂತರ ಇವರಿಬ್ಬರ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರು ಕೂಡ ಬ್ರೇಕಪ್ ಮಾಡಿಕೊಂಡಿದ್ದರು. ಇದಾದನಂತರ ನಯನತಾರ ರವರು ಮತ್ತೊಬ್ಬರ ಜೊತೆ 2009 ರಲ್ಲಿ ಪ್ರೀತಿಗೆ ಬೀಳುತ್ತಾರೆ.
ಹೌದು ಭಾರತೀಯ ಚಿತ್ರರಂಗದ ಮೈಕಲ್ ಜಾಕ್ಸನ್ ಎಂದೇ ಖ್ಯಾತರಾಗಿರುವ ಪ್ರಭುದೇವ ರವರ ಜೊತೆಗೆ ನಯನತಾರಾ ರವರು ಪ್ರೀತಿಯಲ್ಲಿ ಬೀಳುತ್ತಾರೆ. ಇವರಿಬ್ಬರು ಮದುವೆಯಾಗುತ್ತಾರೆ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು ಆದರೆ ಕಾರಣಾಂತರಗಳಿಂದ ಇವರ ಸಂಬಂಧ ಅರ್ಧದಲ್ಲಿಯೇ ಮುರಿದುಬಿತ್ತು. ನಂತರ 2015 ಆಸುಪಾಸಿನಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ವಿಘ್ನೇಶ್ ರವರ ಪರಿಚಯವಾಗಿ ನಂತರ ಪರಿಚಯ ಪ್ರೀತಿಗೆ ತಿರುಗಿ ಈಗ ಇವರಿಬ್ಬರು ಮದುವೆಯಾಗಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಇವರಿಬ್ಬರಿಗೆ ಕಾಮೆಂಟ್ ಮಾಡುವ ಮೂಲಕ ಶುಭಾಶಯಗಳನ್ನು ನೀವು ತಿಳಿಸಬಹುದಾಗಿದೆ.