ಈ ಬಾರಿ ಮತ್ತೆ ಎರಡು ಕೋಟಿ ಆಫರ್ ರಿಜೆಕ್ಟ್ ಮಾಡಿ ಸಾಯಿ ಪಲ್ಲವಿ, ನೀಡಿದ ಕಾರಣವೇನು ಗೊತ್ತೇ??ಇವೆಲ್ಲ ಒಪ್ಪಿಕೊಳ್ಳಿ ಎಂದರೆ ಇನ್ನು ಕೆಲವರು ಬೇಡ ಎಂದದ್ದು ಯಾಕೆ ಗೊತ್ತೇ??

66

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಆಗಿರುವ ಸಾಯಿ ಪಲ್ಲವಿ ಅವರು ತಮ್ಮ ನಟನೆ ಹಾಗೂ ನೃತ್ಯದ ಮೂಲಕವೇ ಇಡೀ ಭಾರತ ದೇಶದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರೇಮ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಕಾಲಿಡುವ ಮೂಲಕ ಚಿತ್ರಜಗತ್ತಿಗೆ ಪಾದಾರ್ಪಣೆ ಮಾಡಿರುವ ಸಾಯಿ ಪಲ್ಲವಿ ಅವರು ಈಗಾಗಲೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರತಿಯೊಂದು ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ನಟನೆಯ ವಿಚಾರಕ್ಕೆ ಬಂದಾಗ ಸಾಯಿ ಪಲ್ಲವಿ ಅವರು ಇಂದಿನ ಕಾಲದ ನಟಿಯರಲ್ಲಿ ಅಗ್ರಗಣ್ಯನಾಗಿ ಕಾಣಸಿಗುತ್ತಾರೆ. ಇನ್ನು ನಟನೆ ಬಿಟ್ಟು ನೃತ್ಯದ ವಿಚಾರಕ್ಕೆ ಬಂದರೆ ಯಾವ ಸ್ಟಾರ್ ಹೀರೋ ಇದ್ದರೂ ಕೂಡ ಅವರಿಗಿಂತ ಹೆಚ್ಚಾಗಿ ಹಾಗೂ ಇನ್ನಷ್ಟು ಸುಂದರವಾಗಿ ಕುಣಿಯುವ ಕ್ಷಮತೆ ಸಾಯಿ ಪಲ್ಲವಿ ಅವರ ಬಳಿಯಿದೆ.

ಪ್ರತಿಯೊಂದು ಚಿತ್ರವನ್ನು ಅವರು ಆಯ್ಕೆ ಮಾಡುವಾಗ ಅದರಲ್ಲಿರುವ ವಿಚಾರಗಳನ್ನು ಅಳೆದು-ತೂಗಿ ನಂತರವೇ ಆ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳುತ್ತಾರೆ. ಹೌದು ಗೆಳೆಯರೇ ಇನ್ನೂ ಅವರ ಕುರಿತಂತೆ ಮೆಚ್ಚಬೇಕಾದ ಇನ್ನೊಂದು ವಿಚಾರ ಎಂದರೆ ಅವರು ಜಾಹೀರಾತಿನಲ್ಲಿ ಅಷ್ಟೊಂದು ಹೆಚ್ಚಾಗಿ ನಟಿಸುವುದಿಲ್ಲ. ಬೇರೆ ನಟ-ನಟಿಯರು ಜಾಹೀರಾತಿನ ಆಫರ್ ಬಂದಾಗ ಹಿಂದೆ ಮುಂದೆ ನೋಡದೆ ದುಡ್ಡಿಗಾಗಿ ನಟಿಸಿ ಬಿಡುತ್ತಾರೆ. ಆ ತರಹ ಮಾಡುವುದಾಗಿದ್ದರೆ ಸಾಯಿ ಪಲ್ಲವಿ ಅವರು ವರ್ಷಕ್ಕೆ 15 ರಿಂದ 20 ಕೋಟಿ ರೂಪಾಯಿ ಸಂಪಾದನೆಯನ್ನು ಕೇವಲ ಜಾಹೀರಾತಿನಿಂದ ಪಡೆಯಬಹುದಾಗಿತ್ತು. ಆದರೆ ಸಾಮಾಜಿಕ ಕಳಕಳಿಕೆ ಇಲ್ಲದಂತಹ ವಸ್ತುಗಳ ಜಾಹೀರಾತಿನಲ್ಲಿ ನಟಿಸುವುದು ಸರಿಯಲ್ಲ ಎನ್ನುವುದು ಅವರು ಮೊದಲಿನಿಂದಲೂ ಕೂಡ ತೆಗೆದುಕೊಂಡಿರುವ ನಿರ್ಧಾರವಾಗಿದೆ. ಇತ್ತೀಚಿಗಷ್ಟೇ 2 ಕೋಟಿ ರೂಪಾಯಿ ಮೊತ್ತದ ದೊಡ್ಡವರ ಬಂದಿದ್ದರೂ ಕೂಡ ಅದನ್ನು ನೇರವಾಗಿಯೇ ನಿರಾಕರಿಸಿದ್ದಾರೆ.

ಹೌದು ಗೆಳೆಯರೇ ತೆಲುಗು ಸಂಸ್ಥೆಯೆಂದು ಹೊಸ ಧಾರವಾಹಿಯ ಪ್ರೊಮೊ ಪ್ರಮೋಷನ್ ಗಾಗಿ ಸಾಯಿ ಪಲ್ಲವಿ ಅವರನ್ನು ಸಂಪರ್ಕಿಸಿತ್ತು. ಕೇವಲ ಇಷ್ಟು ಮಾತ್ರವಲ್ಲದೆ ಎರಡು ಕೋಟಿ ರೂಪಾಯಿಯ ದೊಡ್ಡಮೊತ್ತದ ಆಫರನ್ನು ಕೂಡ ಅವರಿಗೆ ನೀಡಿತ್ತು‌. ಆದರೆ ಸಾಯಿ ಪಲ್ಲವಿ ಅವರು ಕೇವಲ ಸಿನಿಮಾದಲ್ಲಿ ಮಾತ್ರ ನಾನು ನಟಿಸುತ್ತೇನೆ ಈ ಮಾರ್ಗದ ಮೂಲಕ ನಾನು ದುಡ್ಡನ್ನು ಸಂಪಾದಿಸಲು ಇಷ್ಟಪಡುವುದಿಲ್ಲ ಎನ್ನುವುದಾಗಿ ನೇರವಾಗಿ ಹೇಳಿದ್ದಾರೆ. ಸಾಯಿ ಪಲ್ಲವಿ ಅವರ ಈ ನಡೆ ಎಲ್ಲರ ಮನಗೆದ್ದಿದೆ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಸಾಯಿಪಲ್ಲವಿ ಅವರ ಕೈಯಲ್ಲಿ ಹಲವಾರು ಸಿನಿಮಾಗಳನ್ನು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Get real time updates directly on you device, subscribe now.