ನೇರವಾಗಿ ಪ್ರಭಾಸ್ ಸಂಭಾವನೆ ರೇಂಜಿಗೆ ಬೆಳೆದು ನಿಂತ ಅಲ್ಲು ಅರ್ಜುನ್. ಪುಷ್ಪ 2 ಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ?? ತಿಳಿದರೆ ಮನಸ್ಸಿಗೆ ಖುಷಿಯೋ ಖುಷಿ.
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಪುಷ್ಪ ಚಿತ್ರದ ಯಶಸ್ಸಿನ ನಂತರ ಪುಷ್ಪ 2 ಚಿತ್ರದ ಕುರಿತಂತೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ ಎಂದು ಹೇಳಬಹುದಾಗಿದೆ. ಅಲ್ಲು ಅರ್ಜುನ್ ರವರನ್ನು ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಕಾಣುವುದಕ್ಕಾಗಿ ಅಭಿಮಾನಿಗಳು ಸೇರಿದಂತೆ ಚಿತ್ರ ರಸಿಕರು ಕಾತರರಾಗಿದ್ದಾರೆ. ಈಗಾಗಲೇ ಸಿನಿಮಾ ಬಿಡುಗಡೆಗೂ ಮುನ್ನವೇ ಕೇವಲ ಬಿಡುಗಡೆಯಾಗಿ ಚಿತ್ರೀಕರಣದ ಆರಂಭಕ್ಕೂ ಮುನ್ನವೇ 700 ಕೋಟಿ ರೂಪಾಯಿ ರಿಲೀಸ್ ಬಿಸಿನೆಸ್ ಮಾಡುತ್ತದೆ ಎಂಬುದಾಗಿ ಕನ್ಫರ್ಮ್ ಆಗಿದೆ.
ಹೀಗಾಗಿ ನಾಯಕನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಅವರ ಸಂಭಾವನೆ ಕೂಡ ಹೆಚ್ಚಾಗಿದೆ. ಈ ಹಿಂದೆ ಪುಷ್ಪ ಚಿತ್ರದ ಮೊದಲ ಭಾಗಕ್ಕಾಗಿ ಅಲ್ಲುಅರ್ಜುನ್ ರವರು ಬರೋಬ್ಬರಿ 45 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ಆದರೆ ಈಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ರೆಬೆಲ್ ಸ್ಟಾರ್ ಪ್ರಭಾಸ್ ರವರಿಗೆ ಸರಿಸಮನಾಗಿ ಸಂಭಾವನೆಯನ್ನು ಅಲ್ಲು ಅರ್ಜುನ್ ರವರು ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗಿದ್ದರೆ ಪುಷ್ಪ 2 ಚಿತ್ರಕ್ಕಾಗಿ ಅಲ್ಲುಅರ್ಜುನ್ ರವರು ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಎಂಬುದರ ತಿಳಿದುಕೊಳ್ಳೋಣ ಬನ್ನಿ.
ಹೌದು ಗೆಳೆಯರೇ ಚಿತ್ರದ ಲಾಭದಲ್ಲಿ ಪಾಲು ಮಾತ್ರವಲ್ಲದೆ ಚಿತ್ರಕ್ಕಾಗಿ ಅಲ್ಲು ಅರ್ಜುನ್ ರವರು ಬರೋಬ್ಬರಿ 100 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳಲಿದ್ದಾರಂತೆ. ಇದಕ್ಕೂ ಮುನ್ನ ರೆಬಲ್ ಸ್ಟಾರ್ ಪ್ರಭಾಸ್ ರವರು ನೂರು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಕೇವಲ ಒಂದೇ ಒಂದು ಪ್ಯಾನ್ ಇಂಡಿಯಾ ಸಿನಿಮಾದ ಮೂಲಕ ನೂರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟರ ಲಿಸ್ಟಿಗೆ ಅಲ್ಲು ಅರ್ಜುನ್ ಅವರು ನೇರವಾಗಿ ಎಂಟ್ರಿ ಪಡೆದಿದ್ದಾರೆ. ಸುಕುಮಾರ್ ಕೂಡ 65 ಕೋಟಿ ರೂಪಾಯಿ ಸಂಭಾವನೆಯನ್ನು ಚಿತ್ರಕ್ಕಾಗಿ ಪಡೆಯಲಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು ಚಿತ್ರದ ಕಥೆಯಲ್ಲಿ ಕೂಡ ಕೊಂಚ ಮಟ್ಟಿಗೆ ಬದಲಾವಣೆಯನ್ನು ಈ ಬಾರಿಗೆ ಮಾಡಲಿದ್ದಾರೆ. ಒಟ್ಟಾರೆಯಾಗಿ ಪುಷ್ಪ 2 ಚಿತ್ರದ ಗೆಲುವಿಗಾಗಿ ಪ್ರತಿಯೊಬ್ಬರು ಕೂಡ ಸಾಕಷ್ಟು ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ.