ಕಮಲ್ ಹಾಸನ್ ವಿಕ್ರಂ ಬಿಡುಗಡೆಯಾಗುತ್ತಿದ್ದಂತೆ ಕೆಜಿಎಫ್ ಮೇಲೆ ಮತ್ತೊಮ್ಮೆ ಟೀಕೆ ಮಾಡಿದ ಕಮಾಲ್ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಈ ವರ್ಷ ಭಾರತೀಯ ಚಿತ್ರರಂಗವನ್ನು ನೋಡುವುದಾದರೆ ದಕ್ಷಿಣ ಭಾರತದ ಚಿತ್ರಗಳ ಪ್ರಾಬಲ್ಯ ಹೆಚ್ಚಾಗಿ ಕಂಡು ಬಂದಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ತೆಲುಗಿನ ಆರ್ ಆರ್ ಆರ್ ಚಿತ್ರದ ನಂತರ ಇಡೀ ಭಾರತವನ್ನು ಹಾಗೂ ಜಾಗತಿಕ ಚಿತ್ರಜಗತ್ತಿನ ಆವರಿಸಿಕೊಂಡಿದ್ದು ನಮ್ಮೆಲ್ಲರ ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ ಚಾಪ್ಟರ್ 2 ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ಕೆಜಿಎಫ್ ಚಾಪ್ಟರ್ 2 ಚಿತ್ರ ಇಡೀ ಭಾರತದಲ್ಲಿ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಮೂರನೇ ಚಿತ್ರ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.
ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಕನ್ನಡ ಚಿತ್ರರಂಗದಲ್ಲಿ ಎಂದು ಮುರಿಯಲಾಗದಂತಹ ದಾಖಲೆಯನ್ನು ನಿರ್ಮಿಸಿದೆ. ಈಗ ಇದೇ ಸಾಲಿಗೆ ತಮಿಳು ಚಿತ್ರರಂಗದ ಖ್ಯಾತ ಹಿರಿಯ ನಟ ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರವು ಕೂಡ ಸೇರಲಿದೆ ಎಂಬುದಾಗಿ ಎಲ್ಲರೂ ಲೆಕ್ಕಾಚಾರ ಹಾಕುತ್ತಿದ್ದಾರೆ. ಈಗಾಗಲೇ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಸಿನಿಮಾ ಈಗಾಗಲೇ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಪರರಾಷ್ಟ್ರಗಳಲ್ಲಿ ಕೂಡ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತಿದೆ. ಲೋಕೇಶ್ ಕನಗರಜ್ ನಿರ್ದೇಶನದಲ್ಲಿ ಕಮಲಹಾಸನ್ ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಈ ಸಿನಿಮಾ ಈಗಾಗಲೇ ನೆಕ್ಸ್ಟ್ ಲೆವೆಲ್ ನಲ್ಲಿ ಮೂಡಿ ಬಂದಿದೆ.

ಇನ್ನು ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಹಿಂದಿ ಚಿತ್ರರಂಗದ ವಿಮರ್ಶಕ ಆಗಿರುವ ಕಮಾಲ್ ಆರ್ ಖಾನ್ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಟೀಕಿಸಿದ್ದಾನೆ. ಹೌದು ಗೆಳೆಯರೇ ಕಮಾಲ್ ಆರ್ ಖಾನ್ ನನ್ನ ಕೆಆರ್ ಕೆ ಎಂದು ಕರೆಯುತ್ತಾರೆ. ಈತ ವಿಮರ್ಶಕ ಆಗಿದ್ದರು ಕೂಡ ಎಲ್ಲರೂ ಈತನನ್ನು ಕಾಮಿಡಿಯನ್ ಎಂದು ಕರೆಯುತ್ತಾರೆ. ವಿಕ್ರಂ ಚಿತ್ರದ ಯಶಸ್ಸಿನ ಬೆನ್ನಲ್ಲೇ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ವಿಕ್ರಂ ಚಿತ್ರದ ಮುಂದೆ ಬಚ್ಚಾ ಎಂಬುದಾಗಿ ಈತ ಕರೆದಿದ್ದಾನೆ. ಈ ಹಿಂದೆ ಯಶ್ ರವರನ್ನು ಭೋಜಪುರಿ ನಟ ಎಂಬುದಾಗಿ ಕೂಡ ಟೀಕಿಸಿದ್ದ ಎಂಬುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ. ಈತನ ಪ್ರತಿಕ್ರಿಯೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.