ದರ್ಶನ್ ರವರ ಜೊತೆ ನಟನೆ ಮಾಡಿರುವ ಊರ್ವಶಿ ರವರು ಧರಿಸಿರುವ ಈ ಗೌನಿನ ಬೆಲೆ ಎಷ್ಟು ಗೊತ್ತೇ?? ಒಂದು ಗೌನಿಗೆ ನಟಿ ಕೊಟ್ಟಿದ್ದು ಎಷ್ಟು ಲಕ್ಷ ಗೊತ್ತೇ?
ನಮಸ್ಕಾರ ಸ್ನೇಹಿತರೇ ಬಾಲಿವುಡ್ ನಟಿ ಆಗಿರುವ ಊರ್ವಶಿ ರೌಟೇಲಾ ರವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದರಲ್ಲೂ ನಮ್ಮ ಕನ್ನಡಿಗರಿಗೆ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಮೇಲೆ ಚಿರಪರಿಚಿತರಾಗಿದ್ದಾರೆ ಎಂದು ಹೇಳಬಹುದಾಗಿದೆ. ಊರ್ವಶಿ ರೌಟೇಲಾ ರವರು ಆಗಾಗ ಸುದ್ದಿಯಲ್ಲಿರುತ್ತಾರೆ. ಹಲವಾರು ಬಾರಿ ವಿವಿಧ ವಿಚಾರಗಳಿಗಾಗಿ ಅವರು ಸುದ್ದಿಯಾಗಿದ್ದರು. ಹಿಂದೆ ಒಮ್ಮೆ ಕ್ರಿಕೆಟಿಗ ರಿಷಬ್ ಪಂತ್ ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರಕ್ಕಾಗಿ ಕೂಡ ಇವರು ಸುದ್ದಿಯಾಗಿದ್ದರು.
ಆದರೆ ಈಗ ಅವರು ಸುದ್ದಿಯಾಗುತ್ತಿರುವುದು ಅವರು ತೊಟ್ಟಿರುವ ಬಟ್ಟೆಗಾಗಿ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಊರ್ವಶಿ ರೌಟೇಲಾ ರವರು ಸದ್ಯಕ್ಕೆ ದುಬೈನಲ್ಲಿ ನಡೆಯುತ್ತಿರುವ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಅವಾರ್ಡ್ ಫಂಕ್ಷನ್ ಆಗಿರುವ ಐಫಾ ದಲ್ಲಿ ಭಾಗವಹಿಸಿದ್ದು ಇಲ್ಲಿ ತೊಟ್ಟಿರುವ ಬಟ್ಟೆ ಅಂದರೆ ಗೌನ್ ಎಲ್ಲರ ಗಮನ ಸೆಳೆದಿದ್ದು ಇದರ ಬೆಲೆಯನ್ನು ನೋಡಿ ಎಲ್ಲರೂ ಕೂಡ ದಿಗ್ಭ್ರಾಂತರಾಗಿದ್ದಾರೆ. ಹೌದು ಗೆಳೆಯರೇ ಕೇವಲ ಇದೊಂದೇ ಬಟ್ಟೆಯಿಂದ ಒಂದು ಸಾಮಾನ್ಯ ಕುಟುಂಬದ 2ರಿಂದ 3 ವರ್ಷದ ಖರ್ಚು ಕಳೆಯಬಹುದೇ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.
ಹೌದು ಗೆಳೆಯರೆ 13 ಗಂಟೆಗಳ ಸತತ ಕೆಲಸದ ನಂತರ 20 ಜನರ ತಂಡ ಊರ್ವಶಿ ರೌಟೇಲಾ ರವರ ಈ ಗೌನ್ ಅನು ತಯಾರಿಸಿದ್ದು ಸಾಕಷ್ಟು ದುಬಾರಿ ತಯಾರಿಕೆ ಆಗಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಊರ್ವಶಿ ರೌಟೇಲಾ ತೊಟ್ಟುಕೊಂಡಿರುವ ಗೌನ್ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ. ಇದಕ್ಕೂ ಮುನ್ನ ಮಿಸ್ ಯೂನಿವರ್ಸ್ ಸ್ಪರ್ಧೆಯ ತಿರ್ಪು ಗಾರರಾಗಿ ಹೋದ ಸಂದರ್ಭದಲ್ಲಿ ಊರ್ವಶಿ ರೌಟೇಲಾ ಬರೋಬ್ಬರಿ 50 ಲಕ್ಷ ರೂಪಾಯಿ ಗೌನ್ ಅನು ಧರಿಸಿರುವ ಘಟನೆಯನ್ನು ಕೂಡ ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.