ವಿಷ್ಣು ದಾದಾ ರವರು ಪ್ರೀತಿ ಮಾಡಿದ ಹುಡುಗಿಗೆ ಅಂದು ಸುಂದರ್ ರಾಜ್ ಮಾಡಿದ್ದೇನು ಗೊತ್ತೇ?? ಸುಂದರ್ ರಾಜ್ ರವರು ಹೇಳಿದ್ದೇನು ಗೊತ್ತೇ??

32

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಾಹಸಸಿಂಹ ವಿಷ್ಣುವರ್ಧನ್ ರವರು ಕನ್ನಡ ಚಿತ್ರರಂಗದಲ್ಲಿ ಯಾವ ಮಟ್ಟದ ಸಾಧನೆ ಮಾಡಿದ್ದಾರೆ ಎಂಬುದು ಪ್ರತಿಯೊಬ್ಬರಿಗೂ ಕೂಡ ಗೊತ್ತಿರುವ ವಿಚಾರ. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪಂಚ ಭಾಷೆಗಳಲ್ಲಿ ಕೂಡ ತಮ್ಮ ನಟನೆಯ ಕಂಪನ್ನು ಅಂದಿನ ಕಾಲದಲ್ಲೇ ಹರಿಸಿದವರು. ಹೌದು ಗೆಳೆಯರೆ ಇನ್ನು ಚಿತ್ರರಂಗದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿ ಕೂಡ ಸಾಹಸಸಿಂಹ ವಿಷ್ಣುವರ್ಧನ್ ರವರು ಎಲ್ಲರಿಗೂ ನೆಚ್ಚಿನ ವ್ಯಕ್ತಿಯಾಗಿದ್ದರು. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಸಿನಿಮಾರಂಗದಲ್ಲಿ ಬಂದ ಮೇಲೆ ಇದ್ದ ವಿಷ್ಣುವರ್ಧನ್ ಅವರ ಕುರಿತಂತೆ ಅಲ್ಲ.

ಬದಲಾಗಿ ಅವರು ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚೆ ಕಾಲೇಜಿನಲ್ಲಿ ಇದ್ದಂತಹ ವಿಷ್ಣುವರ್ಧನರವರ ಕುರಿತಂತೆ. ಹೌದು ಗೆಳೆಯರೇ ಮೇಘನರಾಜ್ ರವರ ತಂದೆಯಾಗಿರುವ ಹಿರಿಯ ಕಲಾವಿದ ಸುಂದರರಾಜ್ ರವರು ಕಾಲೇಜು ದಿನಗಳಿಂದಲೂ ಕೂಡ ವಿಷ್ಣುವರ್ಧನ್ ರವರ ಸಹಪಾಠಿಯಾಗಿದ್ದವರು. ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚಿನಿಂದಲೂ ಕೂಡ ವಿಷ್ಣುವರ್ಧನ್ ಹಾಗೂ ಸುಂದರರಾಜ್ ಇಬ್ಬರೂ ಕೂಡ ಅತ್ಯಂತ ಆಪ್ತಗೆಳೆಯರಾಗಿದ್ದರು.

ಇನ್ನು ಇತ್ತೀಚಿಗಷ್ಟೇ ನಡೆದಿರುವ ಒಂದು ಸಂದರ್ಶನದಲ್ಲಿ ಸುಂದರರಾಜ್ ವಿಷ್ಣುವರ್ಧನ್ ರವರ ಕಾಲೇಜು ಲವ್ ಕಹಾನಿಯ ಕುರಿತಂತೆ ಹೇಳಿಕೊಂಡಿದ್ದಾರೆ. ಒಂದು ದಿನ ವಿಷ್ಣುವರ್ಧನ್ ರವರು ಸುಂದರ್ ರಾಜ್ ಅವರ ಕೈಗೆ ಗುಲಾಬಿ ಹೂವನ್ನು ಇಟ್ಟು ಆ ಹುಡುಗಿಗೆ ಕೊಡುವಂತೆ ಹೇಳುತ್ತಾರೆ. ಅವರು ಬಸ್ಸು ಹತ್ತಿಕೊಂಡು ಹೋಗುತ್ತಾರೆ ಅವರ ಹಿಂದೆಯೇ ಸುಂದರರಾಜ್ ಕೂಡ ಹೋಗುತ್ತಾರೆ. ಬಸ್ಸಿನಿಂದ ಇಳಿದ ನಂತರ ಆ ಹುಡುಗಿ ಇವರ ಬಳಿ ನೀನು ಯಾಕೆ ನನ್ನನ್ನು ಫಾಲೋ ಮಾಡುತ್ತಿದ್ದೀಯ ಎಂಬುದಾಗಿ ಕೇಳುತ್ತಾರೆ. ಆಗ ಸುಂದರ್ ರಾಜ್ ವಿಷ್ಣು ನೀಡಿದ್ದಾನೆ ಎಂಬುದಾಗಿ ಹೇಳಿ ಗುಲಾಬಿ ಹೂವನ್ನು ಆಕೆಯ ಕೈಗೆ ನೀಡುತ್ತಾರೆ. ಹೀಗೆ ವಿಷ್ಣುವರ್ಧನ್ ರವರ ಕಾಲೇಜ್ ಲವ್ ಕಹಾನಿ ಕುರಿತಂತೆ ಅವರ ಗೆಳೆಯ ಸುಂದರರಾಜ್ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Get real time updates directly on you device, subscribe now.