ಒಂದು ವೇಳೆ ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೇ, ಮಾತ್ರೆ ಬದಲು ಮನೆ ಮದ್ದು ಬಳಸಿ, ಹಣವು ಉಳಿತಾಯ, ಸೈಡ್ ಎಫೆಕ್ಟ್ಸ್ ಕೂಡ ಇರುವುದಿಲ್ಲ. ಏನು ಮಾಡಬೇಕು ಗೊತ್ತೇ?

31

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ವೇಗದ ದುನಿಯಾದಲ್ಲಿ ನಾವು ಕೇವಲ ದುಡ್ಡು ಮಾಡುವುದನ್ನು ಮಾತ್ರ ಯೋಚಿಸುತ್ತಿದ್ದೇವೆ. ಯಾರು ಕೂಡ ಆರೋಗ್ಯದ ಕುರಿತಂತೆ ಅಷ್ಟೊಂದು ಹೆಚ್ಚಾಗಿ ಗಮನವನ್ನು ನೀಡುತ್ತಿಲ್ಲ. ಅದರಲ್ಲೂ ಹೊರಗಿನ ಊಟಗಳನ್ನು ಮಾಡುವುದರಿಂದ ಅಥವಾ ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವ ಕಾರಣದಿಂದಾಗಿ ಅಸಿಡಿಟಿ ಎನ್ನುವುದು ಹೆಚ್ಚಾಗುತ್ತದೆ. ಇದನ್ನು ಪರಿಹರಿಸಿಕೊಳ್ಳುವ ಬಗೆ ಹೇಗೆ ಎನ್ನುವುದರ ಕುರಿತಂತೆ ಇಂದಿನ ವಿಚಾರದಲ್ಲಿ ಮಾತನಾಡಲು ಹೇಳಿದ್ದೆ. ಇದಕ್ಕಾಗಿ 5 ಪಾನೀಯಗಳನ್ನು ಕುಡಿದರೆ ಖಂಡಿತವಾಗಿ ಈ ಸಮಸ್ಯೆ ನಿವಾರಣೆ ಆಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಮೊದಲನೇದಾಗಿ ಎಳನೀರು; ನೈಸರ್ಗಿಕ ಪರಿಶುದ್ಧ ಪಾನಿಯ ಆಗಿರುವ ಎಳನೀರನ್ನು ಕುಡಿಯುವ ಕಾರಣದಿಂದಾಗಿ ನಿಮ್ಮ ದೇಹ ಸದಾಕಾಲ ಹೈಡ್ರೇಟ್ ಆಗಿರುತ್ತದೆ. ದೇಹಕ್ಕೆ ಬೇಕಾಗಿರುವ ಸೋಡಿಯಂ ಪೊಟ್ಯಾಷಿಯಂ ಮೆಗ್ನೀಷಿಯಂ ನಂತಹ ಪೋಷಕಾಂಶಗಳನ್ನು ಒದಗಿಸುತ್ತದೆ. ಎಳನೀರು ಸೇವನೆಯನ್ನು ವುದು ನಿಮ್ಮ ದೇಹದಲ್ಲಿರುವ ಅಸ್ವಸ್ಥತೆಯನ್ನು ಕಡಿಮೆ ಮಾಡಿ ನಿಮ್ಮ ಹೊಟ್ಟೆಯಲ್ಲಿರುವ ಪಿಹೆಚ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಆಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.

ಎರಡನೇದಾಗಿ ತಂಪಾದ ಹಾಲು; ತಂಪಾದ ಹಾಲು ಕುಡಿಯುವುದು ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಹೆಚ್ಚಾಗಿ ಸೋರುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಕ್ಕರೆಯನ್ನು ಸೇರಿಸದೆ ಕಡಿಮೆ ಕಬ್ಬಿನ ಹಾಲು ಖಂಡಿತವಾಗಿ ನಿಮ್ಮ ಜಠರದಲ್ಲಿ ಇರುವಂತಹ ಆಮ್ಲೀಯತೆಯನ್ನು ಕಡಿಮೆ ಮಾಡಲು ಪ್ರಮುಖ ಹಾಗೂ ಪರಿಣಾಮಕಾರಿ ಮನೆಯ ಔಷಧಿ ಎಂದರೆ ತಪ್ಪಾಗಲಾರದು.

ಮೂರನೇದಾಗಿ ನಿಂಬೆ ಶುಂಠಿ ತುಳಸಿ ಮಿಶ್ರಣ; ತಲೆತಲಾಂತರದಿಂದಲೂ ಕೂಡ ನಿಂಬೆ ಶುಂಠಿ ಹಾಗೂ ತುಳಸಿಯನ್ನು ಬ್ಯಾಕ್ಟೀರಿಯಾದ ನಿವಾರಣೆಗಾಗಿ ಬಳಸಲಾಗುತ್ತಿದ್ದು ಇವುಗಳ ಮಿಶ್ರಣ ಹೊಟ್ಟೆಯಲ್ಲಿ ಬಿಡುಗಡೆಯಾಗುವ ಆಮ್ಲ ರೆಫ್ಲೆಕ್ಸ್ ಅನ್ನು ನಿವಾರಣೆ ಮಾಡುವಂತಹ ಪೋಷಕಾಂಶಗಳನ್ನು ಕೂಡ ಹೊಂದಿರುವುದರಿಂದಾಗಿ ಅಸಿಡಿಟಿ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಆಮ್ಲ ಸೋರುವಿಕೆಯನ್ನು ಜಠರದಲ್ಲಿ ಕಡಿಮೆ ಮಾಡುವ ಮೂಲಕ ಜೀರ್ಣಕ್ರಿಯೆಯಲ್ಲಿ ಕೂಡ ಈ ಮನೆಮದ್ದು ಸಾಕಷ್ಟು ಪರಿಣಾಮಕಾರಿಯಾಗಿರುತ್ತದೆ. ತುಳಸಿ ನಿಂಬೆ ಶುಂಠಿ ಇವೆಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ ಬಿಸಿ ನೀರಿನಲ್ಲಿ ಕುದಿಸಿ ದಿನಕ್ಕೆ ಒಂದರಿಂದ ಮೂರು ಕಪ್ ಅನು ಸೇವಿಸಿದರೆ ನೀವು ಇವೆಲ್ಲಾ ಸಮಸ್ಯೆಗಳಿಂದ ಪಾರಾಗುತ್ತೀರಿ.

ನಾಲ್ಕನೇದಾಗಿ ಸಕ್ಕರೆ ಇಲ್ಲದ ಸ್ಮೂಥಿಗಳು; ಕೃತಕ ಸಿಹಿ ಪದಾರ್ಥಗಳನ್ನು ಉಪಯೋಗಿಸದೆ ಮನೆಯಲ್ಲಿಯೇ ತಯಾರಿಸಲಾಗುವ ಹಣ್ಣು ಅಥವಾ ತರಕಾರಿ ಸ್ಮೂಥಿಗಳನ್ನು ಸೇವಿಸುವುದರಿಂದಾಗಿ ಜಠರದಲ್ಲಿ ಬಿಡುಗಡೆಯಾಗುವ ಆಮ್ಲವನ್ನು ತಡೆಯಬಹುದಾಗಿದೆ. ಇಂತಹ ಸಮಸ್ಯೆಗಳನ್ನು ನೀವು ಎದುರಿಸಿದಾಗ ಬಾಳೆಹಣ್ಣಿನ ಸ್ಮೂಥಿಗಳನ್ನು ಅಥವಾ ಹಾಲಿನಲ್ಲಿ ಓಟ್ಸ್ ಹಾಕಿ ಸೇವಿಸಬಹುದಾಗಿದೆ.

ಕೊನೆಯದಾಗಿ ಪುದಿನಾ ಮಿಶ್ರಣ; ಎದೆ ಉರಿ ಹಾಗೂ ಆಸಿಡಿಟಿ ಸಮಸ್ಯೆಗಳಿಂದ ದೂರಮಾಡಲು ನೈಸರ್ಗಿಕ ತಂಪು ಕಾರ್ಯಕ್ರಮ ಆಗಿರುವ ಪುದಿನಾ ಮಿಶ್ರಣವನ್ನು ಸೇವಿಸುವುದು ಈ ಸಮಸ್ಯೆಗೆ ರಾಮಬಾಣವಾಗಿದೆ. ಪುದಿನಾ ದಲ್ಲಿರುವ ಕಾರ್ಮಿನೇಟಿವ್ ಗುಣಲಕ್ಷಣಗಳು ಜಠರದಲ್ಲಿ ಆಮ್ಲ ಸೋರಿಕೆಯನ್ನು ನಿಲ್ಲಿಸುವುದು. ಪುದೀನಾವನ್ನು ನೀರಿನಲ್ಲಿ ಕುದಿಸಿ ದಿನವಿಡೀ ಕುಡಿಯುವ ಕಾರಣದಿಂದಾಗಿ ನೀವು ಜಠರದಲ್ಲಿ ಆಮ್ಲೀಯತೆಯನ್ನು ಶಾಂತಗೊಳಿಸುವುದು ಹಾಗೂ ಕಿಬ್ಬೊಟ್ಟೆಯಲ್ಲಿ ಉರಿಯೂತ ಹೀಗೆ ಹಲವಾರು ಜೀರ್ಣಕ್ರಿಯೆ ಹಾಗೂ ಅಸಿಡಿಟಿ ಸಮಸ್ಯೆಗಳನ್ನು ನೀವು ಬಗೆಹರಿಸಿಕೊಳ್ಳಬಹುದಾಗಿದೆ.

ನೀವು ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಖಂಡಿತವಾಗಿ ಮನೆಮದ್ದುಗಳನ್ನು ನೀವು ದೈನಂದಿನ ಜೀವನದಲ್ಲಿ ಪ್ರಯತ್ನಿಸಬಹುದಾಗಿದೆ ಹಾಗು ಖಂಡಿತವಾಗಿ ನಿಮಗೆ ಸಮಾಧಾನಕರ ಫಲಿತಾಂಶವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.