ಪುರುಷರಲ್ಲಿ ಕಾಣಿಸಿಕೊಳ್ಳುವ ವೀರ್ಯಾ ಕಡಿಮೆಯಾಗುವ ಸಮಸ್ಯೆಗೆ ಕಾರಣಗಳೇನು ಅಂತೇ ಗೊತ್ತೇ?? ನೀವು ಈ ತಪ್ಪುಗಳನ್ನು ಮಾಡುತ್ತಿದ್ದೀರಾ??

110

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದಾಂಪತ್ಯಜೀವನದಲ್ಲಿ ಮಾನಸಿಕ ಪ್ರೀತಿಯ ಜೊತೆಗೆ ದೈಹಿಕ ಪ್ರೀತಿಯ ಪಾತ್ರವು ಕೂಡ ಪ್ರಮುಖವಾಗಿರುತ್ತದೆ. ಅದರಲ್ಲಿಯೂ ದಾಂಪತ್ಯದಲ್ಲಿ ಹೆಂಡತಿ ತಾಯಿ ಆದರೆ ಮಾತ್ರ ಆಕೆಯ ಹೆಣ್ತನ ಸಂಪೂರ್ಣವಾದಂತೆ ಎಂಬುದಾಗಿ ಮಾತನಾಡುತ್ತಾರೆ. ಈ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ತಿಳಿದುಬಂದಿರುವಂತೆ ಪುರುಷರ ವೀರ್ಯ ಗಳ ಸಂಖ್ಯೆ ಕಡಿಮೆಯಾಗುತ್ತಿದೆ ಇದೇ ಕಾರಣಕ್ಕಾಗಿ ಮಹಿಳೆಯರು ಗರ್ಭಿಣಿಯಾಗಲು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೀನು ಪುರುಷರಲ್ಲಿ ವೀರ್ಯ ಸಮಸ್ಯೆ ಕಡಿಮೆಯಾಗುವುದಕ್ಕೆ ಕೆಲವೊಂದು ವಿಚಾರಗಳು ಕಾರಣವಾಗಿರುತ್ತವೆ ಎಂಬುದಾಗಿ ಡ್ಯಾನಿಶ್ ವಿಜ್ಞಾನಿಗಳು ನಡೆಸಿರುವ ರಿಸರ್ಚ್ ಹಾಗೂ ಸಮೀಕ್ಷೆಯ ಪ್ರಕಾರ ತಿಳಿದುಬಂದಿದೆ. ಹಾಗಿದ್ದರೆ ವೀರ್ಯಾಣುಗಳ ಕೊರತೆಯ ಸಮಸ್ಯೆ ಉಂಟಾಗಲು ಕಾರಣ ಏನು ಎಂಬುದನ್ನು ತಿಳಿಯೋಣ ಬನ್ನಿ.

ಸ್ಥೂಲಕಾಯ; ಇತ್ತೀಚಿನ ದಿನಗಳಲ್ಲಿ ಪುರುಷರು ಸೇವಿಸುವಂತಹ ಆಹಾರ ಕ್ರಮದಿಂದಾಗಿ ಕೂಡ ಅವರ ತೂಕದಲ್ಲಿ ಹೆಚ್ಚಳ ಕಂಡುಬರುತ್ತದೆ. ಸ್ಥೂಲಕಾಯ ದಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಕಾರಣದಿಂದಾಗಿಯೇ ಅವರ ವೀರ್ಯದಲ್ಲಿ ಸಮಸ್ಯೆ ಕಂಡುಬರುತ್ತದೆ ಎಂಬುದಾಗಿ ಸಾಬೀತಾಗಿದೆ. ಹೀಗಾಗಿ ದಡೂತಿ ದೇಹವನ್ನು ಹೊಂದುವುದು ವೀರ್ಯದ ಸಮಸ್ಯೆಗೆ ಪ್ರಮುಖ ಕಾರಣವಾಗುವ ಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹೊಟ್ಟೆಯ ಕೊಬ್ಬು; ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ ತಜ್ಞರು ನಡೆಸಿರುವ ರಿಸರ್ಚ್ ಪ್ರಕಾರ 17ರಿಂದ 40ರ ವಯಸ್ಸಿನ ನಡುವಿನ ಪುರುಷರಲ್ಲಿ ವೀರ್ಯದ ಸಂಖ್ಯೆ ಹೆಚ್ಚಾಗಿರುತ್ತದೆ. ಆರೋಗ್ಯವಂತ ಪುರುಷರಲ್ಲಿ ಪ್ರತಿ ಮಿಲಿಲೀಟರ್ ವೀರ್ಯದಲ್ಲಿ 15 ಮಿಲಿಯನ್ ವೀರ್ಯಾಣುಗಳು ಇರಬೇಕು. ಆದರೆ ಹೊಟ್ಟೆಯಲ್ಲಿ ಕೊಬ್ಬು ಇರುವ ಕಾರಣದಿಂದಾಗಿ ಕೆಲವು ಪುರುಷರು ಈ ವಿಚಾರದಲ್ಲಿ ಅತ್ಯಂತ ಕಡಿಮೆ ವೀರ್ಯಾಣುಗಳನ್ನು ಹೊಂದಿರುತ್ತಾರೆ ಹಾಗೂ ಇದು ಕ್ರಮೇಣವಾಗಿ ಕುಂಠಿತಗೊಳ್ಳುತ್ತದೆ. ಹೀಗಾಗಿ ಹೊಟ್ಟೆಯ ಕೊಬ್ಬಿನ ಕಾರಣದಿಂದಾಗಿ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಾರೆ.

ಬೊಜ್ಜು ಹಾಗೂ ಕಳಪೆ ಆಹಾರ; ಇತ್ತೀಚಿನ ದಿನಗಳಲ್ಲಿ ಹಲವಾರು ವಿವಾಹಿತ ಪುರುಷರು ಮಕ್ಕಳನ್ನು ಹೊಂದುವಲ್ಲಿ ಅಸಫಲರಾಗುತ್ತಿದ್ದಾರೆ. ಪುರುಷನಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರಲ್ಲಿ ವೀರ್ಯ ಉತ್ಪಾದನೆಯ ಕ್ರಿಯೆಯು ಕೂಡ ಕಡಿಮೆಯಾಗುತ್ತಿದೆ. ಈ ಕಾರಣದಿಂದಲೇ ಯೌವನದಲ್ಲಿ ಇರುವಾಗಲೂ ಕೂಡ ಅವರು ಮಕ್ಕಳ ತಂದೆ ಯಾರು ಗುರು ಸಾಧ್ಯವಿಲ್ಲ ಯಾಕೆಂದರೆ ಅವರು ಸೇವಿಸುವ ಕಳಪೆ ಆಹಾರವೂ ಕೂಡ ಕಾರಣವಾಗಿರುತ್ತದೆ ಇದರಿಂದಾಗಿ ಬೊಜ್ಜು ಉಂಟಾಗಿಯು ಕೂಡ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮಾಲಿನ್ಯ; ಇತ್ತೀಚಿನ ದಿನಗಳಲ್ಲಿ ನಾವು ಆಧುನಿಕ ಜಗತ್ತಿಗೆ ತೆರೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಪರಿಸರದಲ್ಲಿರುವ ಗಾಳಿಯ ಗುಣಮಟ್ಟ ಯಾವರೀತಿಯಲ್ಲಿ ಮಲಿನಗೊಳ್ಳುತ್ತಿದೆ ಎಂಬುದು ನಿಮಗೆ ಹೆಚ್ಚಾಗಿ ಹೇಳಬೇಕಾಗಿಲ್ಲ. ಗಾಳಿಯ ಕಣಗಳು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ ಗಳೊಂದಿಗೆ ದೇಹವನ್ನು ಪ್ರವೇಶಿಸಿದಾಗ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ಇದು ಸಾಕಷ್ಟು ಸಮಸ್ಯೆಗೆ ನಿಮ್ಮನ್ನು ತಳ್ಳುತ್ತದೆ.

ಧೂಮಪಾನ; ಧೂಮಪಾನ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ವಂಶಾಭಿವೃದ್ಧಿಗೆ ಕೂಡ ಮಾರಕವಾಗಿದೆ. ಪುರುಷರಲ್ಲಿ ಫಲವತ್ತತೆಯನ್ನು ಕಡಿಮೆಮಾಡುವ ಧೂಮಪಾನ ಸೇವನೆ ವೀರ್ಯಾಣುಗಳ ಗುಣಮಟ್ಟದಲ್ಲಿ ಕೂಡ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಈ ಎಲ್ಲಾ ಕಾರಣಗಳಿಂದಾಗಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಹಾಗೂ ಗುಣಮಟ್ಟದಲ್ಲಿ ಸಾಕಷ್ಟು ವ್ಯತಿರಿಕ್ತ ಪರಿಣಾಮವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ. ಈ ಕುರಿತಂತೆ ಎಚ್ಚರವಹಿಸ ಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ‌

Get real time updates directly on you device, subscribe now.