ಭಾರತ ದೇಶದ ಚಿತ್ರರಂಗದಲ್ಲಿ ಇದುವರೆಗೂ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರಗಳು ಯಾವ್ಯಾವು ಗೊತ್ತೇ?? ಕನ್ನಡದ ಎಷ್ಟು ಚಿತ್ರಗಳಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಹಾಲಿವುಡ್ ಚಿತ್ರಗಳಿಗೆ ಕೂಡ ನಮ್ಮ ಭಾರತೀಯ ಚಿತ್ರಗಳು ಕಲೆಕ್ಷನ್ ವಿಚಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಾಂಪಿಟೇಷನ್ ನೀಡುತ್ತಿವೆ ಎಂಬುದಾಗಿ ತಿಳಿದುಬಂದಿದ್ದು ಇದು ಭಾರತೀಯ ಚಿತ್ರರಂಗದ ಬೆಳವಣಿಗೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೂ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
3 ಇಡಿಯಟ್ಸ್; ಬಾಲಿವುಡ್ ಚಿತ್ರರಂಗದ ಏಸ್ ಡೈರೆಕ್ಟರ್ ರಾಜಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಅಮೀರ್ ಖಾನ್ ಮಾಧವನ್ ಶರ್ಮಾನ್ ಜೋಶಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಮೂರು ಈಡಿಯಟ್ಸ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಂದಿನ ಕಾಲದಲ್ಲಿ 396 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ವಾರ್; ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಷನ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಆಕ್ಷನ್ ಥ್ರಿಲ್ಲರ್ ವಾರ್ ಚಿತ್ರ ಬಾಕ್ಸಾಫೀಸ್ ನಲ್ಲಿ 460 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿತ್ತು. ಮಾತ್ರವಲ್ಲದೆ ತೆರೆಕಂಡ ವರ್ಷದಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.
ಧೂಮ್ 3; 2013 ರಲ್ಲಿ ಬಿಡುಗಡೆಯಾದ ಅಮೀರ್ ಖಾನ್ ನಟನೆಯ ಧೂಮ್-3 ಚಿತ್ರ 545 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ 500 ಕೋಟಿ ರೂಪಾಯಿ ದಾಟಿದ ಮೊದಲ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಟೈಗರ್ ಜಿಂದಾ ಹೆ; ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಟೈಗರ್ ಸರಣಿಯ ಎರಡನೆಯ ಅವತರಣಿಕೆ ಚಿತ್ರ ಜಾಗತಿಕವಾಗಿ ಬಾಕ್ಸಾಫೀಸ್ ನಲ್ಲಿ ಬರೋಬ್ಬರಿ 562 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶಿ ಬಾಕ್ಸಾಫೀಸ್ ಗಳಿಕೆಯಲ್ಲಿ ಕೂಡ ಇದು ತನ್ನ ಪಾರಮ್ಯವನ್ನು ಮೆರೆದಿತ್ತು.
ಬಾಹುಬಲಿ; ರಾಜಮೌಳಿಯವರ ರಾಜ್ಯ ಭಾರ ಪ್ರಾರಂಭವಾಗಿದ್ದು ಬಾಹುಬಲಿ ಚಿತ್ರದ ಮೂಲಕವೇ. ಬಾಹುಬಲಿ ಚಿತ್ರದ ಮೊದಲ ಅವತರಣಿಕೆ ಜಾಗತಿಕವಾಗಿ ಬಾಕ್ಸಾಫೀಸ್ ನಲ್ಲಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ 650 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ರೆಬೆಲ್ ಸ್ಟಾರ್ ಪ್ರಭಾಸ್ ರವರಿಗೆ ಈ ಸಿನಿಮಾ ದೊಡ್ಡಮಟ್ಟದ ಜನಪ್ರಿಯತೆಯನ್ನು ನೀಡುತ್ತದೆ.
ರೋಬೋ 2.0; ರೋಬೋ ಚಿತ್ರದ ಮುಂದುವರೆದ ಭಾಗವಾಗಿ ಬಿಡುಗಡೆಯಾಗಿರುವ ಶಂಕರ್ ನಿರ್ದೇಶನದ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ನಾಯಕ ನಟನಾಗಿ ನಟಿಸಿರುವ ಅಕ್ಷಯ್ ಕುಮಾರ್ ಖಳನಾಯಕನಾಗಿ ಕಾಣಿಸಿಕೊಂಡಿರುವ ರೋಬೋ 2.0 ಸಿನಿಮಾ ಜಾಗತಿಕವಾಗಿ ಬಾಕ್ಸಾಫೀಸ್ ನಲ್ಲಿ ಬರೋಬ್ಬರಿ 709 ಕೋಟಿ ರೂಪಾಯಿ ಮಾಡಿತ್ತು. ನಮ್ಮ ದೇಶಕ್ಕಿಂತ ಹೆಚ್ಚಾಗಿ ವಿದೇಶದಲ್ಲಿ ಚಿತ್ರ ಮಿಂಚಿತ್ತು ಎಂದರೆ ತಪ್ಪಾಗಲಾರದು.
ಪಿಕೆ; ರಾಜಕುಮಾರ್ ಹಿರಾನಿ ನಿರ್ದೇಶನದ ಹಾಗೂ ಅಮೀರ್ ಖಾನ್ ನಟನೆಯ ಮತ್ತೊಂದು ಸಿನಿಮಾ ಪಿಕೆ ಬಾಕ್ಸಾಫೀಸ್ ನಲ್ಲಿ ಬಿಡುಗಡೆಯಾದ ವರ್ಷ ಅಂದರೆ 2014 ರಲ್ಲಿ 741 ಕೋಟಿ ರೂಪಾಯಿ ಗಳಿಸಿತ್ತು. ಎಂದಿನಂತೆ ಅಮೀರ್ ಖಾನ್ ರವರ ಈ ಚಿತ್ರವು ಕೂಡ ಚೀನಾದಲ್ಲಿ ಭರ್ಜರಿಯಾಗಿ ಕಲೆಕ್ಷನ್ ಮಾಡಿತ್ತು.
ಭಜರಂಗಿ ಭಾಯಿಜಾನ್; ಸಲ್ಮಾನ್ ಖಾನ್ ರವರ ಕರಿಯರ್ ನ ಅತ್ಯಂತ ಜನಪ್ರಿಯ ಸಿನಿಮಾಗಳಲ್ಲಿ ಮೊದಲನೆ ಸ್ಥಾನದಲ್ಲಿ ಕಂಡುಬರುವ ಭಜರಂಗಿ ಭಾಯಿಜಾನ್ ಸಿನಿಮಾ ಮೊದಲಿಗೆ ಐನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ನಂತರ ಸಿನಿಮಾ ಚೀನಾದಲ್ಲಿ ಬಿಡುಗಡೆಯಾಗಿ 400 ಕೋಟಿ ರುಪಾಯಿ ಕಲೆಕ್ಷನ್ ಮಾಡಿತು. ಅಂದಹಾಗೆ ಟೋಟಲಿ ಸಿನಿಮಾ 900 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಆರ್ ಆರ್ ಆರ್; ರಾಜಮೌಳಿ ನಿರ್ದೇಶನದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ರಾಮಚರಣ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಈ ಸಿನಿಮಾ ಇದುವರೆಗೂ ಬಾಕ್ಸಾಫೀಸ್ ನಲ್ಲಿ 1150ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈಗಾಗಲೇ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಕೂಡ ಪ್ರಸಾರವನ್ನು ಕಾಣುತ್ತಿದೆ.
ಕೆಜಿಎಫ್ ಚಾಪ್ಟರ್ 2; ಇದೇ ಏಪ್ರಿಲ್ 14ರಂದು ವಿಶ್ವಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಇದುವರೆಗೂ 1230 ಕೋಟಿ ರೂಪಾಯಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತಿದ್ದು ಇನ್ನು ಕೂಡ ಬಾಕ್ಸಾಫೀಸ್ ನಲ್ಲಿ ಕಲೆಕ್ಷನ್ ಮುಂದುವರೆದಿದೆ.
ಬಾಹುಬಲಿ 2; ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರಗಳ ಪಟ್ಟಿಯಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರ ಎರಡನೇ ಸ್ಥಾನದಲ್ಲಿದೆ. ಜಾಗತಿಕವಾಗಿ 1810 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಬಾಹುಬಲಿ2 ಚಿತ್ರ ಕೇವಲ ನಮ್ಮ ಭಾರತ ದೇಶದಲ್ಲೇ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.
ದಂಗಲ್; ಫೋಗಟ್ ಸಹೋದರಿಯರ ವೇದಜೀವನ ಆಧಾರಿತ ಕಥೆ ಆಗಿರುವ ದಂಗಲ್ ಸಿನಿಮಾ ಜಾಗತಿಕವಾಗಿ ಬರೋಬ್ಬರಿ 2024 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಮೀರ್ ಖಾನ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದ ಬಹುತೇಕ ಕಲೆಕ್ಷನ್ ಹರಿದು ಬಂದಿದ್ದು ಚೀನಾ ದೇಶದಿಂದಲೇ ಎಂದರೆ ತಪ್ಪಾಗಲಾರದು. ಇವಿಷ್ಟು ಸಿನಿಮಾಗಳಲ್ಲಿ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂಬುದನ್ನು ಕಾಮೆಂಟ್ ಮಾಡುವುದನ್ನು ಮಾತ್ರ ಮರೆಯಬೇಡಿ.