ಬಿಗ್ ನ್ಯೂಸ್: ಬಾಹುಬಲಿ 2 ಹಾಗೂ ಆರ್ ಆರ್ ಆರ್ ಚಿತ್ರಗಳ ಮತ್ತೊಂದು ದಾಖಲೆಯನ್ನು ಕುಟ್ಟಿ ಕುಟ್ಟಿ ಪುಡಿ ಮಾಡಿದ ಕೆಜಿಎಫ್-2. ಯಾವ ದಾಖಲೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮೆಲ್ಲರ ಕನ್ನಡದ ಹೆಮ್ಮೆಯ ಸಿನಿಮಾ ಆಗಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸಿ ಕನ್ನಡ ಚಿತ್ರರಂಗದ ಹಿರಿಮೆಯನ್ನು ಬಾನೆತ್ತರಕ್ಕೆ ಪಸರಿಸುವಂತೆ ಮಾಡಿದೆ. ಕೇವಲ ಕನ್ನಡ ಚಿತ್ರರಂಗದ ದಾಖಲೆಗಳನ್ನು ಮಾತ್ರವಲ್ಲದೆ ಜಾಗತಿಕವಾಗಿ ಭಾರತೀಯ ಚಿತ್ರರಂಗದ ಹಲವಾರು ದಾಖಲೆಗಳನ್ನು ಕೂಡ ಮೈಲಿಗಲ್ಲನ್ನಾಗಿ ನೆಟ್ಟಿ ಬಂದಿದೆ.
ಹೌದು ಗೆಳೆಯರೇ ಕೆಜಿಎಫ್ ಚಾಪ್ಟರ್ 2 ಚಿತ್ರ ಕೇವಲ ಕನ್ನಡ ಚಿತ್ರರಂಗದ ಮೈಲಿಗಲ್ಲನ್ನು ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಎಲ್ಲಾ ದೊಡ್ಡ ದೊಡ್ಡ ಚಿತ್ರಗಳ ದಾಖಲೆಯನ್ನು ಹಿಂದಿಕ್ಕಿ ತನ್ನದೇ ಆದಂತಹ ಹೊಸ ದಾಖಲೆಯನ್ನು ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಬರೆದಿದೆ. ಬಿಡುಗಡೆಯಾಗಿ ಇಷ್ಟು ದಿನಗಳಾದರೂ ಕೂಡ ಈಗಲೂ ದಾಖಲೆಗಳನ್ನು ನಿರ್ಮಿಸುತ್ತಿರುವುದು ಕೆಜಿಎಫ್ ಚಾಪ್ಟರ್ 2 ಚಿತ್ರದ ಜನಪ್ರಿಯತೆಗೆ ಸಾಕ್ಷಿ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಕೇಳಿ ಬಂದು ಸುದ್ದಿಯ ಪ್ರಕಾರ ಭಾರತೀಯ ಚಿತ್ರರಂಗದ ಹೆಮ್ಮೆಯ ಚಿತ್ರಗಳಾಗಿರುವ ಬಾಹುಬಲಿ2 ಹಾಗೂ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಆರ್ ಆರ್ ಆರ್ ಸಿನಿಮಾದ ದಾಖಲೆಗಳನ್ನು ಕೂಡ ಹಿಂದಿಕ್ಕಿದೆ ಎಂಬುದಾಗಿ ತಿಳಿದುಬಂದಿದೆ.
ಹೌದು ಗೆಳೆಯರೇ ಬುಕ್ ಮೈ ಶೋ ನಲ್ಲಿ ಟಿಕೆಟ್ ಸೇಲ್ ವಿಚಾರದಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಬಾಹುಬಲಿ ಹಾಗೂ ಆರ್ ಆರ್ ಆರ್ ಚಿತ್ರಗಳ ದಾಖಲೆಯನ್ನು ಹಿಂದಿಕ್ಕಿದೆ. ಈ ಸಾಲಿನಲ್ಲಿ ಆರ್ ಆರ್ ಆರ್ ಚಿತ್ರ ಬುಕ್ ಮೈ ಶೋನಲ್ಲಿ 13.4 ಮಿಲಿಯನ್ ಟಿಕೇಟನ್ನು ಸೇಲ್ ಮಾಡಿದ್ದರೆ ಬಾಹುಬಲಿ 2 ಚಿತ್ರ 16 ಮಿಲಿಯನ್ ಟಿಕೆಟನ್ನು ಮಾರಾಟ ಮಾಡಿದೆ ಇನ್ನು ಮೊದಲನೇ ಸ್ಥಾನದಲ್ಲಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ 17.1 ಮಿಲಿಯನ್ ಟಿಕೆಟ್ ಅನ್ನು ಸೇಲ್ ಮಾಡುವ ಮೂಲಕ ಬುಕ್ ಮೈ ಶೋ ನಲ್ಲಿ ಅತ್ಯಂತ ಹೆಚ್ಚು ಟಿಕೆಟನ್ನು ಮಾರಾಟ ಮಾಡಿದ ಭಾರತೀಯ ಚಿತ್ರ ಎನ್ನುವ ಖ್ಯಾತಿಗೆ ಒಳಗಾಗಿದೆ. ಇದು ನಿಜಕ್ಕೂ ಕೂಡ ಕನ್ನಡಿಗರು ಹೆಮ್ಮೆ ಪಡುವಂತಹ ವಿಷಯ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.