ಡಾನ್ಸ್ ಕರ್ನಾಟಕ ಡಾನ್ಸ್ ನಲ್ಲಿ ಊಹಿಸದ ಟ್ವಿಸ್ಟ್. ಗೆದ್ದವರಿಗೆ ಅಶ್ವಿನಿ ರವರ ಕಡೆಯಿಂದ ಮತ್ತೊಂದು ವಿಶೇಷ ಉಡುಗೊರೆ. ಏನು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಲರ್ಸ್ ಕನ್ನಡ ವಾಹಿನಿ ಅತ್ಯಂತ ವಿಶೇಷವಾದ ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರಲ್ಲಿ ಕಿರುತೆರೆ ವಾಹಿನಿಗಳಲ್ಲಿ ಸದಾ ಮುಂದಿರುತ್ತದೆ ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಸದ್ಯಕ್ಕೆ ನಾವು ಮಾತನಾಡಲು ಹೊರಟಿರುವುದು ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಕುರಿತಂತೆ. ಡ್ಯಾನ್ಸಿಂಗ್ ಪ್ರತಿಭೆಗಳ ಪ್ರತಿಭೆಯ ಅನಾವರಣದ ಮುಖ್ಯವೇದಿಕೆಯ ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮ ಆಗಿದೆ ಎಂದರೆ ತಪ್ಪಾಗಲಾರದು‌. ಈ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿ ಪ್ರಸಾರ ಮುಂದುವರಿಸಿಕೊಂಡು ಬಂದಿದ್ದು ಇದೇ ಮೇ 29ರಂದು ಫಿನಾಲೆ ಕಾರ್ಯಕ್ರಮವನ್ನು ಹೊಂದಿದೆ.

ಈಗಾಗಲೇ ಈ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಪ್ರತಿಯೊಬ್ಬ ಪ್ರೇಕ್ಷಕರಲ್ಲಿ ಕೂಡ ಹೆಚ್ಚಾಗಿದೆ. ಇನ್ನು ಮೇ 29ರಂದು ನಡೆಯುವ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಫಿನಾಲೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಆಗಮಿಸಲಿದ್ದಾರೆ. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೂ ಹಾಗೂ ಕಲರ್ಸ್ ಕನ್ನಡ ವಾಹಿನಿ ಮೊದಲಿನಿಂದಲೂ ಕೂಡ ಉತ್ತಮವಾದ ನಂಟಿದೆ ಎಂದು ಹೇಳಬಹುದಾಗಿದೆ. ಕಲರ್ಸ್ ಕನ್ನಡ ವಾಹಿನಿ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಫಿನಾಲೆಗೆ ಮುಖ್ಯ ಅತಿಥಿಯಾಗಿ ಬರಲು ಹೇಳಿದಾಗ ಅಶ್ವಿನಿ ಅವರು ಕೂಡ ಕೂಡಲೇ ಒಪ್ಪಿಕೊಳ್ಳುತ್ತಾರೆ.

ತಮ್ಮ ಪತಿಯಂತೆ ಉತ್ತಮವಾದ ಕಾರ್ಯ ನಡೆಯುತ್ತಿರಬೇಕಾದರೆ ಪ್ರೋತ್ಸಾಹಿಸಲು ಅಶ್ವಿನಿ ಅವರು ಕೂಡ ಸದಾ ಮುಂದಿರುತ್ತಾರೆ. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಇಲ್ಲದೆ ಈ ಕಾರ್ಯಕ್ರಮಕ್ಕೆ ಬರುತ್ತಿರುವುದು ಅವರಿಗೂ ಸೇರಿದಂತೆ ಅಭಿಮಾನಿಗಳಿಗೂ ಕೂಡ ಭಾವನಾತ್ಮಕವಾಗಿ ದುಃಖವನ್ನು ನೀಡುವಂತಹ ಸನ್ನಿವೇಶವಾಗಿದೆ. ಅಪ್ಪು ಇಲ್ಲದಿದ್ದರೂ ಕೂಡ ಅವರ ಒಳ್ಳೆಯ ಕಾರ್ಯವನ್ನು ಅಶ್ವಿನಿ ಅವರು ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ವಿಜೇತರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಕಲರ್ಸ್ ಕನ್ನಡ ವಾಹಿನಿಯಿಂದ ಪುನೀತ್ ರಾಜಕುಮಾರ್ ಅವರ ಪ್ರೀತಿಯಲ್ಲಿ ಕಾಣಿಸುವಂತಹ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದು ಎಂಬುವುದು ತಿಳಿದು ಬಂದಿದೆ. ಈ ಕಾರ್ಯಕ್ರಮವನ್ನು ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Get real time updates directly on you device, subscribe now.