ಎಲ್ಲವೂ ಚೆನ್ನಾಗಿದೆ ಅಂದುಕೊಳ್ಳುವಾಗ ಮತ್ತೊಬ್ಬ ಕಿರುತೆರೆ ನಟಿ ಆತ್ಮಹತ್ಯೆ, ನೇಣು ಬಿಗಿದುಕೊಳ್ಳಲು ಕಾರಣವೇನಾಗಿತ್ತು ಗೊತ್ತೇ?? ಯಾವ ಧಾರಾವಾಹಿಯಲ್ಲಿ ನಟನೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ನಟ-ನಟಿ ಹಾಗೂ ಮಾಡೆಲ್ ಗಳು ತಮ್ಮ ಜೀವನವನ್ನು ಆತುರದಿಂದ ಕಳೆದುಕೊಳ್ಳುತ್ತಿರುವ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಈಗ ಆ ಸುದ್ದಿಗೆ ಬೆಂಗಾಳಿ ಮೂಲದ ಮತ್ತೊಬ್ಬ ನಟಿ ಸೇರ್ಪಡೆಯಾಗಿದ್ದಾರೆ ಎಂಬುದು ತಿಳಿದುಬಂದಿದೆ. ಯುವ ಬೆಂಗಾಳಿ ನಟಿಯಾಗಿರುವ ಬಿದಿಶಾ ಡೇ ಮುಜುಂದಾರ್ ರವರು ತಮ್ಮದೇ ಅಪಾರ್ಟ್ಮೆಂಟ್ನಲ್ಲಿ ನೇಣು ಹಾಕಿಕೊಂಡಿರುವ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾರೆ. ನಿಜಕ್ಕೂ ಕೂಡ ಇದು ಮನೋರಂಜನೆ ಕ್ಷೇತ್ರವನ್ನು ಶೋಕ ಸಾಗರಕ್ಕೆ ತಳ್ಳಿದೆ ಎಂದು ಹೇಳಬಹುದಾಗಿದೆ.
ಬಿದಿಶಾ ರವರು ಬೆಂಗಾಳಿ ಮಾಡೆಲ್ ಆಗಿದ್ದು ಮಾಡೆಲ್ ವೃತ್ತಿಯಲ್ಲಿ ಜನಪ್ರಿಯ ಆಗುವ ಮೂಲಕ ನಂತರ ಸಿನಿಮಾರಂಗದಲ್ಲಿ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ಕೂಡ ಕಾಣಿಸಿಕೊಂಡು ಸಾಕಷ್ಟು ಜನಪ್ರಿಯತೆಯನ್ನು ಹಾಗೂ ಅಭಿಮಾನಿಗಳನ್ನು ಸಂಪಾದಿಸಿದರು. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಇಷ್ಟು ದೊಡ್ಡ ಮಟ್ಟದ ಯಶಸ್ವಿ ಮನೋರಂಜನಾ ಕ್ಷೇತ್ರದ ಕರಿಯರ್ ಅನ್ನು ಬಿದಿಶಾ ಹೊಂದಿದ್ದರೂ ಆದರೂ ಕೂಡ ವೈಯಕ್ತಿಕ ಜೀವನ ಎನ್ನುವುದು ಅಷ್ಟೊಂದು ಚೆನ್ನಾಗಿರಲಿಲ್ಲ ಎಂಬುದಾಗಿ ಬಲ್ಲವರು ಹೇಳುತ್ತಾರೆ. ಕಳೆದ ನಾಲ್ಕು ದಿನಗಳಿಂದ ನಟಿ ಬಿದಿಶಾ ಮನೆಯಿಂದ ಹೊರ ಬಂದಿರಲಿಲ್ಲ. ಈ ಕಾರಣಕ್ಕಾಗಿಯೇ ಅನುಮಾನಗೊಂಡ ಮನೆಯವರು ಪೋಲಿಸ್ ಸ್ಟೇಷನ್ ಗೆ ದೂರನ್ನು ನೀಡಿದ್ದಾರೆ.
ಮನೆಯ ಬಾಗಿಲನ್ನು ಒಡೆದು ಒಳಗೆ ಹೋದಾಗ ಬಿದಿಶಾ ನೇಣು ಹಾಕ್ಕೊಂಡ ಪರಿಸ್ಥಿತಿಯಲ್ಲಿ ಕಾಣ ಸಿಕ್ಕಿದ್ದಾರೆ. ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಇನ್ನೂ ಬರಬೇಕಾಗಿದೆಯಷ್ಟೇ. ಕೆಲ ಸುದ್ದಿಗಳ ಪ್ರಕಾರ ಇವರು ರಿಲೇಷನ್ಶಿಪ್ ನಲ್ಲಿ ಇದ್ದರಂತೆ. ಇವರಿಬ್ಬರ ನಡುವೆ ಆಗಾಗ ಜಗಳ ವಾಗುತ್ತಿದ್ದ ಹಿನ್ನೆಲೆಯಲ್ಲಿ ಇವರು ಸಾಕಷ್ಟು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ ಇವರ ಪೋಷಕರು ಹೇಳುವಂತೆ ಇದು ಆತ್ಮಹತ್ಯೆಯಲ್ಲ ಬದಲಾಗಿ ಇಲ್ಲಿ ಯಾರು ನಮ್ಮ ಮಗಳ ಜೀವಕ್ಕೆ ಆಪತ್ತನ್ನು ತಂದಿದ್ದಾರೆ ಎಂಬುದಾಗಿ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಸಮಗ್ರ ತನಿಖೆ ನಡೆದ ಮೇಲಷ್ಟೇ ಈ ಕುರಿತಂತೆ ನಿಜಾಂಶ ಹೊರಬರಬೇಕಾಗಿದೆ. ಈ ವಿಚಾರದ ಕುರಿತು ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.