ಹರಡುತ್ತಿರುವ ಸಾಕಷ್ಟು ಗಾಳಿ ಸುದ್ದಿಗಳ ನಡುವೆ ಕೊನೆಗೂ ಅಧಿಕೃತವಾಗಿ ಆರ್ಸಿಬಿ ಗೆ ವಾಪಸ್ಸು ಬರುವ ಕುರಿತು ಎಬಿಡಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಅಗ್ರಪಂಕ್ತಿಯಲ್ಲಿ ಕಾಣಸಿಗುತ್ತದೆ. ಇನ್ನು ಆರ್ಸಿಬಿ ತಂಡದ ಜನಪ್ರಿಯತೆಗೆ ಕೆಲವು ಆಟಗಾರರು ಕೂಡ ಕಾರಣರಾಗಿದ್ದಾರೆ. ಅವರಲ್ಲಿ ಪ್ರಮುಖವಾಗಿ ಎಬಿ ಡಿವಿಲಿಯರ್ಸ್ ರವರು ಕೂಡ ಒಬ್ಬರು ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಸೌತ್ ಆಫ್ರಿಕಾ ಮೂಲದ ಆಟಗಾರರಾಗಿರುವ ಎಬಿ ಡಿವಿಲಿಯರ್ಸ್ ರವರು ಐಪಿಎಲ್ ಆರಂಭದಲ್ಲಿ ಡೆಲ್ಲಿ ತಂಡದ ಪರವಾಗಿ ಆಡುತ್ತಿದ್ದರು. 2011 ರಿಂದ ಪ್ರಾರಂಭಿಸಿ ಕಳೆದ ಸೀಸನ್ ವರೆಗೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.
ಐಪಿಎಲ್ ನಲ್ಲಿ ಕೂಡ 184 ಪಂದ್ಯಗಳಿಂದ 5162 ರನ್ಗಳನ್ನು ಬಾರಿಸುವ ಮೂಲಕ 6ನೇ ಅತ್ಯಧಿಕ ರನ್ ಸ್ಕೋರರ್ ಹಾಗೂ ಎರಡನೇ ಅಧಿಕಾರ ಗಳಿಸಿರುವ ವಿದೇಶಿ ಆಟಗಾರ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಎಬಿ ಡಿವಿಲಿಯರ್ಸ್ ರವರು ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಆಡಿದ್ದರು. ಇದಾದ ನಂತರ ಎಬಿ ಡಿವಿಲಿಯರ್ಸ್ ರವರು ಕ್ರಿಕೆಟ್ ಜೀವನಕ್ಕೆ ಸಂಪೂರ್ಣ ವಿದಾಯವನ್ನು ಹೇಳುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಎಬಿ ಡಿವಿಲಿಯರ್ಸ್ ರವರು ಮುಂದಿನ ಬಾರಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿ ಮತ್ತೆ ಮರಳಿ ಬರಲಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿ ದೊರೆತಿದೆ.
ಹೌದು ಗೆಳೆಯರೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಎಬಿ ಡಿವಿಲಿಯರ್ಸ್ ರವರು ಮುಂದಿನ ವರ್ಷದಿಂದ ನನ್ನ ಎರಡನೇ ಮನೆಯಾಗಿರುವ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಆರ್ಸಿಬಿ ತಂಡದ ಅಭಿಮಾನಿಗಳ ಜೊತೆಗೆ ಐಪಿಎಲ್ ಅನ್ನು ಆನಂದಿಸಲು ನಾನು ಕಾಯುತ್ತಿದ್ದೇನೆ ಎಂಬುದಾಗಿ ಹಂಚಿಕೊಂಡಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ದವರು ಕೂಡ ಇಲ್ಲಿ ಮಾತನಾಡಿದ್ದಾರೆ. ಆದರೆ ಈಗಾಗಲೇ ಆರ್ಸಿಬಿಯ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿರುವ ಎಬಿ ಡಿವಿಲಿಯರ್ಸ್ ರವರು ಮತ್ತೆ ಕ್ರಿಕೆಟಿಗನಾಗಿ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಾರೆಯೋ ಅಥವಾ ಮೆಂಟರ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಮಿಸ್ಟರ್ 360° ಮುಂದಿನ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಯಾವ ಭಾಗವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆಯನ್ನು ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.