ನೇರವಾಗಿ ಮೆಗಾಸ್ಟಾರ್ ಚಿರಂಜೀವಿ ಸಿನೆಮಾವನ್ನು ತಿರಸ್ಕಾರ ಮಾಡಿದ ಸಾಯಿ ಪಲ್ಲವಿ, ಕಾರಣ ಕೇಳಿ ನಿಜಕ್ಕೂ ನೀವು ಹೀಗೆ ಮಾಡಬಾರದಿತ್ತು ಎಂದ ಫ್ಯಾನ್ಸ್. ಯಾಕೆ ಗೊತ್ತೇ?

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮೆಗಾಸ್ಟಾರ್ ಚಿರಂಜೀವಿ ರವರು ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದ ಹೆಸರನ್ನು ಸಂಪಾದಿಸಿದವರು. ಅವರ ಜನಪ್ರಿಯತೆಯನ್ನುವುದು ಪ್ರತಿಯೊಂದು ಚಿತ್ರರಂಗದಲ್ಲಿ ಕೂಡ ಇದೆ. ಇನ್ನು ಇಂದಿನ ಮಾತನಾಡಲು ಹೊರಟಿರುವುದು ಇವರ ಕುರಿತಂತೆಯೇ ಆದರೆ ಇದರಲ್ಲಿ ಮತ್ತೊಬ್ಬ ನಟಿ ಬರುತ್ತಾರೆ. ಹೌದು ಗೆಳೆಯರೇ ಅವರಿಗೆ ಯಾರು ಅಲ್ಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು ಹೊಂದಿರುವ ನಟಿ ಸಾಯಿ ಪಲ್ಲವಿ ಅವರ ಕುರಿತಂತೆ.

ಹೌದು ಗೆಳೆಯರೇ ಸಾಯಿ ಪಲ್ಲವಿ ಅವರು ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದನ್ನು ನೀರು ಕುಡಿದಷ್ಟೇ ಸುಲಭವಾಗಿ ನಿರ್ವಹಿಸಬಲ್ಲಂತಹ ನಟನಾ ಚಾತುರ್ಯತೆಯನ್ನು ಹೊಂದಿರುವ ಪ್ರತಿಭಾನ್ವಿತ ಕಲಾವಿದ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಕಮರ್ಷಿಯಲ್ ಸಿನಿಮಾ ಆಗಿರಲಿ ನಟನೆ ಆಧಾರಿತ ಸಿನಿಮಾ ಆಗಿರಲಿ ಇಲ್ಲವೇ ಮಹಿಳಾ ಪ್ರಾಧಾನ್ಯತೆ ಹೊಂದಿರುವ ಸಿನಿಮಾ ಆಗಿದ್ದರೂ ಕೂಡ ಸಾಯಿಪಲ್ಲವಿ ಅವರನ್ನು ಮೀರಿಸುವಂತಹ ನಟಿ ಮತ್ತೊಬ್ಬರಿಲ್ಲ ಎನ್ನುವಷ್ಟರಮಟ್ಟಿಗೆ ನಟನೆಯಲ್ಲಿ ಅಗಾಧವಾದ ಜ್ಞಾನವನ್ನು ಸಂಪಾದಿಸಿದ್ದಾರೆ ಎಂದು ಹೇಳಬಹುದಾಗಿದೆ. ಮಲಯಾಳಂ ಚಿತ್ರರಂಗದಿಂದ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿ ಇಂದು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಕೂಡ ತಮ್ಮದೇ ಆದಂತಹ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇನ್ನು ಇವರು ಮೆಗಾಸ್ಟಾರ್ ಚಿರಂಜೀವಿ ನಟನೆಯ ಭೋಲೇಶಂಕರ್ ಸಿನಿಮಾದಲ್ಲಿ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಅವಕಾಶವನ್ನು ತಿರಸ್ಕರಿಸಿದ್ದರು. ಲವ್ ಸ್ಟೋರಿ ಸಿನಿಮಾದ ಸಮಾರಂಭದ ವೇದಿಕೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ರವರು ಇದರ ಕುರಿತಂತೆ ಮಾತನಾಡುತ್ತಾ ನೀವು ತಿರಸ್ಕರಿಸಿದ್ದು ಒಳ್ಳೆಯದೇ ಆಯಿತು ಯಾಕೆಂದರೆ ನೀವು ನನಗೆ ನಾಯಕಿಯಾಗಿ ಕಾಣಿಸಬೇಕು ತಂಗಿಯಾಗಿ ಅಲ್ಲ ಎಂಬುದಾಗಿ ಹೇಳಿದ್ದರು. ಇನ್ನು ಈ ಚಿತ್ರವನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ನಟಿ ಸಾಯಿ ಪಲ್ಲವಿ ಅವರು ಈ ಸಿನಿಮಾ ರೀಮೇಕ್ ಸಿನಿಮಾ ಆಗಿದೆ ಇಲ್ಲದಿದ್ದರೆ ನಾನು ನಿಮ್ಮ ಜೊತೆಗೆ ನಟಿಸುವ ಅವಕಾಶವನ್ನು ಯಾವತ್ತೂ ಮಿಸ್ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಹೇಳಿದ್ದಾರೆ, ಆದರೆ ಅಭಿಮಾನಿಗಳು ಚಿರು ಸಿನಿಮಾ ರಿಮೇಕ್ ಆಗಿದ್ದರು ಚೆನ್ನಾಗಿ ಮೂಡಿ ಬರುತ್ತದೆ ಎಂದ ಸಮಜಾಯಿಸಿ ಮಾಡಿಕೊಂಡಿದ್ದಾರೆ. ಈ ಮೂಲಕ ತಾವು ಯಾವುದೇ ರಿಮೇಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದಾಗಿ ಪರೋಕ್ಷವಾಗಿ ನಟಿ ಸಾಯಿ ಪಲ್ಲವಿ ಅವರು ಹೇಳಿದ್ದಾರೆ ಎಂದು ಹೇಳಬಹುದಾಗಿದೆ.

Get real time updates directly on you device, subscribe now.