ಒಮ್ಮೆಲೇ ಫಾರ್ಮ್ ಗೆ ಬಂದು ದಾಖಲೆ ಸೃಷ್ಟಿ ಮಾಡಿದ ವಿರಾಟ್ ಕೊಹ್ಲಿ, ಬರೆದ ಹೊಸ ಐತಿಹಾಸಿಕ ದಾಖಲೆ ಯಾವುದು ಗೊತ್ತೇ?? ಕಿಂಗ್ ಯಾವತ್ತಿದ್ರೂ ಕಿಂಗ್ ಹೇ ಅಂದ್ರು ಫ್ಯಾನ್ಸ್.
ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ನಡೆದಿರುವಂತಹ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿ ಈ ಟೂರ್ನಿಯ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಗೆದ್ದು ಬೀಗಿದೆ. ಹೌದು ಗೆಳೆಯರೇ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಗುಜರಾತ್ ಟೈಟನ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲೇ ಬೇಕಾಗಿತ್ತು. ಇನ್ನು ಗುಜರಾತ್ ಟೈಟನ್ಸ್ ತಂಡಕ್ಕೆ ಈ ಪಂದ್ಯ ಕೇವಲ ಔಪಚಾರಿಕತೆ ಆಗಿತ್ತು. ಆರಂಭಿಕ ಆ’ಘಾತಕ್ಕೆ ಸಿಲುಕಿದ್ದ ಗುಜರಾತ್ ಟೈಟನ್ಸ್ ತಂಡ ಹಾರ್ದಿಕ್ ಪಾಂಡ್ಯ ರವರ 62 ರನ್ನುಗಳ ನೆರವಿನಿಂದ 5 ವಿಕೆಟಿಗೆ 168 ರನ್ನುಗಳನ್ನು ಬಾರಿಸಲು ಸಾಧ್ಯವಾಯಿತು.
ಈ ಮೊತ್ತವನ್ನು ಬೆನ್ನತ್ತಿದ ಆರ್ಸಿಬಿಗೆ ನೆರವಾಗಿ ನಿಂತಿದ್ದು ಕಿಂಗ್ ವಿರಾಟ್ ಕೊಹ್ಲಿ. ಹೌದು ಗೆಳೆಯರೇ ಈ ಐಪಿಎಲ್ ನ ಪ್ರಾರಂಭದಿಂದಲೂ ಕೂಡ ಕಳಪೆ ಫಾರ್ಮ್ ನಲ್ಲಿ ಇದ್ದ ವಿರಾಟ್ ಕೊಹ್ಲಿ ರವರು ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 73 ರನ್ನುಗಳನ್ನು ಬಾರಿಸುವ ಮೂಲಕ ಮುರಿಯದ ಮೊದಲ ವಿಕೆಟಿಗೆ ಡುಪ್ಲೆಸಿಸ್ ಅವರೊಂದಿಗೆ 115 ರನ್ನುಗಳ ಆರಂಭಿಕ ಜೊತೆಯಾಟವನ್ನು ಆಡಿದ್ದಾರೆ. ಈ ಮೂಲಕ ಅತ್ಯಂತ ಸಂದಿಗ್ಧ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ ಟೈಟನ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಯಿತು. ಇನ್ನು ಈ ಪಂದ್ಯದಲ್ಲಿ 73 ರನ್ನುಗಳನ್ನು ಬಾರಿಸುವ ಮೂಲಕ ವಿರಾಟ್ ಕೊಹ್ಲಿ ರವರು ಒಂದು ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.
ಹೌದು ಗೆಳೆಯರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಎಂದರೆ ಒಂದೇ ತಂಡದ ಪರವಾಗಿ 7000 ರನ್ನುಗಳನ್ನು ಬಾರಿಸಿರುವ ಏಕೈಕ ಬ್ಯಾಟ್ಸ್ ಮ್ಯಾನ್ ಆಗಿ ಐಪಿಎಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ತನ್ನನ್ನು ಯಾಕೆ ರನ್ ಮಷೀನ್ ಎಂಬುದಾಗಿ ಕರೆಯುತ್ತಾರೆ ಎಂಬುದನ್ನು ಕೂಡ ಮತ್ತೊಮ್ಮೆ ವಿರಾಟ್ ಕೊಹ್ಲಿ ಸಾಬೀತುಪಡಿಸಿದ್ದಾರೆ. ಇದರಲ್ಲಿ 6600 ರನ್ನುಗಳನ್ನು ಐಪಿಎಲ್ ನಲ್ಲಿ ಬಾರಿಸಿದ್ದರೆ ಉಳಿದ ರನ್ನುಗಳನ್ನು ಚಾಂಪಿಯನ್ಸ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಪರವಾಗಿ ವಿರಾಟ್ ಕೊಹ್ಲಿ ರವರು ಬಾರಿಸಿದ್ದಾರೆ. ಕಳಪೆ ಫಾರ್ಮ್ ನಲ್ಲಿ ಇದ್ದ ವಿರಾಟ್ ಕೊಹ್ಲಿ ರವರನ್ನು ಟೀಕಿಸುತ್ತಿದ್ದ ವರನ್ನು ಈ ಮೂಲಕ ವಿರಾಟ್ ಕೊಹ್ಲಿ ರವರು ಸುಮ್ಮನಾಗಿಸಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ ಆರ್ಸಿಬಿ ಮುಂದಿನ ಹಂತಕ್ಕೆ ತೇರ್ಗಡೆ ಆಗಲಿದೆ.