ಮೇಘನ್ ರಾಜ್ ರವರ ಹುಟ್ಟುಹಬ್ಬಕ್ಕೆ ದುಬಾರಿ ಕಾರ್ ಉಡುಗೊರೆ ನೀಡಿದ ಧ್ರುವ ಸರ್ಜಾ, ಇದರ ಬೆಲೆ ಎಷ್ಟು ಅಂತೇ ಗೊತ್ತೇ?? ಯಪ್ಪಾ ಇಷ್ಟೊಂದಾ??

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚಿರುಸರ್ಜ ರವರನ್ನು ನಾವು ಕಳೆದುಕೊಂಡು ಕೆಲವು ಸಮಯಗಳೇ ಕಳೆದಿವೆ. ಇನ್ನು ಮೇಘನಾರಾಜ್ ರವರು ಕೂಡ ಚಿರು ಸರ್ಜಾ ಇಲ್ಲದೇ ತಮ್ಮ ಮಗ ಜೂನಿಯರ್ ಚಿರು ಸರ್ಜಾ ರವರೊಂದಿಗೆ ಜೀವನವನ್ನು ಕಳೆಯುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಅಂದರೆ ಮೇ ಮೂರರಂದು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೂಡ ತಮ್ಮ ಪತಿ ಆಗಿರುವ ಚಿರುಸರ್ಜ ರವರನ್ನು ಭಾವುಕರಾಗಿ ನೆನೆಸಿಕೊಂಡಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ರವರು ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದರು. ಹೀಗಾಗಿ ಈ ಬರ್ತಡೆ ಸೆಲೆಬ್ರೇಶನ್ ಸಂದರ್ಭದಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಿಂದಲೂ ಕೂಡ ಭಾಗವಹಿಸಿದ್ದರು ಇಷ್ಟು ಮಾತ್ರವಲ್ಲದೆ ಸ್ನೇಹಿತರು ಹಾಗೂ ಕುಟುಂಬಸ್ಥರು ಕೂಡ ಮೇಘನರಾಜ್ ರವರ ಬರ್ತಡೆ ಯಲ್ಲಿ ಭಾಗವಹಿಸಿದ್ದರು ಆಗುವವರು ಸಂತೋಷದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ತಮ್ಮ ಅತ್ತಿಗೆ ಆಗಿರುವ ಮೇಘನರಾಜ್ ರವರಿಗೆ ನೀಡಿರುವ ಉಡುಗೊರೆಯನ್ನು ನೋಡಿ ಎಲ್ಲರೂ ಕೂಡ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಈ ಉಡುಗೊರೆಯ ವಿಚಾರವನ್ನು ತಿಳಿಯುವುದಕ್ಕೂ ಮೊದಲು ಮೇಘನಾ ರಾಜ್ ರವರ ದಾಂಪತ್ಯ ಜೀವನದ ಕುರಿತಂತೆ ಹೇಳುವುದಾದರೆ ಚಿರು ಸರ್ಜಾ ರವರನ್ನು ಪ್ರೀತಿಸಿ ಅಂತರ್ಜಾತಿಯ ವಿವಾಹವಾಗಿದ್ದರು. ಎರಡು ವರ್ಷಗಳ ಕಾಲ ದಾಂಪತ್ಯ ಜೀವನದಲ್ಲಿ ಸುಖ ಸಂತೋಷವನ್ನು ಅನುಭವಿಸಿದ ಇಬ್ಬರು ದಂಪತಿಗಳು ಅನಿರೀಕ್ಷಿತವಾಗಿ ಇಬ್ಬರು ಕೂಡ ದೂರವಾಗುತ್ತಾರೆ ಎಂಬುದಾಗಿ ಯಾರು ಕೂಡ ಅಂದುಕೊಂಡಿರಲಿಲ್ಲ. ಹೌದು ಗೆಳೆಯರೇ ಇವರಿಬ್ಬರ ಜೋಡಿಯನ್ನು ನೋಡಿ ಪರಮಾತ್ಮನಿಗೆ ಅಸೂಯೆ ಮೂಡಿರಬೇಕೋ ಏನೋ ಚಿರು ಸರ್ಜಾ ರವರು ಅಕಾಲಿಕವಾಗಿ ಹೃದಯಾ’ಘಾತದಿಂದ ಮರಣವನ್ನು ಹೊಂದುತ್ತಾರೆ.

ಚಿರು ಸರ್ಜಾ ರವರನ್ನು ಕಳೆದುಕೊಂಡ ಒಂದು ವರ್ಷಗಳವರೆಗೆ ಮೇಘನಾರಾಜ್ ರವರು ಯಾವುದೇ ಕಾರ್ಯಕ್ರಮಗಳಲ್ಲಾಗಲಿ ಸಿನಿಮಾಗಳಲ್ಲಾಗಲಿ ಕಾಣಿಸಿಕೊಳ್ಳಲು ಹೋಗಲಿಲ್ಲ. ನಂತರ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಹಾಗೂ ಕೆಲವೊಂದು ಸಿನಿಮಾಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಮನೋರಂಜನ ಕ್ಷೇತ್ರಕ್ಕೆ ಮೇಘನಾರಾಜ್ ರವರು ಮತ್ತೊಮ್ಮೆ ಕಂಬ್ಯಾಕ್ ಮಾಡಿದ್ದು ಕೇವಲ ತಮ್ಮ ಮಗ ರಾಯನ್ ಗಾಗಿ ಮಾತ್ರ ಎಂದು ಹೇಳಿದರೆ ತಪ್ಪಾಗಲಾರದು.

ಇನ್ನು ಇದೇ ತಿಂಗಳು ಮೇಘನಾರಾಜ್ ರವರು ಮೂರನೇ ತಾರೀಕಿನಂದು ತಮ್ಮ 39 ನೇ ವರ್ಷದ ಜನ್ಮದಿನಾಚರಣೆಯನ್ನು ತಮ್ಮ ಪ್ರೀತಿಪಾತ್ರರ ಜೊತೆಗೆ ಆಚರಿಸಿಕೊಂಡಿದ್ದಾರೆ. ಈ ಕುರಿತಂತೆ ಫೋಟೋ ಹಾಗೂ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಸಂದರ್ಭದಲ್ಲಿ ಮೈದುನನ ಆಗಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಕೂಡ ಅತ್ತಿಗೆಗೆ ಕರೆಮಾಡಿ ಜನುಮ ದಿನದ ಶುಭಾಶಯಗಳನ್ನು ಮನಃಪೂರ್ವಕವಾಗಿ ಕೋರಿದ್ದಾರೆ.

ಹೌದು ಗೆಳೆಯರೆ ತಮ್ಮ ಅತ್ತಿಗೆಯ ಬೆನ್ನೆಲುಬಾಗಿ ಮೊದಲಿನಿಂದಲೂ ಕೂಡ ಕಾಣಿಸಿಕೊಳ್ಳುತ್ತಿರುವ ಧ್ರುವ ಸರ್ಜಾ ರವರು ಅತ್ತಿಗೆಯ 39ನೇ ಜನುಮದಿನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮೂರು ಕೋಟಿ ರೂಪಾಯಿ ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೇವಲ ಈ ಬಾರಿ ಮಾತ್ರವಲ್ಲದೆ ಕಳೆದ ಬಾರಿ ಜೂನಿಯರ್ ಚಿರುಸರ್ಜ ತೊಟ್ಟಿಲಿಗೆ ಹಾಕುವ ಸಂದರ್ಭದಲ್ಲಿ ಕೂಡ ಬೆಳ್ಳಿಯ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದನ್ನು ಕೂಡ ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ನಿಜವಾಗಲೂ ಕೂಡ ತಮ್ಮ ಅತ್ತಿಗೆಯನ್ನು 2ನೇ ತಾಯಿಯ ರೀತಿಯಲ್ಲಿ ಕಾಣುತ್ತಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ ರವರ ಈ ಕಾರ್ಯಕ್ಕೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.